ಬಿಗ್ ಬಾಸ್ ಕನ್ನಡದ ಮನೆಯಿಂದ ಹೊರಬಂದ ದರ್ಶ್ ಚಂದ್ರಪ್ಪ ಅವರು, ಇನ್ನೂ ಇರಬೇಕಿತ್ತು ಎಂದ ಅಭಿಮಾನಿಗಳು

ದೊಡ್ಮನೆಯಿಂದ ಈ ವಾರ ಹೊರಬಿದ್ದದ್ದು ಯಾರ್ ಗೊತ್ತಾ! ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಂಭತ್ತನೇ ಆವೃತ್ತಿಯು ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುವ ಮೂಲಕ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಕೆಲವು ದಿನಗಳಿಂದ ದೊಡ್ಮನೆಯ ವಾತಾವರಣ ಸಖತ್ ಬಿಸಿ ಆಗಿದೆ. ಅದರಲ್ಲೂ ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ಅವರ ಟಾಪಿಕ್ ಸಖತ್ ಕ್ಯೂರಿಯಾಸಿಟಿ ಹುಟ್ಟಿಕೊಳ್ಳುವ ಹಾಗೇ ಮಾಡಿದೆ. ಟಾಸ್ಕ್ ಗಳಲ್ಲಿ ಸ್ಪರ್ಧಿ ಯಾವ ರೀತಿಯಾಗಿ ತೊಡಗಿಸಿಕೊಳ್ತಾರೆ ಮತ್ತು ಅವರ ವ್ಯಕ್ತಿತ್ವ, ನಡವಳಿಕೆ ಹೇಗೆ ಇರುತ್ತೆ, ಎಷ್ಟರ ಮಟ್ಟಿಗೆ ಆ ಸ್ಪರ್ಧಿ ಜನರಿಗೆ ಎಂಟರ್ಟೈನ್ ನೀಡ್ತಾರೆ ಅನ್ನೋದರ ಆಧಾರದ ಮೇಲೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಉಳಿದುಕೊಳ್ಳುತ್ತಾರೆ. ಜನರಿಗೆ ಇಷ್ಟವಾಗದಿದ್ದಲ್ಲಿ, ಅಥವಾ ಅತ್ಯಂತ ಕಡಿಮೆ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಲ್ಲಿ ಆ ಸ್ಪರ್ಧಿ ದೊಡ್ಮನೆಯಿಂದ ಹೊರ ಬೀಳುವುದು ಸಾಮಾನ್ಯ.

ಅದರಂತೆ ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಮೂರನೇ ವಾರದಲ್ಲಿ ದರ್ಶ್ ಚಂದಪ್ಪ ಅವರು ಹೊರ ಬಿದ್ದಿದ್ದಾರೆ. ಮೊದಲ ವಾರದಲ್ಲಿ ಐಶ್ವರ್ಯ ಪಿಸ್ಸಿ, ಎರಡನೇ ವಾರದಲ್ಲಿ ನವಾಜ್, ಈಗ ಮೂರನೇ ವಾರದಲ್ಲಿ ದರ್ಶ್ ಚಂದಪ್ಪ ಹೊರ ಬಂದಿದ್ದಾರೆ. ದರ್ಶ್ ಚಂದಪ್ಪ ಅವರು ದೊಡ್ಮನೆಯಲ್ಲಿ ಎಲ್ಲರೊಟ್ಟಿಗೆ ಅತಿಯಾಗಿ ಅಲ್ಲದಿದ್ದರು ಕೂಡ ತಕ್ಕಮಟ್ಟಿಗೆ ಹೊಂದಾಣಿಕೆಯಾಗಿ ಬೆರೆತಿದ್ದರು. ಟಾಸ್ಕ್ ಗಳಲ್ಲಿಯೂ ಸಹ ಉತ್ತಮವಾಗಿ ಆಟವಾಡಿದ್ದರು. ಕೆಲವು ದಿನಗಳ ಹಿಂದೆ ದಿವ್ಯಾ ಉರುಡುಗ ಪ್ರಶಾಂತ್ ಸಂಬರ್ಗಿ ಅವರು ಹೆಣ್ಣು ಮಕ್ಕಳ ಬಗ್ಗೆ ನೆಗೆಟೀವ್ ಆಗಿ ಮಾತನಾಡಿದ್ದಾರೆ ಅನ್ನೋ ವಿಚಾರ ಬಂದಾಗ ದರ್ಶ್ ಚಂದಪ್ಪ ಪ್ರಶಾಂತ್ ಸಂಬರ್ಗಿ ಅವರ ವಿರುದ್ದ ಮಾತನಾಡಿದ್ದರು. ಅದಾದ ನಂತರ ದರ್ಶ್ ಚಂದಪ್ಪ ದೊಡ್ಮನೆಯಲ್ಲಿ ಸದ್ದು ಕೂಡ ಮಾಡಿದ್ರು. ಆರ್ಯವರ್ಧನ್ ಅವರೊಟ್ಟಿಗೆ ಜೊತೆಗೂಡಿ ಒಂದಿಷ್ಟು ಸಖತ್ ಎಂಟರ್ಟೈನ್ ಕೂಡ ಮಾಡಿದ್ದರು.

ನೇರ ನುಡಿ ಆಗಿರೋ ದರ್ಶ್ ಚಂದಪ್ಪ ಅವರಿಗೆ ಕೆಲವು ದಿನಗಳ ಹಿಂದೆ ಅದೇ ದೊಡ್ಮನೆಯ ಸದಸ್ಯರು ಬೇರೆಯದ್ದೇ ರೀತಿ ಅಭಿಪ್ರಾಯ ಹೇಳಿದಾಗ ದರ್ಶ್ ಭಾವುಕರಾಗಿ ಕಣ್ಣೀರಾಕಿದ್ದು ಕೂಡ ಇದೆ. ಆ ಸಂಧರ್ಭದಲ್ಲಿ ನಾನು ಕಲಾವಿದನಾಗಬೇಕು ಅಂತ ತುಂಬಾ ಕಷ್ಟ ಪಟ್ಟು ಬಣ್ಣದ ಲೋಕಕ್ಕೆ ಬಂದೆ. ಆದರೆ ಕಿರುತೆರೆ ಅಥವಾ ಸಿನಿಮಾಗಳಲ್ಲಿ ನಿರೀಕ್ಷೆ ತಕ್ಕ ಹಾಗೇ ಅವಕಾಶ ಸಿಗಲಿಲ್ಲ. ಆದರೆ ಅದರಿಂದ ನಾನು ಕುಗ್ಗಲಿಲ್ಲ. ನನ್ನದೇ ಒಂದು ಉದ್ಯಮ ಆರಂಭ ಮಾಡಿ ಸಕ್ಸಸ್ ಕಾಣುತ್ತಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನ ನುಡಿದಿದ್ದರು. ಇನ್ನು ದರ್ಶ್ ಚಂದಪ್ಪ ಅವರು ಮಾಡ್ಲೆಂಗ್ ನಲ್ಲಿ ಗುರುತಿಸಿಕೊಂಡು ತದ ನಂತರ ದುರ್ಗಾ ಅನ್ನೋ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಅದಲ್ಲದೆ ದರ್ಶ್ ಚಂದಪ್ಪ ತ್ರೀ ರೋಸಸ್ ಅನ್ನೋ ಸಿನಿಮಾದಲ್ಲಿಯೂ ಸಹ ನಟಿಸಿದ್ದಾರೆ. ಬಿಗ್ ಬಾಸ್ 9ನೇ ಆವೃತ್ತಿಗೆ ಪ್ರವೇಶ ಪಡೆದು ಇದೀಗ ಮೂರನೇ ವಾರದಲ್ಲಿ ದೊಡ್ಮನೆಯಿಂದ ಹೊರ ಬಂದಿದ್ಧಾರೆ.

Leave a Reply

%d bloggers like this: