ಬಿಡುಗಡೆಗೆ ಒಂದು ದಿನ ಮೊದಲೇ 22 ಕೋಟಿ ಗಳಿಕೆ ಮಾಡಿದ ಡಾಲಿ ಧನಂಜಯ ಅವರ ‘ಹೆಡ್ ಬುಷ್’ ಚಿತ್ರ

ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾ ರಿಲೀಸ್ ಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. ಒಂದೆಡೆ ಹೆಡ್ ಬುಷ್ ಸಿನಿಮಾ ತಂಡ ರಾಜ್ಯಾದ್ಯಂತ ಅದ್ದೂರಿ ಪ್ರಚಾರ ಮಾಡುತ್ತಿದೆ. ಮತ್ತೊಂದೆಡೆ ಇದೀಗ ಹೆಡ್-ಬುಷ್ ಸಿನಿಮಾದ ಓಟಿಟಿ ಡಿಜಿಟಲ್ ಮತ್ತು ಟಿವಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ. ಇದು ಡಾಲಿ ಧನಂಜಯ್ ಅವರ ವೃತ್ತಿ ಬದುಕಿನಲ್ಲಿ ಅತಿ ದೊಡ್ಡ ಮೊತ್ತಕ್ಕೆ ಸೇಲ್ ಆದ ಅವರ ಸಿನಿಮಾವಾಗಿದೆ. ನಟ ಧನಂಜಯ್ ಟಗರು ಸಿನಿಮಾದ ನಂತರ ಅದ್ಯಾವ ಮಟ್ಟಗೆ ಬಿಝಿಯಾದ್ರು ಅಂದರೆ ಯಾವ ಸ್ಟಾರ್ ನಟನಿಗೂ ಇಲ್ಲದ ಬೇಡಿಕೆ ಅವರಿಗೆ ಸೃಷ್ಟಿಯಾಯಿತು. ಸಾಲು ಸಾಲು ಸಿನಿಮಾಗಳಲ್ಲಿ ನಟಸಿದರು. ಅದರ ಜೊತೆಗೆ ತಾವೇ ಸ್ವತಃ ಬಡವ ರಾಸ್ಕಲ್ ಅನ್ನೋ ಸಿನಿಮಾ ನಿರ್ಮಾಣ ಮಾಡಿ ಗೆದ್ದರು.

ಈಗ ಧನಂಜಯ್ ಅವರು ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಅದುವೇ ಹೆಡ್ ಬುಷ್ ಅನ್ನೋ ಭೂಗತಲೋಕದ ಕಥಾಹಂದರ ಹೊಂದಿರೋ ಸಿನಿಮಾ. ಈ ಹೆಡ್ ಬುಷ್ ಸಿನಿಮಾದಲ್ಲಿ ಧನಂಜಯ್ ಅವರು ಜಯರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ರೀತಿಯಾಗಿ ಲೂಸ್ ಮಾದ ಯೋಗೇಶ್ ಗಂಗಾ ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರುಗಳ ಜೊತೆಗೆ ಚಿಟ್ಟಿ ಖ್ಯಾತಿಯ ನಟ ವಸಿಷ್ಟ ಸಿಂಹ, ಬಾಲು ನಾಗೇಂದ್ರ, ರಘು ಮುಖರ್ಜಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಗ್ನಿ ಶ್ರೀಧರ್ ಅವರ ದಾದಾಗಿರಿಯ ಆ ದಿನಗಳು ಪುಸ್ತಕದ ಆಧಾರಿತವಾಗಿ ಈ ಹೆಡ್ ಬುಷ್ ಸಿನಿಮಾ ಮಾಡಲಾಗಿದೆ. ಈ ಹೆಡ್ ಬುಷ್ ಸಿನಿಮಾಗೆ ಅಗ್ನಿ ಶ್ರೀಧರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶೂನ್ಯ ಇದೇ ಮೊದಲ ಬಾರಿಗೆ ಹೆಡ್ ಬುಷ್ ಸಿನಿಮಾದ ಮೂಲಕ ಆಕ್ಷನ್ ಕಟ್ ಹೇಳಿದ್ದಾರೆ.

ಈಗಾಗಲೇ ಹೆಡ್ ಬುಷ್ ಸಿನಿಮಾದ ಪೋಸ್ಟರ್ ಅಂಡ್ ಹಾಡುಗಳು ಗಮನ ಸೆಳೆದಿವೆ. ಅದರ ಜೊತೆಗೆ ಇತ್ತೀಚೆಗೆ ದಾವಣಗೆರೆಯಲ್ಲಿ ಅದ್ದೂರಿಯಾಗಿ ರಿಲೀಸ್ ಆದ ಟ್ರೇಲರ್ ಕೂಡಾ ಎಲ್ಲೆಡೆ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಪಾಯಲ್ ರಜಪೂತ್ ಅವರು ಡಾಲಿ ಧನಂಜಯ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಹಬೀಬಿ ಸಾಂಗ್ ನಲ್ಲಿ ಪಾಯಲ್ ಸಖತ್ ಸ್ಟೆಪ್ ಹಾಕಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಹೆಡ್ ಬುಷ್ ಸಿನಿಮಾ ಪಂಚ ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರದ ಕ್ರೇಜ಼್ ಈಗಾಗಲೇ ಸಖತ್ತಾಗಿಯೇ ಇದೆ. ಈ ಚಿತ್ರ ಕ್ರೇಜ಼್ ಕಂಡು ಟಿವಿ ಮತ್ತು ಡಿಜಿಟಲ್ ಓಟಿಟಿ ರೈಟ್ಸ್ ಅನ್ನ ಜೀ಼ ವಾಹಿನಿ ಬರೋಬ್ಬರಿ 22 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆಯಂತೆ. ಇದರಿಂದ ಹೆಡ್ ಬುಷ್ ಸಿನಿಮಾ ತಂಡ ರಿಲೀಸ್ ಗೂ ಮುನ್ನವೇ ಬಂಪರ್ ಬಿಝೆನೆಸ್ ಮಾಡಿದೆ.

Leave a Reply

%d bloggers like this: