ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರದ ಕಲೆಕ್ಷನ್ ಇಷ್ಟೇನಾ

ಹಿಂದಿ ಸಿನಿಮಾಗಳು ಅಂದರೆ ಮೊದಲಿಗೆ ಥಟ್ಟನೆ ನೆನಪಿಗೆ ಬರುತ್ತಿದ್ದದ್ದು ಸ್ಟಾರ್ ಖಾನ್ ನಟರುಗಳು. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳಿಪಟ ಮಾಡೋ ಸುದ್ದಿಗಳು ಕೇಳುತ್ತಿದ್ದೆವು. ಆದರೆ ಇದೀಗ ಬಾಲಿವುಡ್ ಸಿನಿಮಾ ರಂಗ ಸಂಪೂರ್ಣವಾಗಿ ಮಂಕಾಗಿದೆ ಎಂದು ಹೇಳಬಹುದು. ಅದಕ್ಕೆ ತಕ್ಕ ಉದಾಹರಣೆಯಾಗಿ ಹಿಂದಿ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಕಳೆದು ಹೋಗುತ್ತಿವೆ. ಇತ್ತೀಚೆಗೆ ಕಳೆದ ವಾರವಷ್ಟೇ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿದೆ‌. ಈ ಚಿತ್ರ ಹಾಲಿವುಡ್ ಸೂಪರ್ ಹಿಟ್ ಸಿನಿಮಾ ಫಾರೆಸ್ಟ್ ಗಂಪ್ ಸಿನಿಮಾದ ರೀಮೇಕ್ ಆಗಿತ್ತು. ಹಾಗಾಗಿ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ಸ್ವತಃ ಅಮೀರ್ ಖಾನ್ ಅವರು ಕೂಡ ವಯಾಕಾಮ್18 ಸ್ಟೂಡಿಯೋಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದರು.

ಈ ಸಿನಿಮಾದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯಾಗಿ ಕರೀನಾ ಕಪೂರ್ ಅವರು ಬಣ್ಣ ಹಚ್ಚಿದ್ದರು. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬರೋಬ್ಬರಿ 180 ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾದ ಸಿನಿಮಾ. ಬಿಡುಗಡೆಗೂ ಮುನ್ನ ಅಪಾರ ನೀರಿಕ್ಷೆ ಹುಟ್ಟು ಹಾಕಿದ್ದ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆದ ನಂತರ ಸಿನಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅಮೀರ್ ಖಾನ್ ಅವರ ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರು ಕೂಡ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ವಾರಾಂತ್ಯದಲ್ಲಿ ನೂರಾರು ಕೋಟಿ ಬಾಚುತ್ತಿತ್ತು. ಆದರೆ ಇದೀಗ ಅಮೀರ್ ಖಾನ್ ಅವರ ಹೇಳಿಕೆ ಅವರ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೇಲೆ ಪರಿಣಾಮ ಬೀರಿದೆ.

ಇದುವರೆಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಕೇವಲ ಐವತ್ತು ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಬಾಲಿವುಡ್ ಸಿನಿಮಾಗಳು ಮಂಕಾಗಿದ್ದಾವೆ ಅನ್ನೋದಕ್ಕೆ ಅಕ್ಷಯ್ ಕುಮಾರ್ ಅವರ ರಕ್ಷಾಬಂಧನ್ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಒಟ್ಟಾರೆಯಾಗಿ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಎರಡನೇ ವಾರದ‌ವರೆಗೆ ಕೇವಲ ಐವತ್ತು ಕೋಟಿಯಷ್ಟು ಕಲೆಕ್ಷನ್ ಮಾಡಿದಕ್ಕೆ ತೃಪ್ತಿ ಪಡೆದುಕೊಂಡು ನಿರಾಸೆ ಮೂಡಿಸಿದೆ. ಇನ್ನು ಐಎಂಡಿಬಿ ರೇಟಿಂಗ್ಸ್ ನಲ್ಲಿ 10 ಅಂಕಗಳಿಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಕೇವಲ 4.5 ಅಂಕಗಳನ್ನ ಪಡೆದುಕೊಂಡಿದೆ.

Leave a Reply

%d bloggers like this: