ಬಿಗ್ ಬಾಸ್ ಕನ್ನಡ ಗ್ಯಾಂಡ್ ಓಪನಿಂಗ್, ಇಲ್ಲಿದೆ ಸಂಭಾವ್ಯ ಸ್ಪರ್ಧಿಗಳ‌ ಪಟ್ಟಿ

ಈ ಬಾರಿ ದೊಡ್ಮನೆಯಲ್ಲಿ ಇರೋ ದೊಡ್ಮಂದಿ ಯಾರ್ಯಾರ್ ಗೊತ್ತಾ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅನೇಕರು ಈಗಾಗಲೇ ಈ ಬಿಗ್ ಬಾಸ್ ಸೀಸನ್ 9ರಲ್ಲಿ ಇಂತಹ ವ್ಯಕ್ತಿಗಳೇ ಇರಲಿದ್ದಾರೆ ಎಂಬ ಊಹೆಗಳನ್ನ ಕೂಡ ಮಾಡ್ತಿದ್ದಾರೆ‌. ಅದರ ಜೊತೆಗೆ ತಾವೇ ಒಂದಷ್ಟು ಮಂದಿಯನ್ನ ಬಿಗ್ ಬಾಸ್ ಮನೆಯೊಳಗೆ ಇರ್ಬೇಕು ಅಂತ ಅಭಿಪ್ರಾಯ ಇಚ್ಚೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಮತ್ತು ಅತಿ ಹೆಚ್ಚಾಗಿ ವೀಕ್ಷಣೆ ಮಾಡೋ ಕಾರ್ಯಕ್ರಮಗಳಲ್ಲಿ ಬಿಗ್ ಬಾಸ್ ಶೋ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ತಮ್ಮ ನೆಚ್ಚಿನ ನಟ ನಟಿಯರು ನಿಜ ಜೀವನದಲ್ಲಿ ಹೇಗಿರ್ತಾರೆ. ಅವರ ನೈಜ ಸ್ವಭಾವ ವ್ಯಕ್ತಿತ್ವ ಹೇಗಿರುತ್ತೆ ಅನ್ನೋದನ್ನ ತಿಳಿದುಕೊಳ್ಳೋದಕ್ಕೆನೇ ವೀಕ್ಷಕರು ಈ ಕಾರ್ಯಕ್ರಮ ನೋಡ್ತಾರೆ.

ಇನ್ನು ಅದ್ರಂತೆಕಳೆದ ಕೆಲವು ದಿನಗಳ ಹಿಂದೆಯಷ್ಟೆ ಬಿಗ್ ಬಾಸ್ ಓಟಿಟಿಗೆ ತೆರೆ ಬಿದ್ದಿದೆ. ಬಿಗ್ ಬಾಸ್ ಓಟಿಟಿಯಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆಗಿ ಈ ಬಿಗ್ ಬಾಸ್ 9ನೇ ಆವೃತ್ತಿಗೆ ಅಧಿಕೃತವಾಗಿ ಎಂಟ್ರಿ ಪಡೆದುಕೊಂಡಿದ್ದಾರೆ. ಅವರ ನಟ ರಾಕೇಶ್ ಅಡಿಗ, ಸಾನ್ಯಾ ಅಯ್ಯರ್ ಮತ್ತು ಆರ್ಯ ವರ್ಧನ್ ಕೂಡ ಈ ಸೀಸನ್ ನಲ್ಲಿ ಇರಲಿದ್ದಾರೆ. ಈ ನಾಲ್ವರ ಜೊತೆಗೆ ಬಿಗ್ ಬಾಸ್ ಹಳೆಯ ಸೀಸನ್ ಗಳಲ್ಲಿ ಭಾಗವಹಿಸಿದ ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್, ವೈಷ್ಣವಿ ಗೌಡ, ಅನುಪಮಾ ಗೌಡ ಸಹ ಇರಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಬಿಗ್ ಬಾಸ್ 9ನೇ ಸೀಸನ್ ನಲ್ಲಿ ಪ್ರವೀಣರ ಜೊತೆ ನವೀನರು ಎಂಬ ಕಲ್ಪನೆಯಡಿ ಆರಂಭವಾಗಲಿದೆ. ಮೂಲಗಳ ಪ್ರಕಾರ ಖ್ಯಾತ ನಟಿ ಪ್ರೇಮಾ, ಇತ್ತೀತೆಗೆ ವಿವಾದಕ್ಕೊಳಕ್ಕಾದ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟ ಅನಿರುದ್ದ್.

ಸೋಶಿಯಲ್ ಮೀಡಿಯಾದಲ್ಲಿ ತನ್ನ ವಿಶಿಷ್ಟ ರೀತಿಯ ಹಾಡಿನ ಮೂಲಕ ಗಮನ ಸೆಳೆದ ಕಾಪಿನಾಡು ಚಂದು, ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯಗೌಡ, ಮುದ್ದು ಮಣಿಗಳು ಖ್ಯಾತಿಯ ನಟಿ ಸಮೀಕ್ಷಾ ಗೌಡ, ಗಿಚ್ಚಿ ಗಿಲಿ ಗಿಲಿ ಕಾಮಿಡಿ ಶೋ ಖ್ಯಾತಿಯ ಚಂದ್ರಪ್ರಭಾ, ರಾಘವೇಂದ್ರ, ಸರಿಗಮಪ ಶೋ ಗಾಯಕಿ ಆಶಾ ಭಟ್ ಸೇರಿದಂತೆ ಒಟ್ಟು 18 ಮಂದಿ ಈ ಬಾರಿಯ ಬಿಗ್ ಬಾಸ್ ನಲ್ಲಿ ಇರಲಿದ್ದಾರೆ ಎಂದು ತಿಳಿದು ಬಂದಿದೆ಼. ಆದರೆ ಈ ಪಟ್ಟಿ ಫೈನಲ್ ಅಲ್ಲ, ಪಟ್ಟಿಯಲ್ಲಿನ ಕೆಲವು ಸ್ಪರ್ಧಿಗಳಂತೂ ಬರುತ್ತಾರೆ. ಇದೇ ಸೆಪ್ಟೆಂಬರ್ 24ರಂದು ಕಲರ್ಸ್ ಕನ್ನಡದಲ್ಲಿ ಗ್ರ್ಯಾಂಡ್ ಆಗಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗಲಿದ್ದು, ಅಧಿಕೃತವಾಗಿ ಸ್ಪರ್ಧಿಗಳ ಮಾಹಿತಿ ಅಂದೇ ಹೊರ ಬೀಳಲಿದೆ. ಒಟ್ಟಾರೆಯಾಗಿ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಮೂಡಿ ಬರೋ ಬಿಗ್ ಬಾಸ್ 9ನೇ ಸೀಸನ್ ಈ ಬಾರಿ ಕಳೆದ ಬಾರಿಗಿಂತ ಅದ್ದೂರಿಯಾಗಿಯೇ ಇರಲಿದೆ ಎಂದು ತಿಳಿದು ಬಂದಿದೆ.

Leave a Reply

%d bloggers like this: