ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗಳಿಕೆ ಮಾಡಿದ ಗಂಧದ ಗುಡಿ ಚಿತ್ರ, ಮೊದಲ ದಿನದ ಗಳಿಕೆ ಎಷ್ಟು

ಬಾಕ್ಸ್ ಆಫೀಸ್ ನಲ್ಲಿ ಗಂಧದಗುಡಿ ಭರ್ಜರಿ ಕಲೆಕ್ಷನ್! ಚಂದನವನದಲ್ಲಿ ಸದ್ಯಕ್ಕೆ ಅಪ್ಪು ಅವರ ಗಂಧದಗುಡಿಯದ್ದೇ ಗುಂಗು. ಹೌದು ಕರ್ನಾಟಕ ರತ್ನ. ಡಾ. ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ಅಪ್ಪು ಅವರು ನಮ್ಮಿಂದ ದೈಹಿಕವಾಗಿ ದೂರ ಆಗಿದ್ದಾರೆ. ಆದರೆ ಅವರು ನಟಿಸಿದ ಸಿನಿಮಾಗಳು, ಅವರು ಮಾಡಿದ ಸಾಮಾಜಿಕ ಸೇವೆಗಳು, ಅವರ ಆದರ್ಶ ಬದುಕು ಅವರನ್ನ ಎಂದೆಂದಿಗೂ ಜೀವಂತವಾಗಿ ಇರುವಂತೆ ಮಾಡಿದೆ. ಅವರು ನಮ್ಮನ್ನ ಬಿಟ್ಟು ಹೋಗಿಲ್ಲ. ಈಗಲೂ ನಮ್ಮ ನಡುವೆಯೇ ಇದ್ದಾರೆ ಅನ್ನೋ ಮಟ್ಟಿಗೇ ನಾಡಿನಾದ್ಯಂತ ಅವರನ್ನ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸ್ಮರಿಸುವಂತಹ ಕೆಲಸ ಮಾಡುತ್ತಿದ್ದಾರೆ ಅವರ ಅಸಂಖ್ಯಾತ ಅಭಿಮಾನಿಗಳು.

ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ನಿನ್ನೆಯಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅಕ್ಟೋಬರ್ 28 ರಂದು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಗಂಧದಗುಡಿ ಸಿನಿಮಾ ರಿಲೀಸ್ ಆಗಿದೆ‌. ಗಂಧದಗುಡಿ ಸಿನಿಮಾ ಇದೊಂದು ಡಾಕ್ಯುಮೆಂಟರಿ ಸಿನಿಮಾ. ಇದರಲ್ಲಿ ನಮ್ಮ ಕರುನಾಡಿನ ಅರಣ್ಯ ಸಂಪತ್ತನ್ನ, ವನ್ಯ ಜೀವಿಗಳು, ಪ್ರಕೃತಿ ಸೊಬಗನ್ನ ತೋರಿಸಲಾಗಿದೆ. ಅಪ್ಪು ಅವರು ಈ ಚಿತ್ರದಲ್ಲಿ ಪವರ್ ಸ್ಟಾರ್ ಆಗಿ ಅಲ್ಲದೆ ಸಹಜವಾಗಿ ಪುನೀತ್ ರಾಜ್ ಕುಮಾರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ನಾಡಿನನುದ್ದಕ್ಕೂ ನಿರ್ದೇಶಕ ಅಮೋಘವರ್ಷ ಅವರೊಟ್ಟಿಗೆ ಪ್ರಯಾಣ ಮಾಡಿ ಕರ್ನಾಟಕದಲ್ಲಿ ಇರುವಂತಹ ಅದ್ಭುತ ತಾಣಗಳನ್ನ ಸೆರೆಯಿಡಯಲಾಗಿದೆ.

ಗಂಧದಗುಡಿ ಸಿನಿಮಾ ಟ್ರೇಲರ್ ಮೂಲಕ ಅಪಾರ ನಿರೀಕ್ಷೆ ಹುಟ್ಟು ಹಾಕಿತ್ತು. ಅದಕ್ಕಿಂತ ಮಿಗಿಲಾಗಿ ಗಂಧದಗುಡಿ ಸಿನಿಮಾ ಅಪ್ಪು ಅವರ ಕೊನೆಯ ಸಿನಿಮಾ. ಹಾಗಾಗಿ ತಮ್ಮ ನೆಚ್ಚಿನ ನಟನನ್ನ ಬೆಳ್ಳಿಪರದೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಮತ್ತೊಮ್ಮೆ ಬರೋದಿಲ್ಲ ಅನ್ನೋ ಕಾರಣ ನಾಡಿನಾದ್ಯಂತ ಎಲ್ಲಾ ಕಡೆ ಥಿಯೇಟರ್ ನಲ್ಲಿ ಗಂಧದಗುಡಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೂಲಗಳ ಪ್ರಕಾರ ಗಂಧದಗುಡಿ ಸಿನಿಮಾ ಮೊದಲನೇ ದಿನವೇ ಬರೋಬ್ಬರಿ ಐದು ಕೋಟಿ ಗಳಿಕೆ ಮಾಡಿದೆಯಂತೆ. ವಾರಾಂತ್ಯದ ಕಾರಣ ಶನಿವಾರ, ಭಾನುವಾರ ಎಲ್ಲಾ ಕಡೆ ಹೌಸ್ ಫುಲ್ ಆಗುವ ಸಾಧ್ಯತೆ ಇದ್ದು ಬಾಕ್ಸ್ ಆಫೀಸ್ ನಲ್ಲಿ ಗಂಧದಗುಡಿ ಸಿನಿಮಾ ಕಮಾಲ್ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

Leave a Reply

%d bloggers like this: