ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಕಂಡು ಹಿಡಿದದ್ದು‌ ಇವರೇ ನೋಡಿ

ಇಂದು ಕನ್ನಡ ಕಿರುತೆರೆ ಮಾತ್ರ ಅಲ್ಲದೆ ಭಾರತೀಯ ಕಿರುತೆರೆ ರಂಗದ ಎಲ್ಲಾ ವಾಹಿನಿಯ ಪ್ರಸಿದ್ದ ವಾದ ಮತ್ತು ಅತ್ಯಂತ ಜನಪ್ರಿಯತೆ ಪಡೆದುಕೊಳ್ಳುವ ರಿಯಾಲಿಟಿ ಶೋ ಅಂದರೆ ಅದು ಒನ್ ಅಂಡ್ ಓನ್ಲಿ ಬಿಗ್ ಬಾಸ್ ರಿಯಾಲಿಟಿ ಶೋ. ಈ ಶೋ ಕಿರುತೆರೆ ಲೋಕದಲ್ಲಿ ಅದ್ದೂರಿತನ ಮೆರಗನ್ನ ತಂದೊಡ್ಡುತ್ತದೆ. ವಿಶಿಷ್ಟ ವಿನ್ಯಾಸವುಳ್ಳ ಆಕರ್ಷಕ ಮನೆ. ಆ ಮನೆಯಲ್ಲಿ ಕಿರುತೆರೆ ಮತ್ತು ಸಿನಿಮಾ ತಾರೆಯರು. ಅವರುಗಳೊಟ್ಟಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಜನರಿಗೆ ಪರಿಚಯವಾಗದೆ ಎಲೆಮರೆಕಾಯಿಯಂತೆ ಇರುವ ಅದೆಷ್ಟೋ ಪ್ರತಿಭಾವಂತರನ್ನ ಕರೆತರಲಾಗುತ್ತದೆ. ಸಾಮಾನ್ಯವಾಗಿ ಒಂದೇ ಮನೆಯಲ್ಲಿ ಈ ಒಂದೊಂದು ರೀತಿಯ ವ್ಯಕ್ತಿತ್ವವುಳ್ಳ ವ್ಯಕ್ತಿಗಳು ಇದ್ದಾಗ ಅಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆಗ ಒಂದಷ್ಠು ವ್ಯತಿರಿಕ್ತ ಮಾತುಗಳು, ಜಗಳಗಳು ಆಗುತ್ತವೆ. ಈ ಜಗಳಗಳು ಕಿರುತೆರೆ, ಸಿನಿಮಾ ಸ್ಟಾರ್ ಗಳ ನಡುವೆ ಆದಾಗ ನೋಡುಗರಿಗೆ ಇದೊಂದು ರೀತಿ ಅಚ್ಚರಿ ಆಗುತ್ತವೆ. ಅಂದರೆ ಜನ ಸಾಮಾನ್ಯರಿಗೆ ತೆರೆಯ ಮೇಲೆ ನಟ ನಟಿಯರನ್ನ ಅವರ ಮೇಲೆ ಅಭಿಮಾನ, ಗೌರವ ಇರುತ್ತದೆ.

ಅವರನ್ನ, ಅವರ ವ್ಯಕ್ತಿತ್ವ ಗುಣ ಸ್ವಭಾವಗಳನ್ನ ಹತ್ತಿರದಿಂದ ನೋಡಿರುವುದಿಲ್ಲ. ಅದೇ ಈ ಕಲಾವಿದರನ್ನ ಅವರ ನಿಜವಾದ ವ್ಯಕ್ತಿತ್ವಗಳನ್ನ ಈ ಶೋ ಮೂಲಕ ನೋಡಿದಾಗ ಅವರ ಮೇಲಿದ್ದ ಗೌರವ ಅಭಿಮಾನ ಸಂಪೂರ್ಣವಾಗಿ ಬದಲಾಗುತ್ತದೆ. ಇಂತಹ ಒಂದು ವಿಭಿನ್ನ ರಿಯಾಲಿಟಿ ಶೋ ಅಲೋಚನೆ ಮೊದಲು ಬಂದದ್ದು ನೆದರ್ ಲ್ಯಾಂಡ್ ದೇಶದಲ್ಲಿ. ಜಾನ್ ಡಿ ಮೋಲ್ ಜೂನಿಯರ್ ಎಂಬಾತ ಈ ಡಚ್ ರಿಯಾಲಿಟಿ ಶೋ ಬಿಗ್ ಬ್ರದರ್ ಶೋವನ್ನು ರೂಪಿಸಿದರು. ಈ ಶೋ ನೆದರ್ ಲ್ಯಾಂಡ್ ನ ಮನೆ ಮನಗಳಲ್ಲಿ ಭಾರಿ ಸುದ್ದಿ ಮಾಡಿತು. ಈ ರಿಯಾಲಿಟಿ ಶೋ ಜನಪ್ರಿಯ ಆದ ನಂತರ ಭಾರತವೂ ಸೇರಿದಂತೆ ಇತರೆ ದೇಶಗಳು ಕೂಡ ಒಂದಷ್ಟು ತಮ್ಮ ತಮ್ಮ ದೇಶದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಈ ರಿಯಾಲಿಟಿ ಶೋ ಪ್ರಸಾರವಾಗ ತೊಡಗಿತು. ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಿಗೆ ಪ್ರತ್ಯೇಕವಾಗಿ ಆಡಿಯೋ ಮೈಕ್ರೋಫೋನ್ ನೀಡಿರುತ್ತಾರೆ.

ಇದರಲ್ಲಿ ಅವರು ಆಡುವ ಪ್ರತಿಯೊಂದು ಮಾತುಗಳು ಕೂಡ ರೆಕಾರ್ಡ್ ಆಗಿ ವೀಕ್ಷಕರಿಗೆ ಕೇಳುವಂತಿರುತ್ತದೆ. ಅದರ ಜೊತೆಗೆ ಇಡೀ ರಿಯಾಲಿಟಿ ಶೋ ಮನೆಯ ಮನೆಯ ಎಲ್ಲಾ ಮೂಲೆ ಮೂಲೆಗಳಲ್ಲಿಯೂ ಕ್ಯಾಮೆರಾ ಇರುವುದರಿಂದ ಕೆಲವು ವೈಯಕ್ತಿಕ ದೃಶ್ಯ ಸನ್ನಿವೇಶಗಳನ್ನ ಹೊರತು ಪಡಿಸಿ ಸ್ಪರ್ಧಿಗಳ ಪ್ರತಿಯೊಂದು ಚಟುವಟಿಕೆಗಳು ಸೆರೆ ಆಗುತ್ತವೆ. ಈ ರೀತಿಯಾಗಿ ಸಿನಿಮಾ ತಾರೆಯರು ತಮ್ಮ ನಿಜ ಜೀವನದಲ್ಲಿ ಯಾವ ರೀತಿ ಇರುತ್ತಾರೆ ಅನ್ನೋದನ್ನ ಈ ರಿಯಾಲಿಟಿ ಶೋ ಮೂಲಕ ನೋಡಬಹುದಾಗಿರುತ್ತದೆ. ಇಂತಹದ್ದೊಂದು ರಿಯಾಲಿಟಿ ಶೋ ಇದೀಗ ಭಾರತ ಮಾತ್ರ ಅಲ್ಲದೆ ವಿವಿಧ ದೇಶಗಳಲ್ಲಿ ಯಶಸ್ವಿಯಾಗಿ ಪ್ರಸಾರ ವಾಗುತ್ತಿದೆ. ಅದರಂತೆ ಇದೀಗ ಬಿಗ್ ಬಾಸ್ ಕನ್ನಡದಲ್ಲಿಯೂ ಕೂಡ 8ಸರಣಿಗಳನ್ನ ಯಶಸ್ವಿಯಾಗಿ ಪೂರೈಸಿ ಒಂಭತ್ತನೇ ಅವತರಣಿಕೆಯ ಆರಂಭ ಮಾಡುವ ಉತ್ಸಾಹದಲ್ಲಿದೆ. ಇದಕ್ಕೂ ಮಿನಿ ಬಿಗ್ ಬಾಸ್ ಎಂಬಂತೆ ಓಟಿಟಿಯಲ್ಲಿ ಬಿಗ್ ಬಾಸ್ ಆರಂಭ ಗೊಂಡಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುವ ಬಿಗ್ ಬಾಸ್ ಇದೀಗ ಕನ್ನಡ ಕಿರುತೆರೆ ಲೋಕದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದೆ.

Leave a Reply

%d bloggers like this: