ಬಿಗ್ ಬಾಸ್ ಅಲ್ಲಿ ನಿಲ್ಲುತ್ತಲೇ ಇಲ್ಲ ಈ ಇಬ್ಬರು ಸ್ಪರ್ಧಿಗಳ ಮುಸುಕಿನ ಗುದ್ದಾಟ

ಬಿಗ್ ಬಾಸ್ ಮನೆಯಲ್ಲಿ ದಿನ ಕಳೆದಂತೆ ವೈಮನಸ್ಸಿನ ಮುಸುಕಿನ ಗುದ್ದಾಟದ ಬಿಸಿ ಜೋರಾಗುತ್ತಿದೆ. ಪ್ರತಿ ಸ್ಪರ್ಧಿಗಳ ನಡುವಿನ ಬಿರುಸಿನ ಮಾತು ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಅಸಮಾಧಾನ ಜೋರಾಗಿಯೇ ಸದ್ದು ಮಾಡುತ್ತಿದೆ. ಅಂತದ್ದೇ ಒಂದು ಬಿಸಿ ಸಂಧರ್ಭ ಈಗ ಎದುರಾಗಿರೋದು ಪ್ರಶಾಂತ್ ಸಂಬರ್ಗಿ ಮತ್ತು ಸಾನ್ಯ ಅಯ್ಯರ್ ನಡುವೆ. ಹೌದು ದೊಡ್ಮನೆ ಪ್ರವೇಶ ಆಗುವ ಮುನ್ನ ಎಲ್ಲಾ ಸ್ಪರ್ಧಿಗಳಿಗೂ ಒಂದೊಂದು ಒಳ್ಳೆ ಗುಣಗಳ ಹೆಸರು ಬರೆದಿರುವ ಬ್ಯಾಂಡ್ ಗಳನ್ನ ನೀಡಲಾಗಿತ್ತು. ಅದೇ ರೀತಿಯಾಗಿ ಸ್ಪರ್ಧಿ ಸಾನ್ಯ ಅಯ್ಯರ್ ಅವರಿಗೆ ಕಲಾವಿದ ಅನ್ನೋ ಹೆಸರಿನ ಬ್ಯಾಂಡ್ ನೀಡಲಾಗಿತ್ತು. ಈ ಕಲಾವಿದ ಅನ್ನೋ ಬ್ಯಾಂಡ್ ಅನ್ನು ಸಾನ್ಯ ಅಯ್ಯರ್ ಪ್ರಶಾಂತ್ ಸಂಬರ್ಗಿ ಅವರಿಗೆ ಕಟ್ಟಿ ಪ್ರಶಾಂತ್ ಅವರಲ್ಲಿ ಕುತಂತ್ರಿ ಬುದ್ದಿ ಹೆಚ್ಚಾಗಿದೆ.

ಈ ರೀತಿಯ ಕುತಂತ್ರಿ ಬುದ್ದಿ ಕಲಾವಿದರಿಗೆ ಮಾತ್ರ ಇರೋದಕ್ಕೆ ಸಾಧ್ಯ ಎಂದು ಹೇಳಿದ್ದರು. ಇದೇ ವಿಚಾರವನ್ನ ವಾರದ ಪಂಚಾಯ್ತಿ ಕಟ್ಟೆಯಲ್ಲಿ ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿ ಸಾನ್ಯ ಅಯ್ಯರ್ ಅವರಿಗೆ ನಾವು ಬ್ಯಾಂಡ್ ಅಲ್ಲಿ ಕಲಾವಿದ ಅಂತ ಮಾತ್ರ ಬರೆದಿದ್ದೆವು. ನೀವು ಕಲಾವಿದ ಅನ್ನೋ ಪದದ ಜೊತೆಗೆ ಕುತಂತ್ರಿ ಅಂತ ಸೇರಿಸಿಕೊಂಡಿರಿ. ಅದು ನಿಮ್ಮ ತಪ್ಪು ಎಂದು ಸುದೀಪ್ ಸಾನ್ಯ ಅವರಿಗೆ ಸಲಹೆ ನೀಡಿದ್ದರು. ಸುದೀಪ್ ಈ ವಿಚಾರವನ್ನ ಪ್ರಸ್ತಾಪ ಮಾಡಿದಾಗ ಕುತಂತ್ರಿ ಅಂತೇಳಿದ್ದ ಮಾತಿನ ಬಗ್ಗೆ ಪ್ರಶಾಂತ್ ಸಂಬರ್ಗಿ ಗಂಭೀರವಾಗಿ ಪರಿಗಣಿಸಿದರು. ತದ ನಂತರ ಸಾನ್ಯ ಅಯ್ಯರ್ ಅವರು ಮಾತನಾಡಿ ನಾನು ಚಿಕ್ಕವಳು ಎಂದು ಅಂದುಕೊಳ್ಳಬೇಡಿ. ನನಗೆ ನಿಮ್ಮಲ್ಲಿ ಕುತಂತ್ರಿ ಬುದ್ದಿ ಕಾಣಿಸಿತು. ಹಾಗಾಗಿ ನಾನು ಹಾಗೇ ಹೇಳಿದೆ.

ನಿಮಗೆ ಕುತಂತ್ರಿ ಎಂದು ಹೇಳಿದಕ್ಕೆ ಬೇಜಾರಾಗಿದ್ರೆ ಕ್ಷಮೆ ಇರಲಿ. ಆದರೆ ಆ ಮಾತನ್ನ ನನ್ನ ಅಭಿಪ್ರಾಯವನ್ನ ಹಿಂಪಡೆಯಲಾರೆ ನೀವು ನನ್ನನ್ನ ಆ ದೃಷ್ಟಿಯಲೆಲ್ಲಾ ನೋಡಬೇಡಿ ಎಂದು ಸಾನ್ಯ ಪ್ರಶಾಂತ್ ಸಂಬರ್ಗಿ ಗೆ ಹೇಳಿದ್ರು. ಆದರೆ ಇದಕ್ಕೆ ಉತ್ತರಿಸಿದ ಪ್ರಶಾಂತ್ ಸಂಬರ್ಗಿ ಗಾಜು ಒಡೆದಾಗಿದೆ. ಹಾಲು ಹೊಡೆದೋಗಿದೆ. ಇದೀಗ ನಮ್ಮಿಬ್ಬರ ನಡುವೆ ಈ ಮಾತಿನ ಚರ್ಚೆ ಬೇಡ ಎಂದು ಈ ಕುತಂತ್ರಿ ಅನ್ನೋ ಮಾತಿಗೆ ಪ್ರಶಾಂತ್ ಅಸಮಾಧಾನವಾಗಿಯೇ ಫುಲ್ ಸ್ಟಾಪ್ ಹಾಕಿದರು. ಕುತಂತ್ರಿ ಬುದ್ದಿ ಎಂಬ ಒಂದು ಪದದಿಂದ ಶುರುವಾದ ಈ ಜಗಳ ನಿಲ್ಲುವಂತೆ ಕಾಣುತ್ತಿಲ್ಲ. ಏನೇ ಆದ್ರೂ ಮೊದಲ ವಾರದಲ್ಲಿಯೇ ಬೈಕ್ ರೇಸರ್ ಆಗಿದ್ದ ಐಶ್ವರ್ಯ ಪಿಸ್ಸೆ ದೊಡ್ಮನೆಯಿಂದ ಹೊರ ಬಿದ್ದಿದ್ದು, ಸ್ಪರ್ಧಿಗಳ ನಡುವೆ ತಾನು ಗೆಲ್ಬೇಕು ಅನ್ನೋ ಹಠ ಹೆಚ್ಚಾಗಿದೆ. ಪ್ಲಾನ್ ಗಳು ಕೂಡ ಜೋರಾಗಿ ನಡೀತಿದ್ದಾವೆ. ಇನ್ಮುಂದೆ ದೊಡ್ಮನೆಯಲ್ಲಿ ಇನ್ಯಾವ ರೀತಿಯಾಗಿ ಸ್ಪರ್ಧಿಗಳ ನಡುವೆ ಕಿಚ್ಚು ಹೆಚ್ಚಾಗಲಿದೆ ಎಂದು ನೋಡಬೇಕಾಗಿದೆ.

Leave a Reply

%d bloggers like this: