ಬರೋಬ್ಬರಿ 19 ಲಕ್ಷ ರೂ. ಮೌಲ್ಯದ ಬೈಕ್ ಖರೀದಿ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್ ನಟ..!

ಬರೋಬ್ಬರಿ 19 ಲಕ್ಷ ರೂ. ಮೌಲ್ಯದ ಬೈಕ್ ಖರೀದಿ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್ ನಟ..! ಇತ್ತೀಚೆಗೆ ಚಂದನವನದ ಅನೇಕ ನಟ-ನಟಿಯರು ದುಬಾರಿ ಕಾರ್ ಗಳನ್ನು ಖರೀದಿ ಮಾಡಿ ಸುದ್ದಿಯಾಗುತ್ತಿದ್ದಾರೆ. ಆದರೆ ಇಲ್ಲೊಬ್ಬ ನಟ ಕಾರ್ ಬೆಲೆಯಷ್ಟೇ ಬೈಕ್ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಹೌದು ಈ ನಟ ಬೇರಾರು ಅಲ್ಲ. ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಅಂದರೆ ಅದು ಚಾಲೇಂಜಿಂಗ್ ಸ್ಟಾರ್ ದರ್ಶನ್. ನಟ ದರ್ಶನ್ ಅವರ ಸಿನಿಮಾಗಳು ಅಂದರೆ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ. ತನ್ನ ಅಭಿಮಾನಿಗಳನ್ನು ಸೆಲೆಬ್ರಿಟಿಗಳು, ವಿಐಪಿಗಳು ಎಂದು ಕರೆಯುವ ದರ್ಶನ್ ಅವರನ್ನ ಕಂಡರೆ ಅವರ ಅಭಿಮಾನಿಳಿಗೂ ಕೂಡ ಅಪಾರ ಪ್ರೀತಿ.

ದರ್ಶನ್ ಸಿನಿಮಾ ಶೂಟಿಂಗ್ ಇಲ್ಲದಿದ್ದಾಗ ಬಿಡುವಿನ ವೇಳೆಯಲ್ಲಿ ಟ್ರಕ್ಕಿಂಗ್ ಹೋಗುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಪೋಷಣೆ , ಸಫಾರಿ ಹೋಗುವುದು, ಫೋಟೋಗ್ರಫಿ ಹೀಗೆ ಅನೇಕ ಒಳ್ಳೊಳ್ಳೆ ಅಭಿರುಚಿಯ ಹವ್ಯಾಸಗಳಿವೆ.ಜೊತೆಗೆ ಅವರಿಗೆ ‌ವಿದೇಶಗಳ ಅತ್ಯಾಧುನಿಕ ಐಷಾರಾಮಿ ಕಾರ್ ಗಳೆಂದರೆ ಬಹಳ ಅಚ್ಚು ಮೆಚ್ಚು. ದರ್ಶನ್ ಅವರ ಬಳಿ ಐದು ಕೋಟಿ ಬೆಲೆಯ ಎರಡು ದುಬಾರಿ ಐಷಾರಾಮಿ ಕಾರ್ ಅಡ್ವಾನ್ಸ್ಡ್ ಕಾರ್ ಬಳಿ ಜಾಗ್ವಾರ್,ಪೋರ್ಶೇ ಆಡಿ ಕ್ಯೂ 7,ಐ 20 ರೇಂಜ್ ರೋವರ್ ಫಾರ್ಚೂನರ್ ಬೆಂಝ್,ಮಿನಿ ಕೂಪರ್ ಹಮ್ಮರ್,ಲಂಬೋರ್ಗಾನಿ ಕಾರ್ ಇವೆ.

ಇವುಗಳ ಜೊತೆಗೆ ಹದಿನಾರು ಲಕ್ಷ ಮೌಲ್ಯದ ಸುಜುಕಿ ಹಯಬುಸ, ಸುಜುಕಿ ಇನ್ಟ್ರು ಡರ್ ಎಂ 1800 ಆರ್ ಸೇರಿದಂತೆ ಇಪ್ಪತ್ತು ಲಕ್ಷ ಬೆಲೆಯ ಹಾರ್ಲೇ ಡೇವಿಡ್ಸನ್ ಹೆರಿಟೇಜ್, ದುಕಾಟಿ ಅಂತಹ ನಾಲ್ಕು ಐಷಾರಾಮಿ ಇಂಪೋರ್ಟೆಡ್ ಬೈಕ್ ಗಳು ಕೂಡ ಇವೆ. ಈ ಬೈಕ್ ಗಳ ಜೊತೆಗೆ ಇದೀಗ 19 ಲಕ್ಷ ರೂ ಬೆಲೆಯ ತ್ರಿಯಂಪ್ ರಾಕೆಟ್ 3 ಬೈಕ್ ಕೂಡ ಸೇರ್ಪಡೆಗೊಂಡಿದೆ. ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: