ಬಾಲಿವುಡ್ ಚಿತ್ರಗಳಿಗೆ ಬಹಿಸ್ಕಾರದ ಬಿಸಿ, ಈಗ ಮತ್ತೊಬ್ಬ ನಟನ ಸರದಿ

ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು ಅನ್ನೋ ಗಾದೆಯಂತಾಗಿದೆ ಈ ಹಿಂದಿ ಸ್ಟಾರ್ ನಟರ ಸಿನಿಮಾಗಳು. ಯಾಕಂದ್ರೇ ಸಿನಿಮಾ ಚೆನ್ನಾಗಿದ್ದರು ಕೂಡ ಆ ಚಿತ್ರದ ನಾಯಕ ನಟರು ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳು ಅವರ ಸಿನಿಮಾಗಳಿಗೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ಹೌದು ಇತ್ತೀಚೆಗೆ ಯಾಕೋ ಏನೋ ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲು ಸೋಲನ್ನು ಅನುಭವಿಸುತ್ತಾ ಇವೆ. ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೇ ಕರೆಸಿಕೊಳ್ಳುವ ನಟ ಅಮೀರ್ ಖಾನ್ ಅವರು ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಅಮೀರ್ ಖಾನ್ ಅವರ ಈ ಹೇಳಿಕೆ ಸಾರ್ವಜನಿಕವಾಗಿ ಚರ್ಚೆ ಆಗಿ ಅವರ ಹೇಳಿಕೆಗೆ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿತ್ತು.

ಇದಾದ ನಂತರ ಈ ವಿವಾದಾತ್ಮಕ ಹೇಳಿಕೆ ತಣ್ಣಗಾದರು ಕೂಡ ಇತ್ತೀಚೆಗೇ ಇದೇ ಅಮೀರ್ ಖಾನ್ ಅವರ ಹೇಳಿಕೆ ಅವರ ಸಿನಿಮಾದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಕಳೆದ ವಾರ ವರ್ಲ್ಡ್ ವೈಡ್ ರೀಲಿಸ್ ಆಯಿತು. ಅದಕ್ಕೂ ಮುನ್ನ ಸೋಶಿಯಲ್ ಮೀಡಿಯಾಗಳಲ್ಲಿ ಈ ಚಿತ್ರ ಬಾಯ್ಕಟ್ ಮಾಡಬೇಕು ಎಂದು ಅಭಿಯಾನ ಆರಂಭ ಆಯ್ತು. ತಕ್ಷಣ ಅಮೀರ್ ಖಾನ್ ನನ್ನ ಹೇಳಿಕೆಗೆ ಕ್ಷಮೆ ಕೇಳಿದ್ರು ಕೂಡ ಬಾಯ್ಕಟ್ ಅಭಿಯಾನ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಮೇಲೆ ಪರಿಣಾಮ ಬೀರಿ ಚಿತ್ರ ನೋಡಲು ಪ್ರೇಕ್ಷಕರು ಮನಸ್ಸು ಮಾಡಲಿಲ್ಲ. ಚಿತ್ರದ ಕಲೆಕ್ಷನ್ ಕೂಡ ಅಷ್ಟಕಷ್ಟೇ ಅಂತಾಯ್ತು. ಅದರಂತೆ ಹೃತಿಕ್ ರೋಷನ್ ಅವರು ಅಮೀರ್ ಖಾನ್ ಸಿನಿಮಾ ಲಾಲ್ ಸಿಂಗ್ ಚಡ್ಡಾ ಚಿತ್ರ ನೋಡಿ ಖುಷಿ ಪಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ರು.

ಅದರ ಜೊತೆಗೆ ಚಿತ್ರ ನೋಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ರು. ಆಗ ಹೃತಿಕ್ ರೋಷನ್ ಅವರ ವಿಕ್ರಂವೇದಾ ಸಿನಿಮಾವನ್ನ ಕೂಡ ಬಾಯ್ಕಟ್ ಮಾಡಬೇಕು ಎಂಬ ಅಭಿಯಾನ ಆರಂಭ ಮಾಡುವ ಮುನ್ಸೂಚನೆ ಕಾಣಿಸ್ತು. ಈಗ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾಗೂ ಕೂಡ ಈ ಬಾಯ್ಕಟ್ ಬಿಸಿ ತಟ್ಟಲಿದೆ ಎಂದು ಹೇಳಲಾಗುತ್ತಿದೆ. ಯಾಕಂದ್ರೇ ನಟ ಶಾರುಖ್ ಖಾನ್ ಅವರು ಸಹ ಕೆಲವು ವರ್ಷಗಳ ಹಿಂದೆ ಭಾರತ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡಿದ್ರು. ಇದೀಗ ಈ ಹೇಳಿಕೆ ಮುನ್ನೆಲೆಗೆ ಬಂದಿದ್ದು ಶಾರುಖ್ ಖಾನ್ ಅವರ ಮುಂದಿನ ಎಲ್ಲಾ ಸಿನಿಮಾಗಳಿಗೆ ಬಾಯ್ಕಟ್ ಅಭಿಯಾನ ಶುರುವಾದ್ರೇ ಅವರ ಸಿನಿಮಾಗಳ ಗತಿ ಏನಾಗಬಹುದು ಎಂದು ಕೆಲವರ ಅಭಿಪ್ರಾಯ. ಒಟ್ಟಾರೆಯಾಗಿ ಬಾಲಿವುಡ್ ಸ್ಟಾರ್ ನಟರಿಗೆ ತಮ್ಮ ಹೇಳಿಕೆಗಳು ಇಂದು ಅವರ ಸಿನಿಮಾಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಮಾತ್ರ ಸತ್ಯ.

Leave a Reply

%d bloggers like this: