ಬಿಗ್ ಬಾಸ್ ಶೈನ್ ಶೆಟ್ಟಿಯ ‘ಗಲ್ಲಿ ಕಿಚನ್’ ಯಾವ ಮಟ್ಟಕ್ಕೆ ಬೆಳೆದಿದೆ ಗೊತ್ತಾ

ಶೈನ್ ಶೆಟ್ಟಿ ನಿಮಗೆಲ್ಲ ಗೊತ್ತಿರುವ ಹಾಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಮನೆಮಾತಾದವರು.ಚಿತ್ರರಂಗದಲ್ಲೂ ಅವಕಾಶಕ್ಕಾಗಿ ಅರಸುತ್ತಿದ್ದರು.ಚಿತ್ರರಂಗದ ಕಡೆ ಹೆಚ್ಚು ಒಲವು ಇದ್ದ ಶೈನ್ ಶೆಟ್ಟಿ ನಂತರ ಅವಕಾಶ ಸಿಗದೇ ಆರ್ಥಿಕ ಸಮಸ್ಯೆಗೆ ಗುರಿಯಾದರು.ಅವರು ಅದರಿಂದ ಸಾಕಷ್ಟು ಹಿನ್ನಡೆ,ಮಾನಸಿಕ ಖಿನ್ನತೆ ಅನುಭವಿಸಬೇಕಾಯಿತು.ಅದರಿಂದ ಅವರು ಹೊರಬರುವುದಕ್ಕೆ ಚಿಕ್ಕದಾದ ಒಂದು ರೆಸ್ಟೋರೆಂಟ್ ಅಂದ್ರೆ ಒಂದು ಫುಡ್ ಟ್ರಕ್ ಮಾಡುವ ನಿರ್ಧಾರ ಮಾಡಿದರು.ಅಮ್ಮನಿಂದ ಅಡಿಗೆ ಕಲಿತು ಒಂದು ಆಟೋ ತೆಗೆದುಕೊಂಡು ಬೆಂಗಳೂರಿನ ಬನಶಂಕರಿಯ ಬಿಡಿಏ ಕಾಂಪ್ಲೆಕ್ಸ್ ಬಳಿ ಫುಡ್ ಟ್ರಕ್ ಶುರು ಮಾಡೇಬಿಟ್ಟರು.

ಜೊತೆಜೊತೆಗೆ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಕೆಲಸವನ್ನೂ ಮಾಡುತ್ತಿದ್ದರು. ನೋಡುನೋಡುತ್ತಿದ್ದ ಹಾಗೇ ಇವರ ಕನಸಿನ‌ ‘ಗಲ್ಲಿ ಕಿಚನ್’ ನನಸಾಗಿದೆ ಅವರು ಅಂದುಕೊಂಡ ಮಟ್ಟಕ್ಕೆ ಯಶಸ್ವಿಯೂ ಆಗಿದೆ.ಮೊದಲು ಇಬ್ಬರು ಕೆಲಸಗಾರರೊಂದಿಗೆ ನಿಂತು ಶೈನ್ ಶೆಟ್ಟಿ ಆಹಾರ ತಯಾರಿಸುತ್ತಿದ್ದರಂತೆ.ನಂತರ ಅವರು ದೊಡ್ಡ ಟ್ರಕ್ ಪಡೆದುಕೊಂಡರು ಈಗ ಅವರ ತಾಯಿಯೂ ಅಲ್ಲಿ ಮಗನಿಗೆ ಸಹಾಯ ಮಾಡುತ್ತಿದ್ದಾರಂತೆ‌.

ಇದರಲ್ಲಿ ಬ್ಯುಸಿಯಾಗಿದ್ದಾಗಲೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅವಕಾಶ ಸಿಕ್ಕಿತು. ಸ್ಪರ್ಧೆಯಲ್ಲಿ ಗೆದ್ದೂ ಬಂದರು.ನಂತರ ಸಿನಿಮಾದಲ್ಲಿ ಕೂಡ ಅವಕಾಶ ಸಿಕ್ಕಿತು.ದೊಡ್ಡ ಅವಕಾಶವೇ ಸಿಕ್ಕಿತು,ಅದೂ ರಿಷಬ್ ಶೆಟ್ಟಿ ಅವರ ಸಿನಿಮಾದಲ್ಲಿ.ಶೈನ್ ಶೆಟ್ಟಿ ಅವರಿಗೆ ಅವರ ಗಲ್ಲಿ ಕಿಚನ್ ಮೇಲೆ ಎಲ್ಲಿಲ್ಲದ ಪ್ರೀತಿ.ಬಿಗ್ ಬಾಸ್ ಅಲ್ಲಿ ಗೆದ್ದ ಹಣದಿಂದ ಅದನ್ನು ಅವರು ದೊಡ್ಡ ರೆಸ್ಟೋರೆಂಟ್ ಆಗಿ ಮಾಡಿ ಅದರ ಫ್ರ್ಯಾಂಚಸಿಗಳನ್ನು ರಾಜ್ಯದೆಲ್ಲೆಡೆ ಮುಂದುವರಿಸುವ ಇಚ್ಛೆ ಹೊಂದಿದ್ದಾರೆ.ಅವರ ಸಿನಿಮಾ ರಂಗಕ್ಕೆ ಹಾಗೂ ಉದ್ಯಮಕ್ಕೆ ಶುಭವಾಗಲಿ ಎಂದು ಹಾರೈಸೋಣ.

Leave a Reply

%d bloggers like this: