ಬಿಗ್ ಬಾಸ್ ಕನ್ನಡ ಓಟಿಟಿ, ಈ ಮೂವರಿಗೆ ಸಿಕ್ತು ಫಿನಾಲೆ ವಾರಕ್ಕೆ ನೇರ ಟಿಕೆಟ್

ಬಿಗ್ ಬಾಸ್ ಓಟಿಟಿ ಇನ್ನು ಕೆಲವೇ ದಿನಗಳಲ್ಲೇ ಅಂತ್ಯ ಕಾಣಲಿದೆ. ಇದರ ನಡುವೆಯೇ ಕೆಲವು ಸ್ಪರ್ಧಿಗಳು ನೇರವಾಗಿ ಫೈನಲ್ ಸ್ಟೇಜ್ ಪ್ರವೇಶ ಮಾಡಿದ್ದಾರೆ. ಅದೂ ಕೂಡ ನಟ ಕಮ್ ರ್ಯಾಪರ್ ಆಗಿ ಗುರುತಿಸಿಕೊಂಡಿದ್ದ ನಟ ರಾಕೇಶ್ ಅಡಿಗ ನೇರವಾಗಿ ಫೈನಲ್ ರೌಂಡ್ಗೆ ಆಯ್ಕೆ ಆಗಿದ್ದಾರೆ. ರಾಕೇಶ್ ಅಡಿಗ ಅವರನ್ನ ಜನರು ಆಯ್ಕೆ ಮಾಡಿರೋದ್ರಿಂದ ಫೈನಲ್ ರೌಂಡ್ಗೆ ಆಯ್ಕೆ ಆಗಿದ್ದಾರೆ. ಇನ್ನು ರೂಪೇಶ್ ಶೆಟ್ಟಿ ಮನೆಯ ಕ್ಯಾಪ್ಟನ್ ಆಗಿರೋದ್ರಿಂದ ಅವರು ನೇರವಾಗಿ ಫೈನಲ್ ರೌಂಡ್ ಸೇರ್ಪಡೆ ಆಗಿದ್ದಾರೆ. ಆದರೆ ಪುಟ್ಟ ಗೌರಿ ಸೀರಿಯಲ್ ಖ್ಯಾತಿಯ ಸಾನ್ಯಾ ಅಯ್ಯರ್ ಅವರು ಕೂಡ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ. ಕ್ಯಾಪ್ಟನ್ ಆಗಿರೋ ರೂಪೇಶ್ ಶೆಟ್ಟಿ ಅವರಿಗೆ ಒಂದು ಅವಕಾಶ ಒದಗಿ ಬರುತ್ತೆ. ಅದೇನಪ್ಪಾ ಅಂದ್ರೆ ಅವರು ಇರುವ ಸ್ಪರ್ಧಿಗಳಲ್ಲಿ ಯಾರಾನ್ನಾದರು ಫೈನಲ್ ರೌಂಡ್ಗೆ ಆಯ್ಕೆ ಮಾಡೋ ಅಧಿಕಾರ ಇರುತ್ತೆ. ಆಗ ರೂಪೇಶ್ ಅವರು ಸಾನ್ಯಾ ಅಯ್ಯರ್ ಅವರನ್ನ ಫೈನಲ್ ರೌಂಡ್ಗೆ ಆಯ್ಕೆ ಮಾಡುತ್ತಾರೆ.

ಈಗಾಗಲೇ ಸಾಕಷ್ಟು ಮನರಂಜನೆ ನೀಡುತ್ತಿರೋ ಬಿಗ್ ಬಾಸ್ ಓಟಿಟಿ ಶೋ ಸಖತ್ ಕುತೂಹಲ ಮೂಡಿಸಿದೆ. ಸದ್ಯಕ್ಕೆ ದೊಡ್ಮನೆಯಲ್ಲಿ ಒಂಭತ್ತು ಸ್ಪರ್ಧಿಗಳಿದ್ದಾರೆ. ಐದನೇ ವಾರದಲ್ಲಿ ಇದೀಗ ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಕಳೆದ ವಾರ ನಡೆದ ಡಬಲ್ ಎಲಿಮಿನೇಶನ್ ನಲ್ಲಿ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಅವರು ದೊಡ್ಮನೆಯಿಂದ ಹೊರ ಬಿದ್ದಿದ್ದಾರೆ. ಇದೀಗ ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಸೋನು ಶ್ರೀ ನಿವಾಸ್ ಗೌಡ, ನಂದಿನಿ, ಜಶ್ವಂತ್ ಇವರಲ್ಲಿ ಮುಂದಿನ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಅನ್ನೋದು ಈ ವಾರಾಂತ್ಯದಲ್ಲಿ ತಿಳಿಯಲಿದೆ. ಇನ್ನು ಕಳೆದ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರೋ ಸೋನು ಶ್ರೀನಿವಾಸ್ ಗೌಡ ಅವರು ಮನೆಯಲ್ಲಿ ತೋರಿದ ಕೆಲವು ಅಲಕ್ಷ್ಯತನದ ವರ್ತನೆಗಾಗಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಹೆಚ್ಚು ಜನರ ಪ್ರೀತಿ ಗಳಿಸಿರೋ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ ವಿನ್ನರ್ ಆಗ್ಬೋದು ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.

Leave a Reply

%d bloggers like this: