ಬಿಡುಗಡೆಗೂ ಮೊದಲೇ ಬರೊಬ್ಬರಿ 125 ಕೋಟಿ ಹಣ ಬಾಚಿದ ದಕ್ಷಿಣ ಭಾರತದ ಬಿಗ್ ಬಜೆಟ್ ಚಿತ್ರ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಪೊನ್ನಿಯನ್ ಸೆಲ್ವನ್ ಭಾಗ1 ಬಿಡುಗಡೆಗೆ ಮುನ್ನ ನೂರಾರು ಕೋಟಿ ಬಾಚುವ ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾ ಪ್ರಸಿದ್ದ ಕಾದಂಬರಿಕಾರರಾದ ಕಲ್ಕಿ ಕೃಷ್ಣಮೂರ್ತಿ ಅವರ ಪೊನ್ನಿಯನ್ ಸೆಲ್ವನ್ ಕಾದಂಬರಿ ಆಧಾರಿತ ಸಿನಿಮಾ. ಈ ಸಿನಿಮಾಗೆ ಆಕ್ಷನ್ ಕಟ್ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಿರ್ದೇಶಕ ಮಣಿರತ್ನಂ ಅವರು ನಿರ್ವಹಿಸುತ್ತಿದ್ದಾರೆ. ಮಣಿರತ್ನಂ ಅವರು ಪೊನ್ನಿಯನ್ ಸೆಲ್ವನ್ ಚಿತ್ರವನ್ನು ಎರಡು ಭಾಗಗಳಾಗಿ ತಯಾರು ಮಾಡುತ್ತಿದ್ದಾರೆ. ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಭಾರತೀಯ ಸಿನಿಮಾರಂಗದ ಖ್ಯಾತನಾಮರು ನಟಿಸುತ್ತಿದ್ದಾರೆ.

ಸದ್ಯಕ್ಕೆ ಹೊರ ಬಿದ್ದಿರುವ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿರು ಕಲಾವಿದರನ್ನ ನೋಡುವುದಾದರೆ ಬಾಲಿವುಡ್ ಖ್ಯಾತ ನಟಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ತ್ರಿಷಾ, ವಿಕ್ರಮ್, ಸೂರ್ಯ, ಕಾರ್ತಿ, ಜಯಂ ರವಿ, ಪ್ರಭು, ಶರತ್ ಕುಮಾರ್, ಸೇರಿದಂತೆ ದಿಗ್ಗಜ ನಟರು ಈ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಈ ಪೊನ್ನಿಯನ್ ಸೆಲ್ವನ್ ಚಿತ್ರದ ಪೋಸ್ಟರ್ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಮದ್ರಾಸ್ ಟಾಕೀಸ್, ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ಬರೋಬ್ಬರಿ ಐನೂರು ಕೋಟಿ ವೆಚ್ಚದಲ್ಲಿ ಪೊನ್ನಿಯನ್ ಸೆಲ್ವನ್ ಸಿನಿಮಾ ತಯಾರಾಗಿದೆಯಂತೆ.

ಮೂಲಗಳ ಪ್ರಕಾರ ಇದೇ ಸೆಪ್ಟೆಂಬರ್ 30ರಂದು ಪೊನ್ನಿಯನ್ ಸೆಲ್ವನ್ ಸಿನಿಮಾ ಬಿಡುಗಡೆ ಅಗಲಿದೆಯಂತೆ. ಇದೀಗ ಈ ಚಿತ್ರದಿಂದ ಮಹತ್ತರವಾದ ಸುದ್ದಿ ಹೊರಬಿದ್ದಿದೆ. ಹೌದು ಪೊನ್ನಿಯನ್ ಸೆಲ್ವನ್ ಸಿನಿಮಾ ಭಾರಿ ಮೊತ್ತಕ್ಕೆ ಓಟಿಟಿ ರೈಟ್ಸ್ ಮಾರಾಟ ಆಗಿದೆಯಂತೆ. ಓಟಿಟಿ ದಿಗ್ಗಜ ಅಮೇಜಾನ್ ಪ್ರೈಮ್ ಸಂಸ್ಥೆಗೆ ಪೊನ್ನಿಯನ್ ಸೆಲ್ವನ್ ಚಿತ್ರದ ಎಲ್ಲಾ ಭಾಷೆಯ ಓಟಿಟಿ ಹಕ್ಕನ್ನ ಬರೋಬ್ಬರಿ 125 ಕೋಟಿಗೆ ಖರೀದಿ ಮಾಡಿದೆ ಎಂದು ತಿಳಿದು ಬಂದಿದೆ. ರಿಲೀಸ್ ಗೂ ಮುನ್ನ ಪೊನ್ನಿಯನ್ ಸೆಲ್ವನ್ ಚಿತ್ರ ಭಾರಿ ಪ್ರಮಾಣ ಮೊತ್ತದ ವಹಿವಾಟು ನಡೆಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಖತ್ ಸುದ್ದಿ ಮಾಡಿದೆ. ಈ ಐತಿಹಾಸಿಕ ಸಿನಿಮಾ ನೋಡಲು ಭಾರತೀಯ ಸಿನಿ ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದಾರೆ.

Leave a Reply

%d bloggers like this: