ಬಿಗ್ ಬಾಸ್ ಸಲುವಾಗಿ ಧಾರಾವಾಹಿಗಳ ಸಮಯ ಅದಲು ಬದಲು

ಕನ್ನಡ ಕಿರುತೆರೆಗೆ ಬಿಗ್ ಬಾಸ್ ರಿಯಾಲಿಟಿ ಶೋ ರೀ ಎಂಟ್ರಿ ಕೊಡುತ್ತಿರುವ ಕಾರಣ ಧಾರಾವಾಹಿಗಳ ಪ್ರಸಾರ ವೇಳಾಪಟ್ಟಿ ಅದಲು ಬದಲಾಗಿದೆ. ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿ ಬರುವ ಈ ಬಿಗ್ ಬಾಸ್ ರಿಯಾಲಿಟಿ ಶೋ ಈಗಾಗಲೇ ಪ್ರೋಮೋ ಮೂಲಕ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಯಾಕಂದ್ರೆ ಹಳೆ ಬೇರು ಹೊಸ ಚಿಗುರು ಅನ್ನುವ ಹಾಗೇ ಈ ಬಾರಿಯ ಬಿಗ್ ಬಾಸ್ ಸೀಸನ್ 9ರಲ್ಲಿ ಹೊಸ ಮುಖಗಳ ಜೊತೆಗೆ ಹಳೆಯ ಸೀಸನ್ ಗಳಲ್ಲಿ ಸ್ಪರ್ಧಿಗಳಾಗಿದ್ದ ಒಂದಷ್ಟು ಮಂದಿ ಕೂಡ ಕಾಣಿಸಿಕೊಳ್ತಿರೋದು ಈ ಬಾರಿಯ ಬಿಗ್ ಬಾಸ್ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಾಗಿದೆ. ಯಾವಾಗ ಬಿಗ್ ಬಾಸ್ ರಿಯಾಲಿಟಿ ಶೋ ಸಮಯ ರಾತ್ರಿ 9.30ಕ್ಕೆ ಅಂತ ಫಿಕ್ಸ್ ಆಯ್ತೋ ಆಗ ಟಿ.ಆರ್.ಪಿ ಕಡಿಮೆ ಇರೋ ಧಾರಾವಾಹಿಗಳ ವೇಳಾಪಟ್ಟಿಯನ್ನ ಬದಲಾಯಿಸುವುದಕ್ಕೆ ವಾಹಿನಿ ಮುಂದಾಗಿದೆ. ಅದರಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ದಿನಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದ್ದ ಲಕ್ಷಣ ಧಾರಾವಾಹಿ ಇನ್ಮುಂದೆ ಬದಲಾದ ಸಮಯದಲ್ಲಿ ರಾತ್ರಿ 8.30ಕ್ಕೆ ಪ್ರಸಾರ ಆಗಲಿದೆ.

ಇದೆಲ್ಲದರ ಜೊತೆಗೆ ಮತ್ತೊಂದು ಜನಪ್ರಿಯ ಧಾರಾವಾಹಿ ಆಗಿರೋ ಗಿಣಿರಾಮ ಧಾರಾವಾಹಿ ಕೂಡ ಬದಲಾಗ್ತಿದೆ. ಗಿಣಿರಾಣ ಧಾರಾವಾಹಿ ಟಿಆರ್ಪಿ ಯಲ್ಲಿ ಉತ್ತಮವಾಗಿದೆ. ಹಾಗಾಗಿ ಈ ಧಾರಾವಾಹಿಯ ಟೈಮ್ ಸ್ಲ್ಯಾಬ್ ಅನ್ನ ಬದಲಾವಣೆ ಮಾಡಿದ್ರೆ ವೀಕ್ಷಕರಿಗೆ ಗೊಂದಲ ಉಂಟಾಗಬಹುದು. ಯಾಕಂದ್ರೆ ಗಿಣಿರಾಮ ಧಾರಾವಾಹಿ ನಾಡಿನಾದ್ಯಂತ ಅಪಾರ ಜನ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಬಿಗ್ ಬಾಸ್ ಸೀಸನ್9 ಬರುತ್ತಿರೋದ್ರಿಂದ ಅನಿವಾರ್ಯವಾಗಿ ಗಿಣಿರಾಮ ಧಾರಾವಾಹಿಯನ್ನ ಸಂಜೆ 5.30ಕ್ಕೆ ಪ್ರಸಾರ ಮಾಡುವ ನಿರ್ಧಾರ ಮಾಡಲಾಗಿದೆಯಂತೆ. ಗಿಣಿರಾಮ ಧಾರಾವಾಹಿ ಪ್ರತಿ ದಿನ ರಾತ್ರಿ 8.30ಕ್ಕೆ ಪ್ರಸಾರ ಆಗುತ್ತಿತ್ತು. ಇನ್ಮುಂದೆ ಸಂಜೆ 5.30ಕ್ಕೆ ಗಿಣಿರಾಮ ಧಾರಾವಾಹಿ ಪ್ರಸಾರ ಆಗಲಿದೆ. ಒಟ್ನಲ್ಲಿ ಬಿಗ್ ಬಾಸ್ 9ನೇ ಆವೃತ್ತಿಯ ಆರಂಭ ಆಗ್ತಿರೋ ಪರಿಣಾಮ ಕಲರ್ಸ್ ಕನ್ನಡದ ಒಂದಷ್ಟು ಧಾರಾವಾಹಿಗಳು ಅಂತ್ಯ ಕಂಡರೆ ಮತ್ತೊಂದಷ್ಟು ಧಾರಾವಾಹಿಗಳ ಪ್ರಸಾರದ ವೇಳಾಪಟ್ಟಿಯೇ ಅದಲು ಬದಲಾಗಿದೆ.