ಬಾಲಿವುಡ್ ಸ್ಟಾರ್ ನಟನ ದೊಡ್ಡ ಚಿತ್ರವನ್ನೇ ಹಿಂದಿಕ್ಕಿದ ವಿಕ್ರಾಂತ್ ರೋಣ ಚಿತ್ರ

ಬಾಲಿವುಡ್ ಸ್ಟಾರ್ ನಟರಾದ ರಣ್ ಬೀರ್ ಕಪೂರ್ ಮತ್ತು ಸಂಜಯ್ ದತ್ ಅಭಿನಯದ ಸಂಶೇರಾ ಚಿತ್ರದ ವಾರದ ಗಳಿಕೆಯನ್ನ ಒಂದೇ ದಿನದಲ್ಲಿ ಸೈಡ್ ಲೈನ್ ಮಾಡಿದ ಕಿಚ್ಚ ಸುದೀಪ್ ಅಭಿನಯದ ನಮ್ಮ ಕನ್ನಡದ ವಿಕ್ರಾಂತ್ ರೋಣ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರ ಹೊಮ್ಮಿದ ವಿಕ್ರಾಂತ್ ರೋಣ ಸಿನಿಮಾ ಕಳೆದ ಜುಲೈ 28ರಂದು ವರ್ಲ್ಡ್ ವೈಡ್ ಬರೋಬ್ಬರಿ 3500 ಥಿಯೇಟರ್ ಗಳಲ್ಲಿ ರಿಲೀಸ್ ಆಗಿತ್ತು. ವಿಕ್ರಾಂತ್ ರೋಣ ಸಿನಿಮಾ ಒಟ್ಟಾರೆಯಾಗಿ ಎಲ್ಲಾ ಸೆಂಟರ್ ಗಳಿಂದ ಒಂದೇ ದಿನ ಬರೋಬ್ಬರಿ ಮೂವತ್ತೈದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ವಿಕ್ರಾಂತ್ ರೋಣ ಸಿನಿಮಾ ಎರಡನೇ ದಿನ ಅಂದರೆ ಶುಕ್ರವಾರ 20 ಕೋಟಿ, ಶನಿವಾರ ಮತ್ತು ಭಾನುವಾರ ವೀಕೆಂಡ್ ನಲ್ಲಿ ಸರಿ ಸುಮಾರು 25 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ವಾರಾಂತ್ಯದ ವೇಳೆಗೆ ಬರೋಬ್ಬರಿ 80 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭರ್ಜರಿ ಅಗಿ ಪ್ರದರ್ಶನ ಕಾಣುತ್ತಿದೆ. ಆದರೆ ಇದೇ ಕಳೆದ ಜುಲೈ 22 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆದ ಬಾಲಿವುಡ್ ಸ್ಟಾರ್ ನಟ ರಣ್ ಬೀರ್ ಕಪೂರ್ ಅಭಿನಯದ ಬರೋಬ್ಬರಿ 150 ಕೋಟಿ ಬಿಗ್ ಬಜೆಟ್ ಸಿನಿಮಾ ಶಂಶೇರಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ರಣ್ ಬೀರ್ ಕಪೂರ್ ಅವರ ಶಂಶೇರಾ ಚಿತ್ರ ಮೊದಲ ದಿನದಲ್ಲಿ ಹನ್ನೆರಡು ಕೋಟಿ ಗಳಿಕೆ ಮಾಡಬಹುದು ಎಂದು ಅಂದಾಜಿಸಿದ್ದರು. ಆದರೆ ಶಂಶೇರಾ ಸಿನಿಮಾ ನಿರೀಕ್ಷೆ ಮಾಡಿದಷ್ಟು ಮೊತ್ತವನ್ನ ಕೂಡ ಗಳಿಕೆ ಮಾಡದೇ ನಿರಾಸೆ ಮೂಡಿಸಿದೆ.

ಆದರೆ ಕನ್ನಡದ ವಿಕ್ರಾಂತ್ ರೋಣ ಸಿನಿಮಾ 95 ಕೋಟಿ ಬಜೆಟ್ ನಲ್ಲಿ ತಯಾರಾಗಿ ವಾರಾಂತ್ಯದ ವೇಳೆಗೆ ಹೂಡಿದ ಬಂಡವಾಳವನ್ನ ವಾಪಸ್ ತೆಗೆದಿದೆ. ಈ ಮೂಲಕ ರಣ್ ಬೀರ್ ಕಪೂರ್ ಅವರ ಶಂಶೇರಾ ಚಿತ್ರದ ವಾರದ ಗಳಿಕೆಯನ್ನ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾ ಸೈಡ್ ನೈನ್ ಮಾಡಿದೆ. ವಿಕ್ರಾಂತ್ ರೋಣ ಸಿನಿಮಾವನ್ನ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಅವರು ಬಂಡವಾಳ ಹೂಡಿಕೆ ಮಾಡಿದ್ದರು‌. ಅದೇ ರೀತಿಯಾಗಿ ರಣ್ ಬೀರ್ ಕಪೂರ್ ಅವರ ಶಂಶೇರಾ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯಾ ಚೋಪ್ರಾ ಅವರು ನಿರ್ಮಾಣ ಮಾಡಿದ್ದರು. ಕರಣ್ ಮಲ್ಹೋತ್ರಾ ಅವರು ನಿರ್ದೇಶನ ಮಾಡಿರುವ ಈ ಶಂಶೇರಾ ಸಿನಿಮಾ ಇದೀಗ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಗೆ ತಕ್ಕಂತೆ ಕಲೆಕ್ಷನ್ ಮಾಡಿಲ್ಲ. ಈ ಬಹುಕೋಟಿ ವೆಚ್ಚದ ಸಿನಿಮಾದಲ್ಲಿ ಸಂಜಯ್ ದತ್, ವಾಣಿ ಕಪೂರ್, ರೊನೀತ್ ರಾಯ್, ಸೌರಭ್ ಶುಕ್ಲಾ ಮುಂತಾದವರು ನಟಿಸಿದ್ದಾರೆ.

Leave a Reply

%d bloggers like this: