ಬಾಲಿವುಡ್ ನಟರಿಗೆ ತಟ್ಟಿದ ಬಿಸಿ, ಅಕ್ಷಯ್ ಕುಮಾರ ಅವರ ಮತ್ತೊಂದು ಚಿತ್ರ ಸೋಲು

ಬಾಲಿವುಡ್ ಆಕ್ಷನ್ ಕಿಂಗ್ ಸ್ಟಾರ್ ನಟ ಅಕ್ಷಯ್ ಕುಮಾರ್ ಕೆನಡಾ ದೇಶಕ್ಕೆ ಹೋಗಲಿದ್ದಾರಂತೆ. ಈ ಒಂದು ಸುದ್ದಿ ಇದೀಗ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಾಗಾದರೆ ನಟ ಅಕ್ಷಯ್ ಕುಮಾರ್ ಕೆನಡಾ ದೇಶಕ್ಕೆ ಹೋಗುತ್ತಿದ್ದಾರಾ. ಒಂದು ವೇಳೆ ಅಕ್ಷಯ್ ಕೆನಡಾ ದೇಶಕ್ಕೆ ಹೋಗುತ್ತಿರುವುದು ಯಾವ ಕಾರಣಕ್ಕಾಗಿ. ಅಕ್ಷಯ್ ಕುಮಾರ್ ಅವರನ್ನ ಕೆನಡಾ ಕುಮಾರ್ ಎಂದು ಟ್ರೋಲ್ ಮಾಡುತ್ತಿರುವುದಾದರು ಏಕೆ ಎಂಬ ಈ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಸಿಗಲಿದೆ. ಹೌದು ಬಾಲಿವುಡ್ ರಂಗಕ್ಕೆ ಕಳೆದೆರಡು ವರ್ಷಗಳಿಂದ ಟೈಮ್ ಸರಿ ಇಲ್ಲ ಅಂತ ಕಾಣಿಸುತ್ತೆ. ಯಾಕಂದ್ರೆ ಬಾಲಿವುಡ್ ಯಾವ ಸ್ಟಾರ್ ನಟರ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡುತ್ತಿಲ್ಲ. ಅದಿರಲಿ ಸ್ಟಾರ್ ನಟರ ಸಿನಿಮಾಗಳು ಕೂಡ ಜನರ ಮನ ಗೆಲ್ಲಲು ಆಗುತ್ತಿಲ್ಲ.

ರಿಲೀಸ್ ಆದ ಬಹುತೇಕ ಹಿಂದಿ ಸಿನಿಮಾಗಳು ಅಟ್ಟರ್ ಫ್ಲಾಪ್ ಆಗುತ್ತಿವೆ. ಇದರಿಂದ ಸ್ಟಾರ್ ನಟರಿಗೆ ಭಾರಿ ಬೇಸರವಾಗುತ್ತಿದೆ. ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದ ನಟರು ಸಾಲು ಸಾಲು ಸೋಲುಗಳನ್ನ ಕಂಡು ಕಂಗೆಟ್ಟಿದ್ದಾರೆ. ಅದರ ಪೈಕಿ ಇದೀಗ ನಟ ಅಕ್ಷಯ್ ಕುಮಾರ್ ಅವರ ಮೂರು ಬಹು ನಿರೀಕ್ಷಿತ ಸಿನಿಮಾಗಳು ಮಕಾಡೆ ಮಲಗಿವೆ. ಮಾರ್ಚ್ ತಿಂಗಳಿನಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಜೊತೆಗೆ ಇತ್ತೀಚೆಗೆ ಅಂದರೆ ಇದೇ ಆಗಸ್ಟ್ 11ರಂದು ರಿಲೀಸ್ ಆದ ರಕ್ಷಾಬಂಧನ್ ಸಿನಿಮಾ ಕೂಡ ಭಾರಿ ನೀರಿಕ್ಷೆ ಹುಟ್ಟುಹಾಕಿ ತದ ನಂತರ ಹೇಳ ಹೆಸರಿಲ್ಲದಂತೆ ಸೋಲನ್ನ ಕಂಡಿವೆ. ಇದೇ ರಕ್ಷಾ ಬಂಧನ್ ಸಿನಿಮಾ ಅಣ್ಣ ತಂಗಿಯರ ಭಾಂಧವ್ಯದ ಕಥಾಹಂದರ ಹೊಂದಿರುವ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾ. ರಕ್ಷಾಬಂಧನ ಹಬ್ಬ ಮತ್ತು ಸ್ವಾತಂತ್ರ್ಯ ದಿನಾಚರಣೆ ಹಬ್ಬದ ಹಿನ್ನೆಲೆಯಲ್ಲಿ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸೌಂಡ್ ಮಾಡುತ್ತದೆ ಎಂದು ಲೆಕ್ಕಾಚಾರ ಹಾಕಿದ್ದರು.

ಆದರೆ ಲೆಕ್ಕಾಚಾರಗಳೆಲ್ಲಾ ಸಂಪೂರ್ಣ ಉಲ್ಟಾ ಆಗಿದ್ದು, ರಕ್ಷಾ ಬಂಧನ್ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸೋತಿದ್ದು, ಬಿಡುಗಡೆಯಾದಾಗಿನಿಂದ ಈ ಚಿತ್ರ ಕೇವಲ 28 ಕೋಟಿ ಕಲೆಕ್ಷನ್ ಮಾಡಿ ತೃಪ್ತಿ ಕಂಡುಕೊಂಡಿದೆ. ಇದು ನಟ ಅಕ್ಷಯ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಸೋಲಾಗಿದೆ. ಈ ಹಿಂದೆ ನಟ ಅಕ್ಷಯ್ ಕುಮಾರ್ ಅವರು ತಮ್ಮ ಸಿನಿ ವೃತ್ತಿಯಲ್ಲಿ 14-15 ಸಿನಿಮಾಗಳು ಸೋತಾಗ ನಾನು ಕೆನಡಾ ದೇಶಕ್ಕೆ ಹೋಗುತ್ತೇನೆ ಎಂದು ಹೇಳಿದ್ದರು. ಜೊತೆಗೆ ಅಲ್ಲಿನ ಪೌರತ್ವ ಪಡೆಯುವುದರಲ್ಲಿಯೂ ಕೂಡ ಯಶಸ್ವಿಯಾಗಿದ್ದರು. ಇದೀಗ ಅದೇ ಅಕ್ಷಯ್ ಕುಮಾರ್ ಅವರ ಹೇಳಿಕೆ ಇಟ್ಟುಕೊಂಡು ಇದೀಗ ನೆಟ್ಟಿಗರು ಅಕ್ಷಯ್ ಕುಮಾರ್ ಹ್ಯಾಟ್ರಿಕ್ ಸೋಲು ಕಂಡಿರುವುದರಿಂದ ಈಗ ಕೆನಾಡ ದೇಶಕ್ಕೆ ಹೋಗುತ್ತಾರಂತ ಎಂದು ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಆಡಿದ ಮಾತು, ಹೊಡೆದ ಮುತ್ತು ವಾಪಸ್ ಬರೋದಿಲ್ಲ ಅನ್ನುವ ಮಾತಿನಂತೆ ಅಕ್ಷಯ್ ಕುಮಾರ್ ಅವರು ಅಂದು ಆಡಿದ ಮಾತು ಇಂದಿಗೂ ಕೂಡ ಅವರನ್ನ ಟ್ರೋಲ್ ಮಾಡುವುದಕ್ಕೆ ಕಾರಣವಾಗಿದೆ.