ಬಿಗ್ ಬಜೆಟ್ ಪೊನ್ನಿಯನ್ ಸೆಲ್ವನ್ ಚಿತ್ರವನ್ನೇ ಗಳಿಕೆಯಲ್ಲಿ ಹಿಂದಿಕ್ಕಿದ ಕಾಂತಾರ ಚಿತ್ರ

ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಿನಿಮಾದ ಕಲೆಕ್ಷನ್ ಅನ್ನು ಕೂಡ ಸೈಡ್ ಲೈನ್ ಮಾಡಿದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ. ಸದ್ಯಕ್ಕೆ ಭಾರತ ಮಾತ್ರ ಅಲ್ಲದೆ ಹೊರ ದೇಶಗಳಲ್ಲಿಯೂ ಸಹ ಕಾಂತಾರ ಚಿತ್ರ ಸಖತ್ ಕಮಾಲ್ ಮಾಡುತ್ತಿದೆ. ಕಳೆದ ಸೆಪ್ಟೆಂಬರ್ 30ರಂದು ಪೊನ್ನಿಯನ್ ಸೆಲ್ವನ್ ಮತ್ತು ಕಾಂತಾರ ಸಿನಿಮಾ ಎರಡು ಕೂಡ ಅದ್ದೂರಿಯಾಗಿ ರಿಲೀಸ್ ಆದವು. ಪಂಚಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಚಿತ್ರ ಹೊರ ಹೊಮ್ಮಿದ್ರೇ, ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಮಾತ್ರ ಕನ್ನಡ ಭಾಷೆಯೊಂದರಲ್ಲಿಯೇ ವರ್ಲ್ಡ್ ವೈಡ್ ರಿಲೀಸ್ ಆಯ್ತು.

ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿಬಂದ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಚಿಯಾನ್ ವಿಕ್ರಮ್, ಸೂರ್ಯ, ಐಶ್ವರ್ಯ ರೈ, ತ್ರಿಷಾ ಸೇರಿದಂತೆ ದಿಗ್ಗಜ ಕಲಾವಿದರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದ ಕಾರಣ ಚಿತ್ರಕ್ಕೆ ಅಭೂತಪೂರ್ವ ಯಶಸ್ಸು ಸಿಗುವುದರ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾ ಕಳೆದ ಮೂವತ್ತು ದಿನಗಳೊಳಗೆ ಮಾಡಿದ ಕಲೆಕ್ಷನ್ ಅನ್ನ ನಮ್ಮ ಕನ್ನಡದ ಹಿಂದಿ ಅವತರಣಿಕೆ ಲೇಟಾಗ್ ಬಂದ್ರು ಕೂಡ ಕಾಂತಾರ ಸಿನಿಮಾ ಕೇವಲ 13 ದಿನದಲ್ಲಿ ಬರೋಬ್ಬರಿ 30 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಅಕ್ಟೋಬರ್ 14ರಂದು ಕಾಂತಾರ ಸಿನಿಮಾ ಹಿಂದಿ ಭಾಷೆಗೆ ಡಬ್ ಆಗಿತ್ತು. ಪೊನ್ನಿಯನ್ ಸೆಲ್ವನ್ ಸಿನಿಮಾ ಮೂವತ್ತು ದಿನಗಳೊಳಗೆ ಮಾಡಿದ ಕಲೆಕ್ಷನ್ ಅನ್ನ ಕಾಂತಾರ ಸಿನಿಮಾ ಹಿಂದಿ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿ ಕೇವಲ 13-14 ದಿನಗಳಲ್ಲಿಯೇ ಮೂವತ್ತು ಕೋಟಿಯಷ್ಟು ಭರ್ಜರಿ ಕಲೆಕ್ಷನ್ ಮಾಡಿದೆ. ಈ ಮೂಲಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಮಣಿರತ್ನಂ ಪೊನ್ನಿಯನ್ ಸೆಲ್ವನ್ ಚಿತ್ರದ ಗಳಿಕೆಯನ್ನ ಕೂಡ ಬ್ರೇಕ್ ಮಾಡಿದೆ. ಸದ್ಯಕ್ಕೆ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಇನ್ನೂರು ಕೋಟಿ ಕ್ಲಬ್ ಸೇರಿ ಕಾಂತಾರ ಸಿನಿಮಾ ಭರ್ಜರಿ ಸೌಂಡ್ ಮಾಡುತ್ತಿದೆ.

Leave a Reply

%d bloggers like this: