ಬಿಗ್ ಬಿ ಮನೆಯಲ್ಲಿ ಬಾಡಿಗೆಗೆ ಇರುವ ಖ್ಯಾತ ನಟಿ ಕೃತಿ ಸನೋನ್! ಆಕೆ ಕಟ್ಟುತ್ತಿರುವ ಬಾಡಿಗೆ ಎಷ್ಟು ಗೊತ್ತಾ? ನೋಡಿ ಒಮ್ಮೆ

ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ತೆರೆಕಂಡು ಸೂಪರ್ ಹಿಟ್ ಆದಂತಹ ಮಿಮಿ ಚಿತ್ರದ ನಟಿ ಕೃತಿ ಸನೋನ್ ಅವರು ಬಾಲಿವುಡ್ ಸ್ಟಾರ್ ನಟನ ಐಷಾರಾಮಿ ಮನೆಯನ್ನೇ ಬಾಡಿಗೆಗೆ ಪಡೆದಿದ್ದಾರೆ. ಈ ಮನೆಯ ಬಾಡಿಗೆಯ ಹಣ ಕೇಳಿದರೆ ನಿಜಕ್ಕೂ ಕೂಡ ಅಚ್ಚರಿಯಾಗುತ್ತದೆ. ಇತ್ತೀಚೆಗೆ ಸಾಮಾನ್ಯವಾಗಿ ಬಾಲಿವುಡ್ ಸ್ಟಾರ್ ನಟ-ನಟಿಯರು ಅತ್ಯಂತ ದುಬಾರಿ ಐಷಾರಾಮಿ ಫ್ಲಾಟ್ ಗಳು ಮತ್ತು ದುಬಾರಿ ಕಾರ್ ಗಳನ್ನು ಖರೀದಿ ಮಾಡುವ ಮೂಲಕ ಭಾರಿ ಸುದ್ದಿಯಾಗುತ್ತಿದ್ದಾರೆ. ಅಂತೆಯೇ ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಕೃತಿ ಸನೋನ್ ಕೂಡ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಐಷಾರಾಮಿ ಮನೆಯನ್ನೇ ಎರಡು ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್ ನ ಸ್ಟಾರ್ಸ್ಸ್ ಐಷಾರಾಮಿ ಜೀವನವನ್ನು ನಡೆಸುತ್ತಿರುತ್ತಾರೆ.

ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ಅವರ ಜೀವನ ಶೈಲಿ ಕೂಡ ಅಷ್ಟೇ ದುಬಾರಿ ಆಗಿರುತ್ತದೆ.ಅಂತೆಯೇ ನಟಿ ಕೃತಿ ಸನೋನ್ ಅವರು ಸದ್ಯಕ್ಕೆ ಬಾಲಿವುಡ್ ನ ಬಹು ಬೇಡಿಕೆಯ ನಟಿ. ಇತ್ತೀಚೆಗೆ ಇವರ ನಟನೆಯ ಮಿಮಿ ಸಿನಿಮಾ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ನಟಿ ಕೃತಿ ಸನೋನ್ ಅವರು ಸುದ್ದಿ ಆಗಿರುವುದು ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಬಂಗಲೆಯನ್ನ ಬಾಡಿಗೆಗೆ ಪಡೆಯುವ ಮೂಲಕ. ಹೌದು
ಬಿಗ್ – ಬಿ ಅಮಿತಾಬ್ ಬಚ್ಚನ್ ಅವರು ಮುಂಬೈನ ಪ್ರತಿಷ್ಟಿತ ಏರಿಯಾಗಳಲ್ಲಿ ಒಂದೆರಡು ಬಂಗಲೆಯನ್ನು ಹೊಂದಿದ್ದಾರೆ.

ಸದ್ಯಕ್ಕೆ ಅಮಿತಾಬ್ ಬಚ್ಚನ್ ಅವರ ಜಲ್ಸಾ ಎಂಬ ಹೆಸರಿನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇದೇ ಮನೆಯ ಬಳಿ ಅಮ್ಮು ಮತ್ತು ವಾತ್ಸಾ ಎಂಬ ಎರಡು ಮನೆಗಳು ಕೂಡ ಇವೆ. ಇದೀಗ ಬಾಲಿವುಡ್ ಸ್ಟಾರ್ ನಟಿಯಾದ ಕೃತಿ ಸನೋನ್ ಅವರಿಗೆ ಪಶ್ಚಿಮ ಅಂಧೇರಿಯ ಲೋಖಂಡವಾಲಾ ರಸ್ತೆಯಲ್ಲಿನ ಅಟ್ಲಾಂಟಿಸ್ ಕಟ್ಟಡದ ತಮ್ಮ 27 ಮತ್ತು 28 ನೇ ಮಹಡಿಯ ಬಂಗಲೆಯನ್ನ ಹತ್ತು ಲಕ್ಷ ರೂ. ಬಾಡಿಗೆಗೆ ನೀಡಿದ್ದಾರೆ. ಬಂಗಲೆಗೆ ಅರವತ್ತು ಲಕ್ಷ ರೂ. ಅಡ್ವಾನ್ಸ್ ಪಡೆದು ಎರಡು ವರ್ಷಗಳ ಒಪ್ಪಂದ ಕರಾರು ಪತ್ರ ಮಾಡಿಕೊಂಡಿದ್ದಾರೆ. ತಿಂಗಳಿಗೆ ಬರೋಬ್ಬರಿ ಹತ್ತು ಲಕ್ಷ ರೂ. ಬಾಡಿಗೆ ಕಟ್ಟುವ ನಟಿ ಕೃತಿ ಸನೋನ್ ಅವರಿಗೆ ಆದಾಯದ ಮೂಲ ಎಷ್ಟಿರಬಹುದು ಎಂದು ಬಾಲಿವುಡ್ ಮಂದಿ ಕುತೂಹಲ ವ್ಯಕ್ತಪಡಿಸಿದ್ದಾರೆ.