ಬಾಲಿವುಡ್ ಇಂದ ಬಂದ ದೊಡ್ಡ ಆಫರ್ ಅನ್ನು ತಿರಸ್ಕರಿಸಿದ ರಾಕಿಂಗ್ ಸ್ಟಾರ್ ಯಶ್ ಅವರು

ಬಾಲಿವುಡ್ ನಲ್ಲಿ ಇದೀಗ ಕನ್ನಡ ಸಿನಿಮಾಗಳದ್ದೇ ಹವಾ ಅಂದರೆ ಅತಿಶಯೋಕ್ತಿ ಆಗಲ್ಲ. ಯಾಕಂದ್ರೆ ಇತ್ತೀಚೆಗೆನ ಕೆಲವು ವರ್ಷಗಳಿಂದೀಚೆಗೆ ಬಾಲಿವುಡ್ ನ ಯಾವ ಸ್ಟಾರ್ ನಟರ ಸಿನಿಮಾಗಳು ಸಹ ಪ್ರೇಕ್ಷಕರ ಮನ ಗೆದ್ದಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಸೋತು ಸುಣ್ಣ ಆಗಿವೆ. ಇತ್ತ ನಮ್ಮ ಕನ್ನಡದ ಸಿನಿಮಾಗಳು ಕರ್ನಾಟಕ ಮಾತ್ರ ಅಲ್ಲದೆ ದೇಶಾದ್ಯಂತ ಪಂಚ ಭಾಷೆಗಳಲ್ಲಿ ತೆರೆಕಂಡು ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. ಕೆಜಿಎಫ್, ಕೆಜಿಎಫ್2, ಜೇಮ್ಸ್, 777 ಚಾರ್ಲಿ, ವಿಕ್ರಾಂತ್ ರೋಣ ಈಗ ಕಾಂತಾರ ಹೀಗೆ ಕನ್ನಡದ ಸಿನಿಮಾಗಳು ಪರಭಾಷೆಗೆ ಡಬ್ ಆಗಿ ಅಲ್ಲಿನ ಸ್ಟಾರ್ ನಟರ ಸಿನಿಮಾಗಳನ್ನು ಕೂಡ ಸೈಡ್ ಲೈನ್ ಮಾಡಿವೆ. ಕನ್ನಡ ಸಿನಿಮಾಗಳನ್ನ ಪರಭಾಷಿಕ ಪ್ರೇಕ್ಷಕರು ಒಪ್ಪಿಕೊಂಡಂತೆ ನಮ್ಮ ಕನ್ನಡದ ನಟರನ್ನ ಸಹ ಒಪ್ಪಿ ಅಪ್ಪಿಕೊಳ್ಳುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಇಂದು ರಾಕಿಬಾಯ್ ಆಗಿ ಮಿಂಚ್ತಿದ್ದಾರೆ. ಅದೇ ರೀತಿ ಈಗ ರಿಷಬ್ ಶೆಟ್ಟಿ ಕೂಡ ಕಾಂತಾರ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಸಖತ್ ಶೈನ್ ಆಗಿದ್ದಾರೆ. ಈಗಾಗಲೇ ಇವರಿಗೆ ಹಿಂದಿ ಸಿನಿಮಾಗಳಲ್ಲಿ ನಟಿಸೋದಕ್ಕೆ ಅವಕಾಶ ಬಂದಿದೆಯಂತೆ. ಅದೇ ರೀತಿ ರಾಕಿ ಬಾಯ್ ಆಗಿ ವರ್ಲ್ಢ್ ವೈಡ್ ಅಪಾರ ಜನಪ್ರಿಯತೆ ಪಡೆದಿರೋ ಯಶ್ ಅವರಿಗೆ ಬಾಲಿವುಡ್ ಬಿಗ್ ಬಜೆಟ್ ಸಿನಿಮಾವೊಂದರಲ್ಲಿ ನಟಿಸೋದಕ್ಕೆ ಅವಕಾಶ ಬಂದಿತ್ತಂತೆ‌. ಆದರೆ ಈ ಅವಕಾಶವನ್ನ ಯಶ್ ಅವರು ನಿರಾಕರಿಸಿದ್ದಾರಂತೆ. ಹೌದು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬ್ರಹ್ಮಾಸ್ತ್ರ ಭಾಗ2 ರಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸುವುದಕ್ಕೆ ಅವಕಾಶ ಹರಸಿ ಬಂದಿತ್ತಂತೆ. ಆದರೆ ಯಶ್ ಈ ಅವಕಾಶವನ್ನ ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ. ಯಶ್ ಅವರಿಗೆ ಕೆಜಿಎಫ್ ನಂತರ ವರ್ಲ್ಡ್ ವೈಡ್ ಸಖತ್ ಕ್ರೇಜ಼್ ಇದೆ.

ಅವರ ಮುಂದಿನ ಸಿನಿಮಾಗಾಗಿ ಇಡೀ ವಿಶ್ವದ ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಈ ಒಂದು ಕ್ರೇಜ಼್ ಅನ್ನ ಸದುಪಯೋಗ ಪಡಿಸಿಕೊಳ್ಳೋದಕ್ಕೆ ಬ್ರಹ್ಮಾಸ್ತ್ರ ಸಿನಿಮಾ ತಂಡ ಪ್ರಯತ್ನ ಪಟ್ಟಿದೆ. ಆದರೆ ಅವರ ಈ ಪ್ರಯತ್ನ ಠುಸ್ ಪಟಾಕಿ ಆಗಿದೆ. ಯಶ್ ಅವರು ಸಿನಿ ವೃತ್ತಿ ಜೀವನದ ತಮ್ಮ ಯಶಸ್ಸಿನ ರೇಖೆಯನ್ನ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಅವರು ತಮಗೆ ಬರುತ್ತಿರೋ ಆಫರ್ ಗಳನ್ನ ತಕ್ಷಣ ಒಪ್ಪಿಕೊಳ್ಳದೇ ನಿಧಾನವಾಗಿ ಆಲೋಚಿಸಿ ನಿರ್ಧಾರ ಮಾಡುತ್ತಿದ್ದಾರೆ. ಯಶ್ ಸದ್ಯಕ್ಕೆ ಹಾಲಿವುಡ್ ನ ಖ್ಯಾತ ತಂತ್ರಜ್ಞರೊಟ್ಟಿಗೆ ವಿವಿಧ ಕಲೆಗಳನ್ನ ತರಬೇತಿ ಪಡೆಯುತ್ತಾ ತಮ್ಮ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಭಾಗ1 ಶಿವ ಚಿತ್ರ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಇನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡುತ್ತಿದೆ.

Leave a Reply

%d bloggers like this: