ಬಾಲಿವುಡ್ ನತ್ತ ದಕ್ಷಿಣ ಭಾರತದ ಸ್ಟಾರ್ ನಟಿ

ಸೌತ್ ಸಿನಿ ರಂಗದ ನ್ಯಾಚುರಲ್ ಸ್ಟಾರ್ ಖ್ಯಾತಿಯ ನಟಿ ಸಾಯಿ ಪಲ್ಲವಿಯವರ ಹೊಸ ಅಪ್ ಡೇಟ್ ವೊಂದು ಸಿಕ್ಕಿದೆ. ಅದೂ ಕೂಡಾ ಬಾಲಿವುಡ್ ಗೆ ಹಾರುತ್ತಿದ್ದಾರಾ ಸಾಯಿ ಪಲ್ಲವಿ ಅನ್ನೋ ಮಾತು. ಹೌದು ನಟಿ ಸಾಯಿ ಪಲ್ಲವಿ ಅಂದಾಕ್ಷಣ ಅವರ ಸಹಜ ನಟನೆ, ಸ್ಮೈಲ್, ಡ್ಯಾನ್ಸ್ ಅದೆಲ್ಲಕ್ಕಿಂತ ಹೆಚ್ಚಾಗಿ ಅವರ ವ್ಯಕ್ತಿತ್ವದ ಮೂಲಕವೇ ಭಾರಿ ಹೆಸರುವಾಸಿಯಾದವರು. ಧನುಷ್ ನಟನೆಯ ಸಿನಿಮಾದಲ್ಲಿ ರೌಡಿ ಬೇಬಿಯಾಗಿ ಸಖತ್ ಫೇಮ್ ಗಳಿಸಿಕೊಂಡ ಸಾಯಿ ಪಲ್ಲವಿ ಅವರು ಇತ್ತೀಚೆಗೆ ಸುದ್ದಿ ಆಗಿದ್ದು ಅಂದರೆ ಅದು ಕಾಶ್ಮೀರಿ ಪಂಡಿತರ ಮೇಲೆ ನಡೆಯಲಾದ ದೌರ್ಜನ್ಯ ವಿಚಾರ ಚರ್ಚೆವಸ್ತುವಾಗಿದ್ದಾನ ಸಾಯಿ ಪಲ್ಲವಿ ಅವರು ಮಾನವತಾವಾದ ಮಾತುಗಳನ್ನಾಡಿದರು. ಆ ಸಂಧರ್ಭದಲ್ಲಿ ನಟಿ ಸಾಯಿ ಪಲ್ಲವಿ ಅವರಿಗೆ ಪರ ವಿರೋದದ ಮಾತುಗಳು ಕೇಳಿ ಬಂದವು. ಅದಾದ ನಂತರ ನಟಿ ಸಾಯಿ ಪಲ್ಲವಿ ಅವರು ನಟಿಸಿದ ಒಂದೆರಡು ಸಿನಿಮಾಗಳು ನಿರೀಕ್ಷೆ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಇದೆಲ್ಲದರ ನಡುವೆ ಸಾಯಿಪಲ್ಲವಿ ಅವರು ಯಾವುದೇ ಸಿನಿಮಾಗಳನ್ನ ಒಪ್ಪಿಕೊಳ್ಳಲಿಲ್ಲ.

ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರೋವಂತೆ ವೈದ್ಯೆಯಾಗಿದ್ದು, ತಾವು ವೈದ್ಯೆರಾಗಿ ಜನರ ಸೇವೆ ಮಾಡುವುದಾಗಿ ತಿಳಿಸಿದರು. ಅದರಂತೆ ಅವರು ಆಸ್ಪತ್ರೆಯೊಂದನ್ನ ಸಹ ನಿರ್ಮಾಣ ಮಾಡುತ್ತಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಸಾಯಿ ಪಲ್ಲವಿ ಅವರು ಸೇವೆ ಸಲ್ಲಿಸುವುದಾಗಿ ಮನದಿಚ್ಚೆ ವ್ಯಕ್ತಪಡಿಸಿದರು. ಒಂದೆಡೆ ಸಿನಿಮಾಗಳಲ್ಲಿ ಅವಕಾಶ ಕೊರತೆ ಉಂಟಾದ್ದರಿಂದ ಬಹುಶಃ ನಟಿ ಸಾಯಿ ಪಲ್ಲವಿ ಅವರು ಸಿನಿಮಾದಲ್ಲಿ ನಟನೆ ತೊರೆದು ಡಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಾರೊ ಏನೋ ಅನ್ನೋ ಸುದ್ದಿ ಕೂಡಾ ಹರಿದಾಡಿದವು. ಆದರೆ ಇದೀಗ ಇದೆಲ್ಲದರ ನಡುವೆ ಸಾಯಿ ಪಲ್ಲವಿ ಅವರು ಬಾಲಿವುಡ್ ಗೆ ಹಾರಿದ್ದಾರೆ. ಹೌದು ಬಾಲಿವುಡ್ ನಲ್ಲಿ ನಿರ್ಮಾಪಕ ಮಧು ಮಂತೇನಾ ಅವರು ನಿರ್ಮಾಣ ಮಾಡಬೇಕು ಅನ್ನುತ್ತಿರುವ ರಾಮಾಯಣ ಕಾವ್ಯ ಸಿನಿಮಾದಲ್ಲಿ ನಟಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಮೂಲಕ ನಟಿ ಸಾಯಿ ಪಲ್ಲವಿ ಅವರು ಪೌರಾಣಿಕ ಪಾತ್ರದ ಮೂಲಕ ಸಹ ಗಮನ ಸೆಳೆಯಲು ಸಜ್ಜಾಗುತ್ತಿದ್ದಾರೆ. ಇದು ನಿಜಕ್ಕೂ ಕೂಡ ಸಾಯಿ ಪಲ್ಲವಿ ಅವರ ಅಭಿಮಾನಿಗಳಿಗೆ ಸಖತ್ ಖುಷಿಯ ವಿಚಾರ ಎಂದು ಹೇಳಬಹುದು.

Leave a Reply

%d bloggers like this: