ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಮಾತ್ರ ಅಲ್ಲ ಯಾರೆಲ್ಲಾ ಅತಿ ಹೆಚ್ಚು ಆದಾಯ ತೆರಿಗೆ ಕಟ್ಟುತ್ತಾರೆ ಗೊತ್ತಾ

ಇತ್ತೀಚೆ‌ಗೆ ಬಾಲಿವುಡ್ ಆಕ್ಷನ್ ಕಿಂಗ್ ಕಿಲಾಡಿ ಅಕ್ಷರ್ ಕುಮಾರ್ ಅವರಿಗೆ ಅತಿ ಹೆಚ್ಚು ಟ್ಯಾಕ್ಸ್ ಪೇಯರ್ ಎಂದು ಆದಾಯ ತೆರಿಗೆ ಇಲಾಖೆ ಪ್ರಮಾಣ ಪತ್ರ ನೀಡಿ ಅಭಿನಂದನೆ ತಿಳಿಸಿತ್ತು. ಆದಾಯ ತೆರಿಗೆ ಇಲಾಖೆ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿದ ಪ್ರಮಾಣ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ನಟ ಅಕ್ಷಯ್ ಕುಮಾರ್ ಅವರು ಸಿನಿಮಾ ಹಾಗೂ ಕೆಲವು ಸಾಮಾಜಿಕ ಸೇವೆಗಳ ಮೂಲಕ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಅಂತೆಯೇ ನಿಯಮಾನುಸಾರ ಆದಾಯ ತೆರಿಗೆ ಕಟ್ಟುವ ಮೂಲಕ ಆದಾಯ ತೆರಿಗೆ ಇಲಾಖೆಯಿಂದ ಬೇಷ್ ಎನಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರು ಸರಿ ಸುಮಾರು ವಾರ್ಷಿಕವಾಗಿ ಮೂವತ್ತು ಕೋಟಿ ಮೊತ್ತ ತೆರಿಗೆ ಕಟ್ಟುವುದಾದರೆ. ಬಾಲಿವುಡ್ ನಲ್ಲಿ ಇನ್ನುಳಿದ ಸ್ಟಾರ್ ನಟರು ಇನ್ನೆಷ್ಟು ಮೊತ್ತ ತೆರಿಗೆ ಕಟ್ಟಬಹುದು ಎಂಬುದನ್ನ ತಿಳಿಯುವುದಾದರೆ.

ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಕಳೆದ ಮೂರು ವರ್ಷಗಳಿಂದ ವಾರ್ಷಿಕವಾಗಿ ಬರೋಬ್ಬರಿ ಎಪ್ಪತ್ತು ಕೋಟಿ ಆದಾಯ ತೆರಿಗೆ ಕಟ್ಟುತ್ತಿದ್ದಾರಂತೆ. ಅದೇ ರೀತಿಯಾಗಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ವಾರ್ಷಿಕವಾಗಿ ಇಪ್ಪತ್ತೆರಡು ಕೋಟಿ ಆದಾಯ ತೆರಿಗೆ ಪಾವತಿ ಮಾಡಿದ್ದಾರೆ. ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸಿನಿಮಾವೊಂದಕ್ಕೆ ನೂರು ಕೋಟಿ ಸಂಭಾವನೆ ಪಡೆಯುವ ಮೂಲಕ ಎಲ್ಲರು ನಿಬ್ಬೆರಗಣ್ಣಿನಿಂದ ನೋಡುವಂತೆ ಮಾಡುತ್ತಾರೆ. ಅದರಂತೆ ಅವರು ತಮ್ಮ ಆದಾಯಕ್ಕೆ ತಕ್ಕಂತೆ ವಾರ್ಷಿಕವಾಗಿ ನಲವತ್ನಾಲ್ಕು ಕೋಟಿ ಆದಾಯ ತೆರಿಗೆ ಪಾವತಿ ಮಾಡಿದ್ದಾರೆ. ಇನ್ನು ಬಾಲಿವುಡ್ ಎವರ್ಗೀನ್ ಮೋಸ್ಟ್ ಹ್ಯಾಂಡ್ಸಮ್ ಹೀರೋ ಹೃತಿಕ್ ರೋಷನ್ ಕೂಡ ಯಾರಿಗೂ ಕಡಿಮೆ ಇಲ್ಲದಂತೆ ವಾರ್ಷಿಕವಾಗಿ ತಮ್ಮ ಆದಾಯದ ಮೇರೆಗೆ ಸರಿಸುಮಾರು ಇಪ್ಪತ್ತೆರಡು ಕೋಟಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರಂತೆ. ಈ ಮೂಲಕ ಬಾಲಿವುಡ್ ಸ್ಟಾರ್ ನಟರು ಆದಾಯ ತೆರಿಗೆ ಇಲಾಖೆಗೆ ಕೋಟಿ ಕೋಟಿ ತೆರಿಗೆ ಕಟ್ಟುವ ಮೂಲಕ ದುಬಾರಿ ಸೆಲೆಬ್ರಿಟಿಗಳಾಗಿ ಗುರುತಿಸಿಕೊಂಡಿದ್ದಾರೆ.

Leave a Reply

%d bloggers like this: