ಬಾಲಿವುಡ್ ಸ್ಮಾರ್ಟ್ ನಟ ತನ್ನ ಹೆಂಡತಿಯ ಎದೆಹಾಲನ್ನು ಕದ್ದು ಕುಡಿದರಂತೆ!

ಬಾಲಿವುಡ್ ಸ್ಮಾರ್ಟ್ ನಟ ತನ್ನ ಹೆಂಡತಿಯ ಎದೆಹಾಲನ್ನು ಕದ್ದು ಕುಡಿದರಂತೆ…! ಬಾಲಿವುಡ್ ಅನೇಕ ಗಾಸಿಪ್ ಗಳಿಗೆ ಸುದ್ದಿ ಆಗುತ್ತಿರುತ್ತದೆ.ಸ್ಟಾರ್ ನಟ-ನಟಿಯರು ಗುಟ್ಟಾಗಿ ಡೇಟಿಂಗ್ ನಡೆಸುತ್ತಿರುವ ಬಗ್ಗೆ ಅಥವಾ ಇನ್ಯಾರೋ ನಟಿ ಮತ್ತೊಬ್ಬ ಸ್ಟಾರ್ ನಟನೊಂದಿಗೆ ರಿಲೇಶನ್ಶಿಪ್ ಹೊಂದಿದ್ದಾರೆ ಎಂಬಂತಹ ಅನೇಕ ವಿಚಾರಗಳು ಬಿ-ಟೌನ್ ನಲ್ಲಿ ಸುದ್ದಿಯಾಗುತ್ತಲೇ ಇರುತ್ತವೆ. ಅಂತೆಯೇ ಇತ್ತೀಚೆಗೆ ತನ್ನ ಹೆಂಡತಿಯ ಬಿಕಿನಿ ಡ್ರೆಸ್ ನಲ್ಲಿದ್ದಾಗ ಫೋಟೋ ತೆಗೆದು ಸುದ್ದಿಯಾಗಿದ್ದ ಬಾಲಿವುಡ್ ಸ್ಟಾರ್ ನಟ ಆಯುಷ್ಮಾನ್ ಖುರಾನಾ ಇದೀಗ ಮತ್ತೊಂದು ಕುತೂಹಲಕಾರಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ.ನಟ ಆಯುಷ್ಮಾನ್ ಖುರಾನಾ ಮತ್ತು ಲೇಖಕಿ ತಾಹಿರಾ ಕಶ್ಯಪ್ ಬಾಲಿವುಡ್ ನಲ್ಲಿ ಮುದ್ದಾದ ಜೋಡಿಗಳಲ್ಲಿ ಒಂದಾಗಿದೆ.ಅದೇನಪ್ಪಾ ಅಂತೀರಾ ಇತ್ತೀಚೆಗೆ ನಟ ಆಯುಷ್ಮನ್ ಖುರಾನಾ ಪತ್ನಿ ಲೇಖಕಿ ಮತ್ತು ಕಿರು ಸಿನಿಮಾ ನಿರ್ದೇಶಕಿ ತಾಹಿರಾ ಕಶ್ಯಪ್ ತಾವು ಬರೆದಿರುವ ನೂತನ ಪುಸ್ತಕ ದಿ ಸೆವೆನ್ ಸಿನ್ಸ್ ಆಫ್ ಬೀಯಿಂಗ್ ಎ ಮದರ್ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ.

ಈ ಪುಸ್ತಕವು ಮೊದಲ ಬಾರಿ ತಾಯಿಯಾಗುವ ಮಹಿಳೆಯರು ಮತ್ತು ಸಮಾಜದ ಇತರೆ ಮಹಿಳೆಯರು ಸ್ವೀಕರಿಸುವ ನಿರ್ಧಾರದ ಕುರಿತು ಬರೆದುದ್ದಾಗಿದೆ.ಈ ಪುಸ್ತಕದಲ್ಲಿ ತಾಹಿರಾ ಕಶ್ಯಪ್ ತಮ್ಮ ಪತಿ ನಟ ಆಯುಷ್ಮಾನ್ ಖುರಾನಾ ಮಾಡಿರುವ ಒಂದಷ್ಟು ತರಲೆ ವಿಷಯಗಳನ್ನು ಕೂಡ ದಾಖಲಿಸಿದ್ದಾರಂತೆ.ಇನ್ನು ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲೇಖಕಿ ತಾಹಿರಾ ಕಶ್ಯಪ್ ಒಂದಷ್ಟು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಾಹಿರಾ ಕಶ್ಯಪ್ ಮತ್ತು ಆಯುಷ್ಮಾನ್ ಖುರಾನಾ ತಮ್ಮ ಎರಡನೇ ಹನಿಮೂನ್ ಗೆ ಬ್ಯಾಂಕ್ಯಾಂಕ್ ಗೆ ಹೋಗಲು ಪ್ಲ್ಯಾನ್ ಮಾಡಿಕೊಂಡಿದ್ದರಂತೆ.ಮತ್ತೆ ವಾಪಸ್ ಬರುವುದು ಮೂರು ದಿನಗಳಾಗುವುದರಿಂದ ತಮ್ಮ ಮೊದಲನೇ ಮಗು ವಿರಾಜ್ ವೀರ್ ಗಾಗಿ ತನ್ನ ಎದೆಹಾಲನ್ನ ಬಾಟಲಿಯಲ್ಲಿ ತುಂಬಿಸಿಟ್ಟಿದ್ದರಂತೆ ತಾಹಿರಾ.ಆಗ ಏಳು ತಿಂಗಳ ಮಗುವಾಗಿದ್ದ ವಿರಾಜ್ ವೀರ್ ನನ್ನ ತಾಹಿರಾ ಕಶ್ಯಪ್ ತಮ್ಮ ಪೋಷಕರ ಬಳಿ ಬಿಟ್ಟು ಹೋಗುತ್ತಿದ್ದರಂತೆ.

ಜೊತೆಗೆ ತನ್ನ ಎದೆಹಾಲನ್ನ ಒಂದಷ್ಟು ಬಾಟಲಿಗೆ ತುಂಬಿಸಿಟ್ಟು ವಿರಾಜ್ ಗೆ ನೀಡುವಂತೆ ಕೊಟ್ಟಿದ್ದರಂತೆ.ದಂಪತಿಗಳಿಬ್ಬರು ವಿಮಾನ ನಿಲ್ದಾಣಕ್ಕೆ ಹೋಗುವ ಸಮಯಕ್ಕೆ ತಾಹಿರಾ ಗೆ ಮನೆಯಿಂದ ಅವರ ಪೋಷಕರು ಫೋನ್ ಮಾಡಿ ನೀನು ತುಂಬಿಸಿಟ್ಟಿದ್ದ ಹಾಲಿನ ಬಾಟಲಿ ಖಾಲಿ ಆಗಿವೆಯಲ್ಲ ಎಂದು ಹೇಳಿದರಂತೆ.ಆಗ ತಾಹಿರಾ ಕಶ್ಯಪ್ ತನ್ನ ಪತಿ ಆಯುಷ್ಮಾನ್ ಗೆ ಈ ವಿಚಾರ ತಿಳಿಸುತ್ತಿದ್ದಂತೆ ಮುಗುಳ್ನಗುತ್ತಾ ನಿನ್ನ ಎದೆ ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇದ್ದಾವೆ ನಾನು ಆ ಹಾಲಿಗೆ ಪ್ರೋಟಿನ್ ಶೇಕ್ ಮಿಕ್ಸ್ ಮಾಡಿಕೊಂಡು ಕುಡಿದುಬಿಟ್ಟೆ ಎಂದು ತಿಳಿಸುತ್ತಾರಂತೆ.ತಮ್ಮ ಎರಡನೇ ಹನಿಮೂನ್ ಸಂಧರ್ಭದಲ್ಲಿ ನಡೆದ ಈ ಸಂಗತಿಯನ್ನು ಕೂಡ ಲೇಖಕಿ ತಾಹಿರಾ ಕಶ್ಯಪ್ ತಮ್ಮ ದಿ ಸೆವೆನ್ ಸಿನ್ಸ್ ಆಫ್ ಬೀಯಿಂಗ್ ಎ ಮದರ್ ಎಂಬ ಈ ಪುಸ್ತಕದಲ್ಲಿ ತನಗೆ ಗೊತ್ತಾಗದೆ ತನ್ನ ಎದೆಹಾಲನ್ನು ಕದ್ದು ಕುಡಿದಿರುವ ಬಗ್ಗೆ ದಾಖಲು ಮಾಡಿದ್ದಾರಂತೆ.ಇದೀಗ ಈ ಸುದ್ದಿ ಬಿ-ಟೌನ್ ಭಾರಿ ಸುದ್ದಿಯಾಗಿದ್ದು,ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Leave a Reply

%d bloggers like this: