ಬಿಗ್ ಬಾಸ್ ಆರಂಭ, ಒಂದೇ ದಿನ ನಾಲ್ಕು ಸುಪ್ರಸಿದ್ಧ ಧಾರಾವಾಹಿಗಳ ಅಂತ್ಯ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆಗಿರೋ ಬಿಗ್ ಬಾಸ್ 9ನೇ ಆವೃತ್ತಿ ಆರಂಭ ಆಗೋದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಬಿಗ್ ಬಾಸ್ ರಿಯಾಲಿಟಿ ಶೋ ಎಲ್ಲಾ ಎಂಟು ಸೀಸನ್ ಗಳು ನಿರೀಕ್ಷೆಯಂತೆ ಯಶಸ್ವಿಯಾಗಿ ಮುಕ್ತಾಯವಾಗಿವೆ. ಇದೀಗ ಒಂಭತ್ತನೇ ಸೀಸನ್ ಆರಂಭಗೊಳ್ಳಲು ಎಲ್ಲಾ ರೀತಿಯ ಸಿದ್ದತೆ ಜೋರಾಗಿ ನಡೀತಿದೆ. ಇನ್ನೊಂದೆಡೆ ಸ್ಪರ್ಧಿಗಳು ಯಾರ್ಯಾರು ಇರಲಿದ್ದಾರೆ ಅನ್ನೋ ಚರ್ಚೆ ಸಹ ಜೋರಾಗಿ ನಡೀತಿದೆ. ಅದ್ರಂತೆ ಈ ಬಾರಿ ದೊಡ್ಮನೆಯಲ್ಲಿ ಬಿಗ್ ಬಾಸ್ ಓಟಿಟಿಯಲ್ಲಿ ಟಾಪರ್ ಆದ ರೂಪೇಶ್ ಶೆಟ್ಟಿ, ನಟ ರಾಕೇಶ್ ಅಡಿಗ, ಸಾನ್ಯಾ ಅಯ್ಯರ್ ಮತ್ತು ಆರ್ಯ ವರ್ಧನ್ ಇರಲಿದ್ದಾರೆ ಅನ್ನೋದು ಕನ್ಪರ್ಮ್ ಅಗಿದೆ. ಅವರ ಜೊತೆಗೆ ಹಳೆಯ ಸೀಸನ್ ಸ್ಪರ್ಧಿಗಳು ಮತ್ತು ಒಂದಷ್ಟು ಹೊಸ ಮುಖಗಳನ್ನ 9ನೇ ಸೀಸನ್ ನಲ್ಲಿ ಕಾಣಬಹುದು.

ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಜನಪ್ರಿಯ ಧಾರಾವಾಹಿಗಳು ಬಿಗ್ ಬಾಸ್ ನಿಂದ ಅಂತ್ಯ ಕಾಣ್ತಿರೋದಕ್ಕೆ ಕಿರುತೆರೆ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೌದು ಯಾವ್ಯಾವ ಧಾರಾವಾಹಿಗಳು ಟಿ.ಆರ್.ಪಿ ಯಲ್ಲಿ ಕಡಿಮೆ ಆಗಿದ್ಯೋ ಆ ಎಲ್ಲಾ ಧಾರಾವಾಹಿಗಳಿಗೆ ಇದೀಗ ಮುಕ್ತಿ ನೀಡಲಾಗ್ತಿದೆಯಂತೆ. ವಾಹಿನಿಯ ಮೂಲಗಳ ಪ್ರಕಾರ ಕಲರ್ಸ್ ಕನ್ನಡದಲ್ಲಿ ಅಂತ್ಯ ಕಾಣ್ತಿರೋದು ನಾಲ್ಕು ಧಾರಾವಾಹಿಗಳಂತೆ. ಅವುಗಳೆಂದರೆ ನನ್ನರಸಿ ರಾಧೆ, ಮಂಗಳಗೌರಿ ಮದುವೆ, ನಮ್ಮನೆ ಯುವರಾಣಿ ಮತ್ತು ಕನ್ಯಾ ಕುಮಾರಿ ಧಾರಾವಾಹಿಗಳು. ನನ್ನರಸಿ ರಾಧೆ ಧಾರಾವಾಹಿಯಲ್ಲಿ ಖ್ಯಾತ ನಟರಾದ ಸಿಹಿ ಕಹಿ ಚಂದ್ರು ನಟಿಸುತ್ತಿದ್ದರು. ಅವರ ಜೊತೆಗೆ ಪ್ರಧಾನ ಪಾತ್ರಗಳಲ್ಲಿ ಕೌಸ್ತುಭ ಮಣಿ, ಅಭಿನವ್ ವಿಶ್ವನಾಥನ್, ವೀಣಾ ರಾವ್, ವಿಜಯ ಲಕ್ಷ್ಮಿ ಕಾಶಿ ನಟಿಸುತ್ತಿದ್ದರು. ನನ್ನರಸಿ ಧಾರಾವಾಹಿ ತಕ್ಕ ಮಟ್ಟಿಗೆ ಜನ ಮೆಚ್ಚುಗೆ ಪಡೆದಿತ್ತು.

ಪ್ರತಿದಿನ ರಾತ್ರಿ 10 ಗಂಟೆಗೆ ಈ ಧಾರಾವಾಹಿ ಪ್ರಸಾರ ಆಗುತ್ತಿತ್ತು. ಇದೀಗ ಬಿಗ್ ಬಾಸ್ ಸೀಸನ್9 ರಾತ್ರಿ 9.30 ರಿಂದ 10.30 ರವರೆಗೆ ಪ್ರಸಾರ ಆಗೋ ಕಾರಣ ನನ್ನರಸಿ ರಾಧೆ ಧಾರಾವಾಹಿಯನ್ನ ಅಂತ್ಯ ಕಾಣಿಸುತ್ತಿದೆ ವಾಹಿನಿ. ಅದೇ ಟಿ.ಆರ್.ಪಿ ಇಲ್ಲ ಎಂಬ ಕಾರಣಕ್ಕೆ ರಾತ್ರಿ ಹತ್ತೂವರೆಗೆ ಪ್ರಸಾರ ಆಗುತ್ತಿದ್ದ ಕನ್ಯಾ ಕುಮಾರಿ ಧಾರಾವಾಹಿ ಕೂಡ ಅಂತ್ಯ ಕಾಣ್ತಿದೆ. ಈ ಕನ್ಯಾ ಕುಮಾರಿ ಧಾರಾವಾಹಿಯನ್ನ ರಘುಚರಣ್ ತಿಪಟೂರು ಅವರು ನಿರ್ದೇಶನ ಮಾಡುತ್ತಿದ್ದರು. ಅದೇ ರೀತಿ ಸಂಜೆ 5.30ಕ್ಕೆ ಪ್ರಸಾರ ಆಗುತ್ತಿದ್ದ ನಮ್ಮನೆ ಯುವರಾಣಿ ಧಾರಾವಾಹಿ ಕೂಡ ಅಂತ್ಯ ಕಾಣಲಿದ್ದು, ಈ ಧಾರಾವಾಹಿಯ ಸಮಯಕ್ಕೆ ಗಿಣಿರಾಮ ಧಾರಾವಾಹಿ ಪ್ರಸಾರ ಆಗಲಿದೆಯಂತೆ. ಒಟ್ಟಾರೆಯಾಗಿ ಬಿಗ್ ಬಾಸ್ ಶೋ ಗಾಗಿ ಕಲರ್ಸ್ ಕನ್ನಡದ ನಾಲ್ಕು ಧಾರಾವಾಹಿಗಳು ಮುಕ್ತಾಯದ ದಾರಿ ಹಿಡಿದಿವೆ.