ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ನವಾಜ್ ಅವರಿಗೆ ಸಿಕ್ಕ ಸಂಭಾವನೆ ಎಷ್ಟು

ದೊಡ್ಮನೆಯಿಂದ ಎರಡನೇ ವಾರದಲ್ಲಿಯೇ ಹೊರಬಿದ್ದ ನವಾಜ್ ಅವರಿಗೆ ಸಿಕ್ತು ದೊಡ್ಡ ಮೊತ್ತದ ಸಂಭಾವನೆ. ಇತ್ತೀಚೆಗೆ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿದ್ದ ವ್ಯಕ್ತಿಗಳಲ್ಲಿ ನವಾಜ್ ಕೂಡಾ ಒಬ್ಬರು. ಪ್ರತಿ ಶುಕ್ರವಾರ ಕನ್ನಡ ಸಿನಿಮಾ ರಿಲೀಸ್ ಆಗಿದ್ದೇ ತಡ ಸಿನಿಮಾ ನೋಡಿ ತನ್ನ ವಿಚಿತ್ರ ಮ್ಯಾನರಿಸಂ ಮೂಲಕ ವಿಭಿನ್ನವಾಗಿ ಪ್ರಾಸ ಪದಗಳ ಮೂಲಕ ಸಿನಿಮಾ ವಿಮರ್ಶೆ ಮಾಡಿ ಭಾರಿ ಜನಪ್ರಿಯತೆ ಗಳಿಸಿದ್ದರು. ಸಿನಿಮಾ ರಿಲೀಸ್ ಆಗ್ತಿದೆ ಅಂದರೆ ಅಲ್ಲಿ ಅವತ್ತು ರಿವೀವ್ ಕೊಡೋಕೆ ನವಾಜ್ ಅವಾಜ್ ಇರ್ಲೇಬೇಕು ಅನ್ನೋಷ್ಟರಮಟ್ಟಿಗೆ ಕ್ರೇಜ಼್ ಬೆಳೆಸಿಕೊಂಡಿದ್ದರು. ಇವರನ್ನ ಸೈಕ್ ನವಾಜ್ ಅಂತಾನೇ ಕರೆಯಲಾಗ್ತಿತ್ತು. ಇನ್ನು ಇವರ ಖ್ಯಾತಿಯೇ ಬಿಗ್ ಬಾಸ್ ಸೀಸನ್ 9ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಡುವಂತೆ ಮಾಡಿತು. ಅದೇ ರೀತಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟ ನವಾಜ್ ಆರಂಭ ದಿನಗಳಲ್ಲಿ ಕೊಂಚ ಆಕ್ಟೀವ್ ಆಗಿಯೇ ಇದ್ರು.

ಜೊತೆಗೆ ನಾನ್ ಸರಿ ಇಲ್ಲ. ನನ್ಗ್ ಕೋಪ ಬಂದ್ರೆ ಹೊಡ್ದ್ ಆಕ್ಭಿಡ್ತೀನಿ, ಹಾಗೇ ಹೀಗೆ ಅಂತ ದೊಡ್ಮನೆ ಸದಸ್ಯರಲ್ಲಿ ಅವರ ಬಗ್ಗೆ ಕೊಂಚ ಬೇರೆಯದ್ದೇ ಭಾವನೆ ಮೂಡಲು ಕಾರಣ ಆದ್ರು. ಅದಾದ ನಂತರ ಯಾಕೋ ಏನೋ ಇದ್ದಿಕಿದ್ದಂತೆ ಸೈಲೆಂಟ್ ಆದ ನವಾಜ್ ಟಾಸ್ಕ್ ಗಳಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳದೇ ಗಮನ ಸೆಳೆಯಲಿಲ್ಲ. ನವಾಜ್ ದೊಡ್ಮನೆಯಲ್ಲಿ ಹೆಚ್ಚು ಅರುಣ್ ಸಾಗರ್ ಅವರೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅವರನ್ನ ಹೊರತು ಪಡಿಸಿದರೆ ಸ್ವಲ್ಪ ಮಟ್ಟಿಗೆ ಬೈಕ್ ರೇಸರ್ ಐಶ್ವರ್ಯ ಪಿಸ್ಸೆ ಅವರೊಟ್ಟಿಗೆ ಸಲುಗೆಯಿಂದ ಇದ್ದು ನನ್ನ ಲವ್ ಮಾಡಿ ಎಂದು ಸ್ವಲ್ಪ ಸುದ್ದಿ ಕೂಡ ಆದ್ರು. ಅದೇ ರೀತಿಯಾಗಿ ದೀಪಿಕಾ ದಾಸ್ ಅವರನ್ನ ಕೂಡ ನನಗೆ ನೀವ್ ಅಂದ್ರೆ ಇಷ್ಟ ಅಂತೇಳಿ ದೀಪಿಕಾ ದಾಸ್ ಅವರೊಟ್ಟಿಗೆ ಸಹ ಒಂದೊಳ್ಳೆ ಭಾಂಧವ್ಯ ಬೆಳೆಸಿಕೊಳ್ಳುತ್ತಿದ್ದರು.

ಆದರೆ ಎರಡನೇ ವಾರಕ್ಕೆ ನಾಮಿನೇಟ್ ಆದ್ರು. ಸದ್ದಿಲ್ಲದೆ ಸುಮ್ಮನಾಗಿದ್ದ ನವಾಜ್ ರೂಪೇಶ್ ರಾಜಣ್ಣ ಅವರೊಟ್ಟಿಗೆ ಮನೆಯಿಂದ ಹೊರ ಬೀಳೋ ಸ್ಪರ್ಧೆಯ ಹಂತದಲ್ಲಿ ನವಾಜ್ ಗೆ ಸೋಲಾಯ್ತು ಅಂತೇಳ್ಭೋದು. ನವಾಜ್ ನನ್ನನ್ನ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದ ಐಶ್ವರ್ಯ ಪಿಸ್ಸೆ ಮೊದಲನೇ ವಾರದಲ್ಲಿ ದೊಡ್ಮನೆಯಿಂದ ಹೊರ ಬಿದ್ರೆ, ಎರಡನೇ ವಾರದಲ್ಲಿ ನವಾಜ್ ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ನಂತರ ಕಾಡೋದು ಅಂದ್ರೆ ಅದು ಈ ಸ್ಪರ್ಧಿಗಳಿಗೆ ಎಷ್ಟು ಸಂಭಾವನೆ ನೀಡಿದ್ದಾರೆ ಅನ್ನೋದು. ಅದ್ರಂತೆ ನವಾಜ್ ಗೆ ಬಿಗ್ ಬಾಸ್ ನಿಂದು ಬರೋಬ್ಬರಿ ‘ಒಂದು ಲಕ್ಷ’ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ. ಮೊದಲ ಕೆಲವು ದಿನ ವಿಚಿತ್ರವಾಗಿ ಮಾತಾಡುತ್ತಿದ್ದ ನವಾಜ್ ಅವರು ಮುಂದಿನ ದಿನಗಳಲ್ಲಿ ಮನೆಗೆ ಹೊಂದಿಕೊಂಡು ಚೆನ್ನಾಗಿ ಆಡುತ್ತಿದ್ದರೂ ಸಹ ಎರಡೇ ವಾರಕ್ಕೆ ಅವರು ಹೊರಬರಬೇಕಾಯಿತು.