ಬಾಲಿವುಡ್ ಅಲ್ಲಿ ‘ಗುಡ್ ಬೈ’ ಹೇಳುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ ಅವರು

ಬಿಗ್-ಬಿ ಅಮಿತಾಬ್ ಬಚ್ಚನ್ ಅವರ ಜೊತೆ ರಶ್ಮಿಕಾ ಮಂದಣ್ಣ ಗುಡ್ ಬಾಯ್ ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಮಿತಾಬ್ ಬಚ್ಚನ್ ಅವರಿಗೆ ಮಗಳಾಗಿ ನಟಿಸಿದ್ದಾರೆ ಎಂಬುದು ಮೂಲಗಳ ಪ್ರಕಾರ ತಿಳಿದು ಬಂದಿದೆ. ಆದರೆ ಇದರ ಬಗ್ಗೆ ಸಿನಿಮಾ ರಿಲೀಸ್ ಆಗುವವರೆಗೆ ಸ್ಪಷ್ಟತೆ ಸಿಗುವುದಿಲ್ಲ. ಇನ್ನು ಈ ಬಿಗ್ ಬಿ ಜೊತೆ ನಟಿಸಿರುವ ರಶ್ಮಿಕಾ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಬಿಗ್-ಬಿ ಜೊತೆ ರಶ್ಮಿಕಾ ಮಂದಣ್ಣ ಯಾವ ರೀತಿ ಕಾಣಿಸಿಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಅಭಿಮಾನಿಗಳ ಈ ಕಾತುರಕ್ಕೆ ತೆರೆ ಬಿದ್ದಿದೆ. ಹೌದು ರಶ್ಮಿಕಾ ಮಂದಣ್ಣ ಅವರ ಎರಡನೇ ಬಾಲಿವುಡ್ ಸಿನಿಮಾ ಅಂದರೆ ಅದು ಗುಡ್ ಬಾಯ್.

ಮೊದಲ ಬಾರಿಗೆ ಅವರು ಬಾಲಿವುಡ್ಗೆ ಎಂಟ್ರಿ ಆಗಿದ್ದು ಬಾಲಿವುಡ್ ಸ್ಟಾರ್ ನಟ ಸಿದ್ದಾರ್ಥ್ ಮಲ್ಹೋತ್ರ ನಾಯಕ ನಟನಾಗಿ ಅಭಿನಯಿಸಿದ ಮಿಶನ್ ಮಜ್ನು ಚಿತ್ರದ ಮೂಲಕ. ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಇದೀಗ ಬಾಲಾಜಿ ಮೋಶನ್ ಪಿಕ್ಚರ್ಸ್ ಮತ್ತು ರಿಲಯನ್ಸ್ ಎಂಟರ್ಟೈನ್ ಮೆಂಟ್ ಸಂಸ್ಥೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ವಿಕಾಸ್ ಬಹ್ಲ್ ನಿರ್ದೇಶನ ಮಾಡಿರುವ ಗುಡ್ ಬಾಯ್ ಸಿನಿಮಾ ಇದೇ ಅಕ್ಟೋಬರ್ 7ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ಪಕ್ಕಾ ಫ್ಯಾಮಿಲಿ ಡ್ರಾಮಾ ಸಿನಿಮಾವಾಗಿದ್ದು ಕೌಟುಂಬಿಕ ಸಂಬಂಧಗಳ ಭಾಂಧವ್ಯದ ಸುತ್ತ ಎಣೆಯಲಾಗಿರುವ ಕಥೆಯಾಗಿದೆ. ಇತ್ತೀಚೆಗೆ ಈ ಗುಡ್ ಬಾಯ್ ಚಿತ್ರದ ಪೋಸ್ಟರನ್ನ ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಮನ ಮಿಡಿಯುವ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ತಯಾರಾಗಿರಿ ಎಂಬ ಅರ್ಥದಲ್ಲಿ ಬರೆದುಕೊಳ್ಳಲಾಗಿತ್ತು.

ಒಟ್ಟಾರೆಯಾಗಿ ಬಾಲಿವುಡ್ ಬಿಗ್ ಬಿ ಜೊತೆ ನಟಿಸಿರುವ ರಶ್ಮಿಕಾ ಮಂದಣ್ಣ ಸಿನಿಮಾ ಥಿಯೇಟರ್ಗೆ ಬರುತ್ತಿದ್ದು, ರಶ್ಮಿಕಾ ಯಾವ ರೀತಿ ಕಾಣಿಸಿಕೊಂಡಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಇನ್ನು ಇದರ ನಡುವೆಯೇ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಇನ್ನೊಂದಷ್ಟು ಅವಕಾಶಗಳನ್ನು ಪಡೆದುಕೊಂಡು ಮಿಂಚಲಿದ್ದಾರೆ. ಅದಕ್ಕೆ ಪೂರಕವಾಗಿ ಇದೀಗ ರಣ್ ಬೀರ್ ಕಪೂರ್ ಅವರ ಸಿನಿಮಾ ವೊಂದರಲ್ಲಿ ನಟಿಸಲಿದ್ದಾರಂತೆ. ಅದರ ಜೊತೆಗೆ ಬಾಲಿವುಡ್ ಎಂಗ್ ಅಂಡ್ ಎನರ್ಜೆಟಿಕ್ ಹೀರೋ ಟೈಗರ್ ಶ್ರಾಫ್ ಅವರೊಟ್ಟಿಗೆ ಕೂಡ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ರಶ್ಮಿಕಾ ಮಂದಣ್ಣ ಟಾಲಿವುಡ್, ಕಾಲಿವುಡ್ ನಲ್ಲಿ ಗಳಿಸಿದ ಜನಪ್ರಿಯತೆ ಅಂತೆಯೇ ಬಾಲಿವುಡ್ ನಲ್ಲಿಯೂ ಕೂಡ ಭಾರಿ ಜನಪ್ರಿಯತೆ ಗಳಿಸಲಿದ್ದಾರೆ ಎಂದು ಹೇಳಬಹುದು.

Leave a Reply

%d bloggers like this: