ಬಾಲಿವುಡ್ ಅಲ್ಲಿ ಟಾಪ್ ಹೀರೋ ಯಶ್, ಹೀಗಂತ ಹೇಳಿದ್ದು ಬಾಲಿವುಡ್ಡಿನ ಸ್ಟಾರ್ ನಟ

ಕೆಜಿಎಫ್ ಚಾಪ್ಟರ್2 ಸಿನಿಮಾ ರಿಲೀಸ್ ಆಗಿ ನಾಲ್ಕು ತಿಂಗಳು ಕಳೆದರು ಕೂಡ ಬಾಲಿವುಡ್ ನಲ್ಲಿ ರಾಕಿಬಾಯ್ ಹವಾ ಕಡಿಮೆ ಆಗಿಲ್ಲ. ಯಾಕಂದ್ರೆ ರಾಕಿಂಗ್ ಸ್ಟಾರ್ ಯಶ ಅವರ ಕೆಜಿಎಫ್ ಚಾಪ್ಟರ್2 ಸಿನಿಮಾ ಮಾಡಿರೋ ಹವಾ ಅಂತಾದ್ದು. ಹೌದು ಇತ್ತೀಚೆಗೆ ಬಾಲಿವುಡ್ ನ ಯಾವ ಸ್ಟಾರ್ ನಟನ ಸಿನಿಮಾಗಳು ಮಾಡದಂತಹ ದಾಖಲೆಯನ್ನ ಕನ್ನಡದ ನಟ ಯಶ್ ಮಾಡಿರೋದು ಅಲ್ಲಿನ ನಟರಿಗೆ ದಿಗ್ಬ್ರಮೆ ಹುಟ್ಟಿಸಿದೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ನಂಬರ್ ಒನ್ ಸ್ಟಾರ್ ನಟ ಯಶ್ ಅದನ್ನ ನಿಸ್ಸಂಶಯವಾಗಿ ಮತ್ತೊಬ್ಬ ಬಾಲಿವುಡ್ ನಟರೇ ರಿಯಾಲಿಟಿ ಶೋವೊಂದರಲ್ಲಿ ಮುಕ್ತವಾಗಿ ಹೇಳಿದ್ದಾರೆ. ಹೌದು ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕಾಫಿ ವಿಥ್ ಕರಣ್ ಜೋಹಾರ್ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕಳೆದ ಸಂಚಿಕೆಯಲ್ಲಿ ಸ್ಟಾರ್ ನಟ ಶಾಹಿದ್ ಕಪೂರ್ ಮತ್ತು ನಟಿ ಕಿಯಾರಾ ಅಡ್ವಾಣಿ ಅವರು ಅತಿಥಿಯಾಗಿ ಭಾಗವಹಿಸಿರ್ತಾರೆ.

ಸಾಮಾನ್ಯವಾಗಿ ಈ ಕಾಫಿ ವಿಥ್ ಕರಣ್ ಜೋಹಾರ್ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಭಾಗವಹಿಸಿದ್ದಾಗಲೆಲ್ಲಾ ಒಂದಲ್ಲ ಒಂದು ಸುದ್ದಿ ಆಗ್ತಾನೇ ಇರುತ್ತೆ. ಅದೇ ರೀತಿಯಾಗಿ ಈ ಬಾರಿಯೂ ಕೂಡ ಹೊಸದೊಂದು ಸುದ್ದಿಯಾಗಿದೆ. ಈ ಬಾರಿ ಆ ಸುದ್ದಿ ನಮ್ಮ ಕನ್ನಡದ ಸ್ಟಾರ್ ನಟನಿಗೆ ಸಂಬಂಧಿಸಿದ್ದು ಅನ್ನೋದು ವಿಶೇಷ. ಹೌದು ನಿರೂಪಕ ಕರಣ್ ಜೋಹಾರ್ ಅವರು ನಟ ಶಾಹೀದ್ ಕಪೂರ್ ಅವರಿಗೆ ಬಾಲಿವುಡ್ ನಂಬರ್ ಒನ್ ಸ್ಟಾರ್ ನಟಿ ಯಾರು ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ತಕ್ಷಣ ಶಾಹೀದ್ ಕಪೂರ್ ಅವರು ತಮ್ಮ ಪಕ್ಕದಲ್ಲೇ ಕುಳಿತಿದ್ದ ಕಿಯಾರಾ ಅಡ್ವಾಣಿ ಅವರೇ ನಂಬರ್ ಒನ್ ನಟಿ ಎಂದೇಳಿದ್ದಾರೆ. ತದ ನಂತರ ಬಾಲಿವುಡ್ ನಂಬರ್ ಒನ್ ನಟ ಯಾರು ಅನ್ನೋ ಪ್ರಶ್ನೆಗೆ ಶಾಹೀದ್ ಕಪೂರ್ ಯಾವುದೇ ರೀತಿ ಹಿಂಜರಿಕೆಯಿಲ್ಲದೆ ರಾಕಿ ಬಾಯ್ ಎಂದು ಹೇಳಿದ್ದಾರೆ.

ಕರಣ್ ಜೋಹಾರ್ ಇದಕ್ಕೆ ಓಹ್ ರಾಕಿ ಬಾಯ್ ನಟ ಯಶ್ ಎಂದು ಹೇಳಿದ್ದಾರೆ಼, ಈ ದೃಶ್ಯದ ತುಣುಕು ಸದ್ಯಕ್ಕೆ ಸೋಶಿಯಲ್ ಮೀಡಿಯಾ ಪೂರಾ ಭಾರಿ ವೈರಲ್ ಆಗಿದೆ. ಬಾಲಿವುಡ್ ಸ್ಟಾರ್ ನಟ ಶಾಹೀದ್ ಕಪೂರ್ ಕೂಡ ಕನ್ನಡದ ನಟ ಯಶ್ ಅವರನ್ನ ಬಾಲಿವುಡ್ ನಂಬರ್ ಒನ್ ಸ್ಟಾರ್ ನಟ ಅಂತ ಒಪ್ಕೊಂಡಿರೋದು ನಿಜಕ್ಕೂ ಕೂಡ ಹೆಮ್ಮೆ. ಇನ್ನೊಂದ್ ವಿಶೇಷ ಏನಪ್ಪಾ ಅಂದರೆ ಕೆಜಿಎಫ್2 ಸಿನಿಮಾ ಈ ವರ್ಷ ಬಾಲಿವುಡ್ ಯಾವ ಸ್ಟಾರ್ ನಟನ ಸಿನಿಮಾಗಳು ಮಾಡದ ಬರೋಬ್ಬರಿ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿತು. ಒಟ್ಟಾರೆಯಾಗಿ ಕೆಜಿಎಫ್ ಚಾಪ್ಟರ್2 ಸಿನಿಮಾ ವರ್ಲ್ಡ್ ವೈಡ್ ಬರೋಬ್ಬರಿ 1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲನ್ನ ಸೃಷ್ಟಿ ಮಾಡಿದೆ. ನಟ ಯಶ್ ಅವರನ್ನ ಈ ಚಿತ್ರ ಯಶಸ್ಸಿನ ಉತ್ತುಂಗದಲ್ಲಿರಿಸಿದೆ.

Leave a Reply

%d bloggers like this: