ಬಾಕ್ಸ್ ಆಫೀಸ್ ಕಲೆಕ್ಷನ್ ಇರಲಿ ಐಎಂಡಿಬಿ ರೇಟಿಂಗ್ ನಲ್ಲಿಯೂ ಕೂಡ ಹೀನಾಯ ಅಂಕ ಪಡೆದ ಲೈಗರ್ ಸಿನಿಮಾ

ಲೈಗರ್ ಸಿನಿಮಾ ಪಡೆದ ಅಂಕ ತಿಳಿದ್ರೇ ನೀವು ನಿಜಕ್ಕೂ ಕೂಡ ಅಚ್ಚರಿ ವ್ಯಕ್ತಪಡಿಸುತ್ತೀರಿ. ಲೈಗರ್ ಸಿನಿಮಾದ ಸೋಲು ನಟ ವಿಜಯ್ ದೇವರಕೊಂಡ ಅವರ ವೃತ್ತಿ ಜೀವನದ ಅತ್ಯಂತ ಕಳಪೆ ಪ್ರತಿಕ್ರಿಯೆ ಪಡೆದ ಸಿನಿಮಾವಾಗಿದೆ ಎಂದು ಟಾಲಿವುಡ್ ಮಾತನಾಡಿಕೊಳ್ಳುತ್ತಿದೆ. ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಲೈಗರ್ ಸಿನಿಮಾ ಇದೇ ಆಗಸ್ಟ್ ತಿಂಗಳ 25ರಂದು ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಿತ್ತು. ಈ ಚಿತ್ರ ಮೊದಲನೇ ದಿನವೇ ಬರೋಬ್ಬರಿ ಮೂವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಲೈಗರ್ ಚಿತ್ರದ ಮೇಕಿಂಗ್ ಬಗ್ಗೆ, ವಿಜಯ್ ದೇವರಕೊಂಡ ಅವರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಕೂಡ ಗಟ್ಟಿಯಿಲ್ಲದ ಕಥೆ ಮತ್ತು ಅತಿರೇಕ ಎನಿಸುವಂತಹ ದೃಶ್ಯ ಸನ್ನಿವೇಶಗಳು ಜೊತೆಗೆ ನಟನೆಯ ಗಂಧಗಾಳಿ ಗೊತ್ತಿಲ್ಲದಂತೆ ನಟಿಸಿರೋ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಬಗ್ಗೆ ಪ್ರೇಕ್ಷಕಪ್ರಭು ನಿರಾಸೆಯ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದರು.

ಲೈಗರ್ ಚಿತ್ರ ಪುರಿ ಜಗನ್ನಾಥ್ ಅವರ ನಿರ್ದೇಶನದ ಸಿನಿಮಾನಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಯಾಕಂದ್ರೆ ಪುರಿ ಜಗನ್ನಾಥ್ ಸಿನಿಮಾಗಳು ಪೈಸಾ ವಸೂಲ್ ಸಿನಿಮಾಗಳು. ಯಾವುದೇ ಕಾರಣಕ್ಕೂ ಪುರಿ ಜಗನ್ನಾಥ್ ಅವರ ಸಿನಿಮಾಗಳು ಕೊಟ್ಟ ಹಣಕ್ಕೆ ಮೋಸ ಮಾಡುವುದಿಲ್ಲ ಎಂಬುದು ಸಿನಿ ಪ್ರೇಕ್ಷಕರ ಅಭಿಪ್ರಾಯ. ಆದರೆ ಲೈಗರ್ ಸಿನಿಮಾ ನೋಡಿದ ಪ್ರೇಕ್ಷಕರು ನಿರೀಕ್ಷೆ ಮಾಡದಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ನೂರು ಕೋಟಿ ಬಜೆಟ್ನ ಸಿನಿಮಾ ಇದೀಗ ಹಾಕಿದ ಬಂಡವಾಳವನ್ನ ಕೂಡ ಹಿಂತೆಗೆಯುವುದಕ್ಕೆ ಹರ ಸಾಹಸ ಪಡುತ್ತಿದೆ. ಸಾಮಾನ್ಯವಾಗಿ ಭಾರತೀಯ ಸಿನಿ ಪ್ರೇಕ್ಷಕರು ಯಾವುದೇ ಸಿನಿಮಾ ನೋಡುವ ಮುನ್ನ ಗೂಗಲ್ ಅಥವಾ ಇನ್ನಿತರ ಮೂಲಗಳಿಂದ ಆಯಾ ಸಿನಿಮಾದ ರೇಟಿಂಗ್ ನೋಡುತ್ತಾರೆ.

ಅದೇ ರೀತಿರಾಗಿ ಐಎಂಡಿಬಿ ರೇಟೀಂಗ್ ನಲ್ಲಿ ಲೈಗರ್ ಸಿನಿಮಾ ಕೇವಲ 1.5 ರೇಟಿಂಗ್ ಪಡೆದುಕೊಂಡಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಓಟ್ ಮಾಡಿದ್ದು, ಅದರಲ್ಲಿ 1.6 ರೇಟಿಂಗ್ ಮಾತ್ರ ಕಂಡು ಬಂದಿದೆ. ಇದರಿಂದ ಲೈಗರ್ ಚಿತ್ರದ ಕಲೆಕ್ಷನ್ ಗೆ ಭಾರಿ ಪರಿಣಾಮ ಬೀರಿದೆ. ಇನ್ನು ಅಮೀರ್ ಖಾನ್ ಅವರ ಚಿತ್ರಕ್ಕೂ ಕೂಡ ಐಎಂಡಿಬಿ ರೇಟಿಂಗ್ ನಲ್ಲಿ ಲಕ್ಷಕ್ಕೂ ಅಧಿಕ ಮಂದಿ ಓಟ್ ಮಾಡಿದ್ದು ಕೇವಲ 5ಅಂಕಗಳನ್ನ ಮಾತ್ರ ಪಡೆದುಕೊಂಡಿದೆ. ಇನ್ನು ಕನ್ನಡದ ಕೆಜಿಎಫ್ ಚಾಪ್ಟರ್2 ಸಿನಿಮಾ 10 ಅಂಕಕ್ಕೆ 8.4 ಅಂಕ ಪಡೆದುಕೊಂಡಿತ್ತು. ರಾಜಮೌಳಿ ಅವರ ಆರ್.ಆರ್.ಆರ್ ಸಿನಿಮಾ 8ಅಂಕ ಪಡೆದುಕೊಂಡು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದವು. ಒಟ್ಟಾರೆಯಾಗಿ ವಿಜಯ್ ದೇವರ ಕೊಂಡ ಅವರ ಸಿನಿ ವೃತ್ತಿಯಲ್ಲಿ ಲೈಗರ್ ಸಿನಿಮಾ ಹೀನಾಯ ಸೋಲು ಕಂಡಿದೆ ಎಂದು ಹೇಳಲಾಗ್ತಿದೆ.

Leave a Reply

%d bloggers like this: