ಬಿಡುವಿನ ಸಮಯದಲ್ಲಿ ಶೂಟಿಂಗ್ ಸ್ಪರ್ಧೆ ಆಡಿ ನಾಲ್ಕು ಚಿನ್ನದ ಪದಕ ಗೆದ್ದ ದಕ್ಷಿಣ ಭಾರತದ ಸ್ಟಾರ್ ನಟ

ಸಿನಿಮಾ ನಟ ಅಂದರೆ ಕೇವಲ ನಟನೆಯಲ್ಲಿ ಮಾತ್ರ ತೊಡಗಿಕೊಂಡು ಬಣ್ಣದ ಲೋದಲ್ಲಿ ಬೆಳ್ಳಿ ಪರದೆಯಲ್ಲಿ ಮಿಂಚಿ ಹೀರೋ ಅನಿಸಿಕೊಳ್ಳುವುದಲ್ಲ ರಿಯಲ್ ಲೈಫ್ ನಲ್ಲಿಯೂ ಕೂಡ ನಾನು ಹೀರೋ ಅನ್ನುವುದನ್ನ ನಿಜ ಮಾಡಿದ್ದಾರೆ ತಮಿಳಿನ ಈ ಸ್ಟಾರ್ ನಟ. ಹೌದು ಈ ನಟ ಕೇವಲ ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ. ಅವರೇ ತಮಿಳಿನ ಸೂಪರ್ ಸ್ಟಾರ್ ನಟ ತಾಲಾ ಖ್ಯಾತಿಯ ಅಜಿತ್ ಕುಮಾರ್. ಹೌದು ಅಜಿತ್ ಕುಮಾರ್ ಅವರು ನಟ ಅನ್ನೋದರ ಜೊತೆಗೆ ಒಬ್ಬ ಫಾರ್ಮುಲಾ ಒನ್ ರೇಸಿಂಗ್ ಡ್ರೈವರ್ ಕೂಡ ಹೌದು. ನಟ ಅಜಿತ್ ಕುಮಾರ್ ಅವರು 2004ರಲ್ಲಿ ಫಾರ್ಮ್ಯುಲಾ ತ್ರೀ ಸೀಸನ್ನಿನಲ್ಲಿ ಭಾಗವಹಿಸಿ ಬೆಸ್ಟ್ ಮೋಟಾರು ಕಾರು ಚಾಲಕ ಸ್ಥಾನವನ್ನ ಪಡೆದುಕೊಂಡಿದ್ದಾರೆ. ಅದರ ಜೊತೆಗೆ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿಯೂ ಭಾಗವಹಿಸುತ್ತಾರೆ.

ಕಳೆದ ವರ್ಷ ಚೆನ್ನೈನಲ್ಲಿ ನಡೆದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಜಿತ್ ಕುಮಾರ್ ಅವರ ಬರೋಬ್ಬರಿ ಆರು ಚಿನ್ನದ ಪದಕಗಳನ್ನ ತಮ್ಮದಾಗಿಸಿಕೊಂಡಿದ್ದರು. ಅದೇ ರೀತಿಯಾಗಿ ಈ ವರ್ಷ ಕೂಡ ಅಜಿತ್ ಕುಮಾರ್ ಮತ್ತು ಅವರ ತಂಡ ನಾಲ್ಕು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೌದು ಜುಲೈ 24ರಿಂದ ಆರಂಭವಾಗಿ ಇದೇ ಭಾನುವಾರದವರೆಗೆ ತಿರುಚ್ಚಿಯಲ್ಲಿ ನಡೆಯುತ್ತಿರುವ ತಮಿಳುನಾಡು 47ನೇ ರಾಜ್ಯ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಜಿತ್ ಕುಮಾರ್ ಚಾಂಪಿಯನ್ ಶಿಪ್ ಸಿಎಫ್ಪಿ ಮಾಸ್ಟರ್ ಮೆನ್ ಟೀಮ್ ಇವೆಂಟ್, ಎಸ್ಟಿಡಿಪಿ ಮಾಸ್ಟರ್ ಮೆನ್ ಟೀಮ್ ಇವೆಂಟ್ ಮತ್ತು 50 ಮೀಟರ್ ಎಫ್ಪಿ ಮಾಸ್ಟರ್ ಮೆನ್ ಇವೆಂಟ್ ಸೇರಿದಂತೆ ಒಟ್ಟು ನಾಲ್ಕು ಇವೆಂಟ್ ಗಳಲ್ಲಿ ಚಿನ್ನದ ಪದಕ ಗೆದ್ದು ಆಸಕ್ತಿಕರ ಸಾಧನೆಗೈದಿದ್ದಾರೆ.

ನಟ ಅಜಿತ್ ಕುಮಾರ್ ಈ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ತೊಡಿಗಿಕೊಂಡಿರುವ ಒಂದಷ್ಟು ಫೋಟೋಗಳು ಮತ್ತು ವೀಡಿಯೋ ತುಣುಕುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಅಪಾರ ಮೆಚ್ಚುಗೆಯ ವ್ಯಕ್ತಪಡಿಸಿ ಅಭಿನಂದನೆಗಳನ್ನ ತಿಳಿಸಿದ್ದಾರೆ. ಇನ್ನು ನಟ ಅಜಿತ್ ಕುಮಾರ್ ತಮಿಳು ಚಿತ್ರರಂಗದ ಸ್ಟಾರ್ ನಟರಾಗಿದ್ದು ಅಪಾರ ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿದ್ದಾರೆ. ಇದೀಗ ಅವರು ಶೀರ್ಷಿಕೆ ಅಂತಿಮವಾಗದ ಎಕೆ61 ಎಂಬ ಚಿತ್ರದ ಶೂಟಿಂಗ್ ನಲ್ಲಿ ಬಿಝಿಯಾಗಿದ್ದಾರೆ‌. ಈ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಇದರ ಜೊತೆಗೆ ಅಜಿತ್ ಕುಮಾರ್ ವಿಘ್ನೇಶ್ ಶಿವನ್ ಅವರೊಟ್ಟಿಗೆ ಕೂಡ ಒಂದು ಸಿನಿಮಾ ಮಾಡಲಿದ್ದಾರಂತೆ. ಒಟ್ಟಾರೆಯಾಗಿ ಅಜಿತ್ ಕುಮಾರ್ ತನ್ನ ನಟನೆಯ ಜೊತೆ ಜೊತೆಗೆ ಕ್ರೀಡಾ ಪಟುವಾಗಿಯೂ ಕೂಡ ಯಶಸ್ಸು ಗಳಿಸಿರುವುದು ವಿಶಿಷ್ಟ ಸಾಧನೆ ಎಂದು ಹೇಳಬಹುದು.

Leave a Reply

%d bloggers like this: