ಬಾಲಿವುಡ್ಡಿಗೆ ಮತ್ತೆ ಬಂತು ಜೋಶ್, ಬಿಡುಗಡೆಗೆ ನಾಲ್ಕು ದಿನ ಇರುವಾಗಲೇ ಮುಂಗಡ ಬುಕ್ಕಿಂಗ್ ಇಂದ ಬ್ರಹ್ಮಾಸ್ತ್ರ ಚಿತ್ರ ಗಳಿಸಿರುವ ಹಣ ಎಷ್ಟು ಗೊತ್ತೇ

ಬಾಲಿವುಡ್ ಸಕ್ಸಸ್ ಫುಲ್ ಖ್ಯಾತ ನಟಿ ಆಲಿಯಾ ಭಟ್ ಅವರ ನಟನೆಯ ಪ್ಯಾನ್ ಇಂಡಿಯಾ ಬ್ರಹ್ಮಾಸ್ತ್ರ ಸಿನಿಮಾ ರಿಲೀಸ್ಗೂ ಮುನ್ನ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿಯೇ ಕೋಟಿ ಕೋಟಿ ಲೂಟಿ ಮಾಡಿದೆ. ಹೌದು ಬ್ರಹ್ಮಾಸ್ತ್ರ ಸಿನಿಮಾ ಭಾರಿ ಬಜೆಟ್ ನಲ್ಲಿ ತಯಾರಾಗಿರೋ ಸಿನಿಮಾ. ಇತ್ತೀಚೆಗೆ ಬಾಲಿವುಡ್ನ ಯಾವ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿಲ್ಲ. ಹಾಕಿದ ಬಂಡವಾಳ ಹಿಂತೆಗೆಯಲು ಕೂಡ ಹಿಂದಿ ಸಿನಿಮಾಗಳು ಹರ ಸಾಹಸ ಪಡುತ್ತಿವೆ. ಆದ ಕಾರಣ ಬ್ರಹ್ಮಾಸ್ತ್ರ ಸಿನಿಮಾ ಗೆಲುವು ಸಾಧಿಸುವುದು ಅನಿವಾರ್ಯವೇ ಆಗ್ಬಿಟ್ಟಿದೆ. ಹಾಗಾಗಿ ಇಡೀ ಚಿತ್ರತಂಡ ಶತಾಯಗತಾಯ ಬ್ರಹ್ಮಾಸ್ತ್ರ ಸಿನಿಮಾವನ್ನ ಗೆಲ್ಲಿಸಲೇಬೇಕು ಎಂದು ದೇಶಾದ್ಯಂತ ಭರ್ಜರಿ ಪ್ರಚಾರ ಮಾಡುತ್ತಿದೆ. ಅದರಂತೆ ಇತ್ತೀಚೆಗೆ ಬ್ರಹ್ಮಾಸ್ತ್ರ ಸಿನಿಮಾ ತಂಡ ಹೈದರಾಬಾದ್ ಗೆ ಬಂದಿದೆ.

ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಇವೆಂಟ್ ಅನ್ನ ಕಾರಣಾಂತರಗಳಿಂದ ರದ್ದು ಪಡಿಸಲಾಯಿತು. ಇನ್ನು ತದ ನಂತರ ನಟ ಎನ್.ಟಿ.ಆರ್ ಮತ್ತು ನಿರ್ದೇಶಕ ರಾಜಮೌಳಿ ಅವರು ಮಾಧ್ಯಮ ಸುದ್ದಿಗೋಷ್ಠಿ ಕರೆದು ಬ್ರಹ್ಮಾಸ್ತ್ರ ಸಿನಿಮಾದ ಸಂಪೂರ್ಣ ಮಾಹಿತಿ ನೀಡಿದರು. ಬ್ರಹ್ಮಾಸ್ತ್ರ ಸಿನಿಮಾದ ಬಗ್ಗೆ ಮಾಹಿತಿ ನೀಡೋದಕ್ಕೆ ರಾಜಮೌಳಿ ಅವರು ಯಾಕಾಗಿ ಬಂದಿದ್ರು ಅಂದ್ರೆ ಬ್ರಹ್ಮಾಸ್ತ್ರ ಸಿನಿಮಾವನ್ನ ತೆಲುಗಿನಲ್ಲಿ ನಿರ್ದೇಶಕ ರಾಜಮೌಳಿ ಅವರೇ ಪ್ರೆಸೆಂಟ್ ಮಾಡುತ್ತಿದ್ದಾರೆ. ಇನ್ನು ನಟಿ ಆಲಿಯಾ ಭಟ್ ಬ್ರಹ್ಮಾಸ್ತ್ರ ಸಿನಿಮಾದ ತೆಲುಗು ಅವತರಣಿಕೆಯ ಕುಂಕುಮಲ ನುವ್ವೆ ಚೆರಗಾ ಪ್ರಿಯಾ ಹಾಡನ್ನ ತೆಲುಗು ಭಾಷೆಯಲ್ಲಿಯೇ ಸರಾಗವಾಗಿ ಹಾಡಿದನ್ನ ಕೇಳಿ ತೆಲುಗು ಪ್ರೇಕ್ಷಕರು ಫುಲ್ ಫಿಧಾ ಆಗಿದ್ದಾರೆ. ಈ ಹಾಡನ್ನ ತೆಲುಗಿನಲ್ಲಿ ಖ್ಯಾತ ಗಾಯಕ ಸಿದ್ ಶ್ರೀರಾಮ್ ಅವರು ಹಾಡಿದ್ದಾರೆ.

ಈಗಾಗಲೇ ಬ್ರಹ್ಮಾಸ್ತ್ರ ಸಿನಿಮಾದ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. ಸೋಷಿಯೋ ಫ್ಯಾಂಟಸಿ ಸಿನಿಮಾ ಆಗಿರೋ ಬ್ರಹ್ಮಾಸ್ತ್ರ ಸಿನಿಮಾ ಮೂರು ಭಾಗಗಳಾಗಿ ಬರಲಿದೆ. ಈಗ ಇದೇ ಸೆಪ್ಟೆಂಬರ್ 9ಕ್ಕೆ ಬ್ರಹ್ಮಾಸ್ತ್ರ ಭಾಗ1 ಶಿವ ದೇಶಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ತೆರೆ ಹಂಚಿಕೊಂಡಿದ್ದಾರೆ. ದಂಪತಿಗಳಿಬ್ಬರು ಚಿತ್ರದಲ್ಲಿ ಯಾವ ರೀತಿ ಕಾಣಿಸಿಕೊಂಡಿರಬಹುದು ಅನ್ನೋದು ಅವರ ಅಭಿಮಾನಿಗಳಿಗೆ ಕುತೂಹಲವಿದೆ. ನಟಿ ಆಲಿಯಾ ಭಟ್ ಅವರು ತಾವು ಗರ್ಭಿಣಿ ಆಗಿದ್ರೂ ಕೂಡ ಸಿನಿಮಾ ಶೂಟಿಂಗ್ ಮತ್ತು ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರೋದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಈ ಬ್ರಹ್ಮಾಸ್ತ್ರ ಸಿನಿಮಾ ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಸ್ಟಾರ್ ಸ್ಟೂಡಿಯೋಸ್, ಧರ್ಮ ಪ್ರೊಡಕ್ಷನ್, ಪ್ರೈಮ್ ಫೋಕಸ್ ಅಂಡ್ ಸ್ಟಾರ್ಲೈಟ್ ಪಿಕ್ಚರ್ಸ್ ಜಂಟಿಯಾಗಿ ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕರಣ್ ಜೋಹರ್, ಅಯನ್ ಮುಖರ್ಜಿ, ಅಪೂರ್ವ ಮೆಹ್ತಾ ಮತ್ತು ನಮಿತ್ ಮಲ್ಹೋತ್ರಾ ಜೊತೆಗೆ ನಾಯಕ ನಟ ರಣ್ ಬೀರ್ ಕಪೂರ್ ಕೂಡ ಬಂಡವಾಳ ಹೂಡಿದ್ದಾರೆ. ನಾಯಕನಾಗಿ ರಣ್ ಬೀರ್ ಕಪೂರ್, ನಾಯಕಿಯಾಗಿ ಆಲಿಯಾ ಭಟ್ ನಟಿಸಿದ್ದು, ಪ್ರಮುಖ ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು ಈಗಾಗಲೇ ಮೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆಯಂತೆ. ಬರೋಬ್ಬರಿ 400 ಕೋಟಿ ವೆಚ್ಚದ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೇಗೆ ಸೌಂಡ್ ಮಾಡಲಿದೆ ಅನ್ನೋದನ್ನ ಸೆಪ್ಟೆಂಬರ್9 ಸಿನಿಮಾ ರಿಲೀಸ್ ಆದ ನಂತರ ತಿಳಿಯಬಹುದಾಗಿದೆ.