ಬಾಡಿ ಶೇಮ್ ಮಾಡಿದ ನೆಟ್ಟಿಗನಿಗೆ ಬೈದು ಬೆವರಿಳಿಸಿದ ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯ ಮೆನನ್

ಬಾಡಿ ಶೇಮ್ ಮಾಡಿದ ನೆಟ್ಟಿಗನಿಗೆ ಬೈದು ಬೆವರಿಳಿಸಿದ ದಕ್ಷಿಣ ಭಾರತದ ಜನಪ್ರಿಯ ನಟಿ…! ಇತ್ತೀಚೆಗೆ ಸಿನಿ ತಾರೆಯರ ಉಡುಗೆ- ತೊಡುಗೆಗಳಿಂದ ಹಿಡಿದು ಅವರ ವೈಯಕ್ತಿಕ ಬದುಕಿನವರೆಗೆ ವ್ಯಂಗ್ಯ ಟೀಕೆಗಳು ಈ ಸೋಶಿಯಲ್ ಮೀಡಿಯಾಗಳಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.ಭಾರತೀಯ ಚಿತ್ರರಂಗದ ಅನೇಕ ನಟಿಯರು ಕೆಲವು ವಿಚಾರವಾಗಿ ಭಾರಿ ಸುದ್ದಿಯಾಗುತ್ತಿರುತ್ತಾರೆ. ಅಂತಯೇ ಇದೀಗ ಸುದ್ದಿ ಆಗಿರುವ ನಟಿ ಅಂದರೆ ಪಂಚಭಾಷಾ ತಾರೆ ನಟಿ ನಿತ್ಯಾ ಮೆನನ್.ಮಲೆಯಾಳಂ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿರುವ ಬೇಡಿಕೆಯ ನಟಿಯಾಗಿರುವ ನಿತ್ಯಾ ಮೆನನ್ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದು 2006 ರಲ್ಲಿ ತೆರೆಕಂಡ ಕನ್ನಡದ 7 o ಕ್ಲಾಕ್ ಚಿತ್ರದ ಮೂಲಕ.ತದ ನಂತರ ಕನ್ನಡದಲ್ಲಿ ಜೋಶ್, ಮೈನಾ,ಕೋಟಿಗೊಬ್ಬ 2,ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.ಮೂಲತಃ ಮಲೆಯಾಳಿ ಕುಟುಂಬ ಮೂಲದವರಾದ ನಿತ್ಯಾ ಮೆನನ್ ಅವರು ವಿಧ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲೇ ಆದ್ದರಿಂದ ಉತ್ತಮವಾಗಿಯೇ ಕನ್ನಡ ಮಾತನಾಡುತ್ತಾರೆ. ಆದರೆ ಬಹುತೇಕರಿಗೆ ನಿತ್ಯಾ ಮೆನನ್ ಕನ್ನಡದವರಲ್ಲ ಎಂದೇ ಅನಿಸಿದೆ.ಇನ್ನು ನಿತ್ಯಾ ಮೆನನ್ 2008 ರಿಂದ ಮಲೆಯಾಳಂ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಮಾಲಿವುಡ್ ನಲ್ಲಿ ನೆಲೆ ಕಂಡುಕೊಂಡರು.

ತದ ನಂತರ ತಮ್ಮ ನಟನಾ ಪ್ರತಿಭೆಯ ಮೂಲಕ ತೆಲುಗು,ತಮಿಳು,ಹಿಂದಿ ಮತ್ತು ಇಂಗ್ಲೀಷ್ ಚಿತ್ರಗಳಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.ತಮ್ಮ ನಟನೆಗೆ ಮೂರು ಫಿಲ್ಮ್ ಫೇರ್ ಪ್ರಶಸ್ತಿ ಮತ್ತು ಎರಡು ನಂದಿ ಅವಾರ್ಡ್ ಪಡೆದುಕೊಂಡಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಪಾತ್ರಗಳು ಬೇಡಕೆ ಇಟ್ಟಂತೆ ತಮ್ಮ ದೇಹದ ತೂಕವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬೇಕಾದ ಅಗತ್ಯ ಇರುವುದರಿಂದ ಆಗಾಗ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡಿರುತ್ತಾರೆ.ಅಥವಾ ಸಾಮಾನ್ಯರಿಗೆ ಕೆಲವು ಸಹಜ ದೈಹಿಕ ಇತರೆ ಸಮಸ್ಯೆಗಳಿಂದ ದಪ್ಪ ಆಗಿರುತ್ತಾರೆ.ಅಂತೆಯೇ ನಟಿ ನಿತ್ಯಾ ಮೆನನ್ ಕೂಡ ಕಳೆದ ಎರಡು-ಮೂರು ವರ್ಷಗಳಿಂದೀಚೆಗೆ ದಪ್ಪವಾಗಿದ್ದಾರೆ.ಇತ್ತೀಚೆಗೆ ಕೆಲವು ಸಾರ್ವಜನಿಕ ವೇದಿಕೆ ಮತ್ತು ತಮ್ಮ ಸಿನಿಮಾಗಳ ಪ್ರಮೋಶನ್ ಸಂಧರ್ಭದಲ್ಲಿ ಹೆಚ್ಚು ತೊಡಗಿಕೊಂಡಿದ್ದರು.ಅಂತಹ ಸಂಧರ್ಭದಲ್ಲಿ ತೆಗೆದ ಅನೇಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು.ನಿತ್ಯಾ ಮೆನನ್ ಫೋಟೋ ನೋಡಿದ ನೆಟ್ಟಿಗನೊಬ್ಬ ನಿಮ್ಮ ಎದೆಯ ಭಾಗ ಬಹಳ ದೊಡ್ಡದಿದೆ ಎಂದು ಕಮೆಂಟ್ ಮಾಡಿದ್ದಾನೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಿತ್ಯಾ ಮೆನನ್ ಇನ್ನೊಬ್ಬರ ದೇಹದ ಬಗ್ಗೆ ಕಮೆಂಟ್ ಮಾಡುವವರು ಸದಾ ಭ್ರಮಾಲೋಕದಲ್ಲೇ ಬದುಕಿರುತ್ತಾರೆ.ಅವರಿಗೆ ನಿಜಾಂಶ ತಿಳಿದಿರುವುದಿಲ್ಲ.ನಟಿಯರು ಅಂದಾಕ್ಷಣ ಯಾವುದೇ ಕೆಲಸ ಕಾರ್ಯ ಮಾಡದೇ ಚೆನ್ನಾಗಿ ತಿಂದು ಮೈ ಬೆಳೆಸಿಕೊಂಡಿರುತ್ತಾರೆ ಎಂಬ ಭಾವನೆಯನ್ನು ಹೊಂದಿರುತ್ತಾರೆ.ಅವರಗೆ ನಮ್ಮ ದೇಹದ ಆರೋಗ್ಯದ ಬಗ್ಗೆ ಕಿಂಚಿತ್ತೂ ತಿಳಿದಿರುವುದಿಲ್ಲ.ಅನಗತ್ಯವಾಗಿ ಇಂತಹ ವಿಚಾರಗಳನ್ನು ಟ್ರೋಲ್ ಮಾಡಿದರೆ ಅದು ನಮ್ಮ ಮೇಲೆ ನಕರಾತ್ಮಕ ಭಾವನೆ ಉಂಟು ಮಾಡುತ್ತದೆ.ಆದರೆ ನನ್ನ ದೇಹದ ಬಗ್ಗೆ ನನಗೆ ಯಾವತ್ತೂ ಕೂಡ ಬೇಸರ ಮಾಡಿಕೊಂಡಿಲ್ಲ.ನನಗೆ ನನ್ನದೇಯಾದಂತಹ ಅನೇಕ ಕೌಶಲ್ಯಗಳಿವೆ.ಇಂತಹ ಸಣ್ಣ ಪುಟ್ಟ ವಿಷಯಗಳಿಗೆ ನಾನು ಎಂದಿಗೂ ತಲೆಕೆಡಿಸಕೊಳ್ಳುವುದಿಲ್ಲ. ನನಗೆ ಕನ್ನಡ,ತೆಲುಗು ತಮಿಳು, ಮಲೆಯಾಳಂ ಸೇರಿದಂತೆ ಹಿಂದಿ ಭಾಷೆಯ ಚಿತ್ರಗಳಲ್ಲಿಯೂ ಕೂಡ ಅವಕಾಶ ಸಿಗುತ್ತಿರುವುದರಿಂದ ಹೊಸ ಭಾಷೆಗಳನ್ನು ಕಲಿಯುವುದಕ್ಕೆ ಇಷ್ಟ ಪಡುತ್ತೇನೆ.ನನಗೆ ಅದರಲ್ಲಿ ಹೆಚ್ಚು ಆಸಕ್ತಿಯಿದೆ.ನನಗದು ಖುಷಿ ನೀಡುತ್ತದೆ.ನಾನೀಗ ನಾನು ನಟಿಸುವ ಎಲ್ಲಾ ಭಾಷೆಗಳ ಸಿನಿಮಾಗೆ ನಾನೇ ಸ್ವತಃ ಡಬ್ಬಿಂಗ್ ಮಾಡುತ್ತೇನೆ.ನನ್ನ ಮುಂದಿನ ಚಿತ್ರ ಬೀಮ್ಲಾ ನಾಯಕ್ ಸದ್ಯದಲ್ಲೇ ತೆರೆಕಾಣಲಿದೆ ಎಂದು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Leave a Reply

%d bloggers like this: