ಬಿಡುಗಡೆಗೂ ಮೊದಲೇ ಬರೊಬ್ಬರಿ 150 ಕೋಟಿ ಗಳಿಸಿದ ರಶ್ಮಿಕಾ ಮಂದಣ್ಣ ಅವರ ಹೊಸ ಚಿತ್ರ

ಭಾರತೀಯ ಚಿತ್ರರಂಗದಲ್ಲಿ ನಿರ್ಮಾಪಕರ ಲಕ್ಕಿ ಹೀರೋಯಿನ್ ಆದ್ರಾ ರಶ್ಮಿಕಾ ಮಂದಣ್ಣ. ಈ ಒಂದು ರೀತಿಯಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳ್ತಿದ್ದಾರೆ ಅಂದ್ರೆ ಅವರ ಲಕ್ ಹೇಗಿರ್ಬೋದು. ಯಾವ ಕಾರಣಕ್ಕಾಗಿ ಇದೀಗ ಈ ಒಂದು ಪ್ರಶ್ನೆ ಕೇಳಿ ಬಂದಿದೆ ಅನ್ನೋದನ್ನ ನೋಡೋಣ. ಸದ್ಯದ ಮಟ್ಟಿಗೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಮತ್ತು ಬಹು ಬೇಡಿಕೆ ಹೊಂದಿರೋ ನಟಿ ಅಂದ್ರೆ ಅದು ರಶ್ಮಿಕಾ ಮಂದಣ್ಣ ಅಂತ ಹೇಳ್ಬೋದು. ರಶ್ಮಿಕಾ ಮಂದಣ್ಣ ಇಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಸೇರಿದಂತೆ ಬಾಲಿವುಡ್ ನಲ್ಲಿಯೂ ಕೂಡ ಮಿಂಚುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಗುಡ್ ಬೈ ಸಿನಿಮಾದಲ್ಲಿ ನಟಿಸಿದ್ದಾರೆ. ಅದರ ಜತೆಗೆ ಬಾಲಿವುಡ್ ಸ್ಟಾರ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅವರೊಟ್ಟಿಗೆ ಮಿಶನ್ ಮಜ್ನು ಚಿತ್ರದಲ್ಲಿ ಸಹ ನಟಿಸಿದ್ದಾರೆ.

ಇದರ ಜತೆಗೆ ತಮಿಳು, ತೆಲುಗು ಚಿತ್ರಗಳಲ್ಲಿಯೂ ಕೂಡ ಅಪಾರ ಅವಕಾಶ ಗಿಟ್ಟಿಸಿಕೊಂಡು ನಟಿಸುತ್ತಿದ್ದಾರೆ. ಅದ್ರಂತೆ ರಶ್ಮಿಕಾ ಮಂದಣ್ಣ ತಮಿಳಿನಲ್ಲಿ ಸೂಪರ್ ಸ್ಟಾರ್ ನಟ ಇಳಯ ದಳಪತಿ ವಿಜಯ್ ಅವರೊಟ್ಟಿಗೆ ವಾರಿಸು ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ತಮಿಳಿನಲ್ಲಿ ಕಾರ್ತಿ ಅವರೊಟ್ಟಿಗೆ ಸುಲ್ತಾನ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದೇ ಅವರಿಗೆ ತಮಿಳಿನಲ್ಲಿ ಮೊದಲ ಸಿನಿಮಾ ಆಗಿತ್ತು. ಇದೀಗ ವಿಜಯ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಈ ವಾರಿಸು ಸಿನಿಮಾ ಇನ್ನೂ ಕೂಡ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿಲ್ಲ. ಹೀಗಿರೋವಾಗ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಇದ್ದಾರೆ ಅನ್ನೋ ಕಾರಣಕ್ಕೆ ಸಿನಿಮಾ ವಿತರಕರು ಈ ಚಿತ್ರವನ್ನ ಬರೋಬ್ಬರಿ 120 ಕೋಟಿ ಹಣ ನೀಡಿ ಖರೀದಿ ಮಾಡಿದ್ದಾರಂತೆ.

ಇದು ನಿಜಕ್ಕೂ ಕೂಡ ರಶ್ಮಿಕಾ ಮಂದಣ್ಣ ಅವರ ಕ್ರೇಜ಼್ ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನ ತೋರಿಸುತ್ತಿದೆ. ಈ ಸುದ್ದಿ ತಿಳಿದು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಮಾತ್ರ ಸಖತ್ ಖುಷಿಯಾಗಿದ್ದಾರೆ. ಅದರ ಜೊತೆಗೆ ಸೌತ್ ಸಿನಿ ರಂಗದ ಲಕ್ಕಿ ಹೀರೋಯಿನ್ ಎಂಬ ಪಟ್ಟ ಕೂಡ ರಶ್ಮಿಕಾ ಮಂದಣ್ಣ ಅವರಿಗೆ ಸಿಕ್ಕಿದೆ. ಇತ್ತೀಚೆಗೆ ನಟಿ ರಶ್ಮಿಕಾ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿ ಬಾಕ್ಸ್ ಆಫಿಸ್ ನಲ್ಲಿ ಧೂಳೆಬ್ಬಿಸುತ್ತಿವೆ. ಇತ್ತೀಚೆಗೆ ತೆರೆ ಕಂಡ ಅವರ ನಟನೆಯ ಸೀತಾರಾಮಂ ಸಿನಿಮಾ ಕೂಡ ಸೂಪರ್ ಡೂಪರ್ ಹಿಟ್ ಆಗಿದೆ. ಅವರ ನಟನೆಗೆ ಎಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ವಾರಿಸು ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದು, ದಿಲ್ ರಾಜು ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಶೂಟಿಂಗ್ ಇರೋ ಹಂತದಲ್ಲೇ 150 ಕೋಟಿಯ ಭಾರಿ ಮೊತ್ತಕ್ಕೆ ಸೇಲ್ ಆಗಿರೋದು ನಿರ್ಮಾಪಕರಿಗೆ ಸಂತಸ ಉಂಟು ಮಾಡಿದೆ. ಇದು ಕೇವಲ ನಾನ್ ಥಿಯೇಟ್ರಿಕಲ್ ಹಕ್ಕುಗಳು. ಬರಿ ಓಟಿಟಿ, ಸ್ಯಾಟಲೈಟ್ ಹಕ್ಕುಗಳಿಂದಾನೇ ನೂರಾ ಐವತ್ತು ಕೋಟಿ ಗಳಿಕೆ ಮಾಡಿರುವ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.

Leave a Reply

%d bloggers like this: