ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರಣ ಯೋಗೇಶ್ವರ್ ಅವರು ಸೋನು ಶ್ರೀನಿವಾಸ ಗೌಡ ಅವರ ಬಗ್ಗೆ ಹೀಗೆ ಹೇಳಿದ್ರು

ಸೋನು ಶ್ರೀನಿವಾಸ್ ಗೌಡ ಮುಗ್ದೆ ಅಂತೆ..ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಬಹು ಬೇಗ ವೀಕ್ಷಕರನ್ನ ಮುಟ್ಟಿದ್ದು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಮೊದಲ ವಾರದಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಸ್ಟ್ರಾಟಿಜಿ ಮೂಲಕ ಗೇಮ್ ಪ್ಲಾನ್ ಮಾಡಿಕೊಂಡು ಆಡುತ್ತಿದ್ದಾರೆ. ಅದರಂತೆ ಮೊದಲ ವಾರದಲ್ಲೇ ನಾಮಿನೇಟ್ ಆಗಿ ಸ್ಪರ್ಧಿ ಕಿರಣ ಯೋಗೇಶ್ವರ್ ಹೊರ ಬಂದಿದ್ದಾರೆ. ದೊಡ್ಮನೆಯಿಂದ ಹೊರ ಬಂದ ಬಳಿಕ ಕಿರಣ ಯೋಗೇಶ್ವರ್ ಅವರು ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಸಹ ಸ್ಪರ್ಧಿಯಾಗಿದ್ದ ವೈರಲ್ ಹುಡುಗಿ ಸೋನು ಶ್ರೀ ನಿವಾಸ್ ಗೌಡ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು ಓಟಿಟಿಯಲ್ಲಿ ಭಾರಿ ಸದ್ದು ಮಾಡುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಮೊದಲ ವಾರದಲ್ಲಿಯೇ ಭಾರಿ ಜನಪ್ರಿಯತೆ ಪಡೆದುಕೊಂಡು ಯಶಸ್ವಿಯಾಗಿ ಸಾಗುತ್ತಿದೆ.

ಈ ಬಿಗ್ ಬಾಸ್ ಓಟಿಟಿಯಲ್ಲಿ ಇರುವ ಸೋಶಿಯಲ್ ಮೀಡಿಯಾ ಎಲ್ಲಾ ಸ್ಟಾರ್ ಗಳು ತಮ್ಮ ಚಾಣಾಕ್ಷ್ಯತನದಿಂದ ಗೇಮ್ ಆಡುತ್ತಿದ್ದಾರೆ. ಈ ಹಿಂದಿನ ಎಲ್ಲಾ ಬಿಗ್ ಬಾಸ್ ಅವತರಣಿಕೆಗಳಲ್ಲಿ ಸ್ಪರ್ಧಿಗಳ ನಡುವೆ ಆಗುತ್ತಿದ್ದ ತುಂಟತನ, ಜಗಳ, ಮಾತುಕತೆ ಅಲ್ಲಲ್ಲಿ ಒಂದಷ್ಪು ಮನಸ್ತಾಪಗಳು ಏರ್ಪಟ್ಟಿವೆ. ಇನ್ನು ಈ ಮೊದಲ ವಾರದ ನಾಮಿನೇಶನ್ ಪ್ರಕ್ರಿಯೆಯಲ್ಲಿ ಕಿರಣ ಯೋಗೇಶ್ವರ್ ಅವರು ಅತೀ ಕಡಿಮೆ ಓಟ್ ಪಡೆಯುವ ಮೂಲಕ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಬಳಿಕ ಕಿರಣ ಯೋಗೇಶ್ವರ್ ಅವರು ನೇರವಾಗಿ ಟಿಕ್ ಟಾಕ್ ಸ್ಟಾರ್ ಅಂತಾನೇ ಕರೆಸಿಕೊಳ್ಳುವ ವೈರಲ್ ಹುಡುಗಿ ಸೋನು ಶ್ರೀನಿವಾಸ್ ಗೌಡ ಬಗ್ಗೆ ಅವಳು ತಾನು ಎಲ್ಲರನ್ನ ಆಕರ್ಷಣೆ ಮಾಡಬೇಕು ಎಂದು ಒಂದೊಂದು ಸಮಯದಲ್ಲಿ ಒಂದೊಂದು ರೀತಿಯಲ್ಲಿ ವಿಚಿತ್ರವಾಗಿ ವರ್ತಿಸುತ್ತಾರೆ.

ಅವರಿಗೆ ಸಾಮಾನ್ಯ ಜ್ಞಾನದ ಕೊರತೆ ಇದೆ. ಇಡೀ ಮನೆಯಲ್ಲಿ ತಾನು ಕೇಂದ್ರೀಕೃತವಾಗಬೇಕು ಎಂಬ ಉದ್ದೇಶದಿಂದ ನಾಟಕೀಯವಾಗಿ ಒಮ್ಮೊಮ್ಮೆ ಚಿಕ್ಕ ಮಗು ಥರಾ ಇರ್ತಾರೆ. ಕೆಲವು ಬಾರಿ ಏನೇನೋ ಮಾತನಾಡಿ ಗೊಂದಲ ಸೃಷ್ಟಿ ಮಾಡುತ್ತಾರೆ. ಅವರಿಗೆ ಜೀವನದ ಅನುಭವ ಕಡಿಮೆ ಇದೆ. ಸೋನು ಒಂದು ರೀತಿ ಮುಗ್ದೆ, ಅವಳಿಗೆ ತನ್ನ ವ್ಯಕ್ತಿತ್ವ ವರ್ತನೆ ಮತ್ತು ಅವರಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದು ಸದ್ಯಕ್ಕೆ ಅರಿವಾಗುತ್ತಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ತಮ್ಮ ಈ ನಡವಳಿಕೆಯ ಬಗ್ಗೆ ಅವರಿಗೆ ಅರ್ಥ ಆಗಲಿದೆ ಎಂದು ಸೋನು ಬಗ್ಗೆ ಬಿಗ್ ಬಾಸ್ ನಿಂದ ಹೊರ ಬಂದ ಕಿರಣ ಯೋಗೇಶ್ವರ್ ಅವರು ತಿಳಿಸಿದ್ದಾರೆ.