ಬಾಲಿವುಡ್ ಚಿತ್ರರಂಗದಲ್ಲಿ ಅವಕಾಶ ಪಡೆದ ಮತ್ತೊಬ್ಬ ಕನ್ನಡತಿ

ಕನ್ನಡದ ಖ್ಯಾತ ರೇಡಿಯೋ ಜಾಕಿ ಕಮ್ ಸ್ಟ್ಯಾಂಡ್ ಅಪ್ ಕಾಮಿಡಿ ಮಾಡುವ ಕಲಾವಿದೆಯಾಗಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರೋ ಶ್ರದ್ದಾ ಅವರಿಗೆ ಬಂಪರ್ ಆಫರ್ ವೊಂದು ಒದಗಿ ಬಂದಿದೆ. ಸರಿ ಸುಮಾರು ಒಂದು ದಶಕಗಳ ಕಾಲ ರೇಡಿಯೋ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿರೋ ಶ್ರದ್ದಾ ಬದಲಾದ ಕಾಲಕ್ಕೆ ಹೊಂದಿಕೊಂಡು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿಯೂ ಕೂಡ ಜನಪ್ರಿಯರಾಗಿದ್ದರು‌. ಶ್ರದ್ದಾ ಈ ರೇಡಿಯೋ ಕೇಳುಗರು ಮತ್ತು ಸೋಶಿಯಲ್ ಮೀಡಿಯಾ ಬಳಸುವ ಬಹುತೇಕರಿಗೆ ತಿಳಿದೇ ಇರ್ತಾರೆ. ಸರಿ ಸುಮಾರು ಒಂಭತ್ತು ವರ್ಷಗಳ ಕಾಲ 104 ಎಫ್ಎಮ್ ನಲ್ಲಿ ಶ್ರದ್ದಾ ರೇಡಿಯೋ ಜಾಕಿ ಆಗಿ ಕೆಲ್ಸ ಮಾಡ್ತಾರೆ.

ತದ ನಂತರ ಬದಲಾವಣೆ ಬಯಸಿ ಶ್ರದ್ದಾ ಕೆಲ್ಸ ಬಿಟ್ಟು ಫ್ರೀಲ್ಯಾನ್ಸರ್ ಆಗಿ ಕ್ರಿಯೆಟಿವ್ ವರ್ಕ್ ಮಾಡ್ತಿದ್ರು. ಜೊತೆಗೆ ಸ್ಟ್ಯಾಂಡಪ್ ಕಾಮಿಡಿ ಶೋ ಮತ್ತು ರಿಯಾಲಿಟಿ ಶೋ ವೊಂದರ ನಿರೂಪಕಿಯಾಗಿಯೂ ಕೂಡ ಕೆಲ್ಸ ಮಾಡಿದ್ದಾರೆ. ಇತ್ತೀಚೆಗೆ ಕೆಲವು ವರ್ಷಗಳಿಂದ ಶ್ರದ್ದಾ ಅಯ್ಯೋ ಶ್ರದ್ದಾ ಆಗಿ ಬದಲಾವಣೆ ಆಗಿದ್ರು. ಹೌದು ತುಳು ಭಾಷೆಯಲ್ಲಿ ಒಂದಷ್ಟು ಹಾಸ್ಯ ಮಿಶ್ರಿತ ಕಂಟೆಂಟ್ ಮಾಡಿ ನಗಿಸ್ತಾ ಇರ್ತಾರೆ. ಶ್ರದ್ದಾ ಅವರ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾವೆ‌. ತುಳು ಭಾಷೆ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿಯೂ ಕೂಡ ಶ್ರದ್ದಾ ಹಾಸ್ಯ ವೀಡಿಯೋ ಮಾಡಿ ಫೇಮಸ್ ಆಗಿದ್ದಾರೆ. ಇವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಲಕ್ಷಾಂತರ ಜನ ಪಾಲೋವರ್ಸ್ ಇದ್ದಾರೆ. ಮೂಲತಃ ತುಳುನಾಡವರಾದ ಕಾರಣ ಶ್ರದ್ದಾ ತಮ್ಮ ಮಾತೃಭಾಷೆಯನ್ನೇ ತಮ್ಮ ಪ್ರತಿಭೆ ಸಾದರ ಪಡಿಸಲು ಬಳಸಿಕೊಂಡರು.

ಇದೀಗ ಶ್ರದ್ದಾ ಅವರಿಗೆ ಬಾಲಿವುಡ್ ನಲ್ಲಿ ಅವಕಾಶ ಅರಸಿ ಬಂದಿದೆ. ಬಾಲಿವುಡ್ ಸ್ಟಾರ್ ನಟ ಆಯುಷ್ಮಾನ್ ಖುರಾನ ಅವರು ನಟಿಸುತ್ತಿರೋ ಡಾಕ್ಟರ್ ಜೀ ಸಿನಿಮಾದಲ್ಲಿ ಶ್ರದ್ದಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈಗಾಗಲೇ ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು,ಪೋಸ್ಟರ್ ನಲ್ಲಿ ಶ್ರದ್ದಾ ಡಾಕ್ಟರ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಕಂಡು ಬರುತ್ತಿದೆ. ಈ ಡಾಕ್ಟರ್ ಜೀ ಸಿನಿಮಾವನ್ನು ಅನುಭೂತಿ ಕಶ್ಯಪ್ ಅವರು ನಿರ್ದೇಶನ ಮಾಡಿದ್ದು, ಅಮಿತ್ ತ್ರಿವೇದಿ ಅವರು ಮ್ಯೂಸಿಕ್ ಮಾಡಿದ್ದಾರೆ. ಜಂಗ್ಲಿ ಪಿಕ್ಚರ್ಸ್ ಈ ಡಾಕ್ಟರ್ ಜೀ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಮ್ಮ ತುಳುನಾಡಿನ ಕುವರಿ ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿರೋದಕ್ಕೆ ನಿಜಕ್ಕೂ ಕೂಡ ಸಂತಸ ಎಂದು ಹೇಳ್ಬೋದು.

Leave a Reply

%d bloggers like this: