ಬಿಗ್ ಬಾಸ್ ಇಂದ ಹೊರ ನಡೆದ ನಂದಿನಿ, ನಂದಿನಿ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ

ಬಿಗ್ ಬಾಸ್ ಓಟಿಟಿ ನಲ್ಲಿ ಭಾಗವಹಿಸುವುದಕ್ಕೆ ಸ್ಪರ್ಧಿ ನಂದಿನಿ ಪಡೆದ ಸಂಭಾವನೆ ಇಷ್ಟೊಂದು ಎಂದು ಅಚ್ಚರಿ ವ್ಯಕ್ತವಾಗುತ್ತಿದೆ. ಕೆಲವರಿಗೆ ಈ ಮೊತ್ತ ಅವರಿಗೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಏನ್ ದಬಾಕಿದ್ದಾರೆ ಅಂತ ಅವ್ರಿಗೆ ಒಂದು ವಾರಕ್ಕೆ ಇಷ್ಟೊಂದು ಹಣ ನೀಡ್ತಿದ್ದಾರೆ ಎಂದು ಹೇಳ್ತಿದ್ದಾರೆ. ಹಾಗಿದ್ರೇ ಈಗ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ನಲ್ಲಿ ದೊಡ್ಮನೆಯಿಂದ ಹೊರ ಬಿದ್ದಿರುವ ನಂದಿನಿ ಪಡೆದ ಸಂಭಾವನೆ ಎಷ್ಟು ಎಂದು ತಿಳಿಯೋಣ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಈ ಬಾರಿ ವಿಭಿನ್ನ ಪ್ರಯೋಗಕ್ಕೆ ಹೆಜ್ಜೆ ಇಟ್ಟಿತ್ತು. ಅದೇನಪ್ಪಾ ಅಂದ್ರೆ ಈ ಬಾರಿ ಸ್ಯಾಟಲೈಟ್ ಗಿಂತ ಡಿಜಿಟಲ್ ಮೂಲಕ ಸನ್ಶೇನಲ್ ಕ್ರಿಯೇಟ್ ಮಾಡೋಣವಂತ ಕನ್ನಡ ಬಿಗ್ ಬಾಸ್ ಆಯೋಜಕರು ಓಟಿಟಿ ವೂಟ್ ಆಪ್ ನಲ್ಲಿ ಈ ಬಿಗ್ ಬಾಸ್ ಕಾರ್ಯಕ್ರಮವನ್ನ ಆರಂಭಿಸಿದರು.

ಬಿಗ್ ಬಾಸ್ ಓಟಿಟಿ ರಿಯಾಲಿಟಿ ಶೋನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದ ಒಂದಷ್ಟು ಮಂದಿಗಳನ್ನ ಆಯ್ಕೆ ಮಾಡಲಾಯಿತು. ಸ್ಪರ್ಧಿಗಳ ಆಯ್ಕೆಗೆ ಸಾರ್ವಜನಿಕ ವಲಯದಲ್ಲಿ ಕೆಲವು ಅಸಮಾಧಾನ ಕೂಡ ವ್ಯಕ್ತವಾಯಿತು. ಬಳಿಕ ಸೋಶಿಯಲ್ ಮೀಡಿಯಾ ಜೊತೆಗೆ ಒಂದಷ್ಟು ಸಿನಿಮಾ ಕಿರುತೆರೆ ಕಲಾವಿದರನ್ನ ಕೂಡ ದೊಡ್ಮನೆಗೆ ಇರಿಸಲಾಯಿತು. ಸದ್ಯಕ್ಕೆ ಈ ಬಿಗ್ ಬಾಸ್ ಓಟಿಟಿಯಲ್ಲಿ ಸಖತ್ ಸುದ್ದಿ ಮಾಡಿದ್ದು ಅಂದರೆ ಅದು ಜಸ್ವಂತ್ ಮತ್ತು ನಂದಿನಿ. ಈ ಇಬ್ಬರು ಸ್ಪರ್ಧಿಗಳು ದೊಡ್ಮನೆಯಲ್ಲಿ ಸಾಕಷ್ಟು ಬಾರಿ ರೊಮ್ಯಾಂಟಿಕ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ಆತ್ಮೀಯತೆ ಅಷ್ಟರ ಮಟ್ಟಿಗೆ ಇದ್ದು, ಇದೀಗ ನಂದಿನಿ ದೊಡ್ಮನೆಯಿಂದ ಹೊರ ಬಿದ್ದಿದ್ದಾರೆ.

ಇದು ಜಸ್ವಂತ್ ಅವರಿಗೆ ಬೇಜಾರಿನ ಸಂಗತಿ ಕೂಡ ಆಗಿದೆ. ನಂದಿನಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಅನೇಕ ಸಂದರ್ಶನಗಳಲ್ಲಿ ತಮ್ಮ ಗೆಳೆಯ ಜಸ್ವಂತ್ ಅವರ ಬಗ್ಗೆ ಕೇಳಿದಾಗಲೆಲ್ಲಾ ಮುಂದೆ ಉತ್ತರ ನೀಡ್ತೇನೆ ಎಂದಷ್ಟೆ ಹೇಳ್ತಿದ್ದಾರೆ. ಜಸ್ವಂತ್ ಮತ್ತು ನಂದಿನಿ ಇಬ್ಫರು ಕೂಡ ಲವ್ ಮಾಡುತ್ತಿದ್ದಾರೆ ಅನ್ನೋದು ಒಂದಷ್ಟು ಸುದ್ದಿ. ಆದ್ರೇ ಈ ಬಗ್ಗೆ ಅವರೇ ಸ್ಪಷ್ಟನೆ ನೀಡ್ಬೇಕು. ಇನ್ನು ನಂದಿನಿ ಅವರು ಬಿಗ್ ಬಾಸ್ ನಲ್ಲಿ ಭಾಗವಹಿಸಲು ವಾರವೊಂದಕ್ಕೆ ಮೂವತ್ತು ಸಾವಿರ ರೂ.ಸಂಭಾವನೆ ತೆಗೆದುಕೊಳ್ಳುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಬಿಗ್ ಬಾಸ್ ಓಟಿಟಿ ಫೈನಲ್ ರೌಂಡ್ ನಲ್ಲಿ ಕ್ಯಾಪ್ಟನ್ ರೂಪೇಶ್ ಶೆಟ್ಟಿ, ರಾಕೇಶ ಅಡಿಗ, ಸಾನ್ಯ ಇದ್ದು, ಉಳಿದ ಸ್ಪರ್ಧಿಗಳು ತೀವ್ರ ಪೈಪೋಟಿ ನಡೆಸಬೇಕಾಗಿದೆ.