ಬಿಡುಗಡೆಗೆ ಮೂರು ತಿಂಗಳ ಮೊದಲೇ 200 ಕೋಟಿ ಬಾಚಿದ ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರ

ಕಾಲಿವುಡ್ ಅಂಡ್ ಟಾಲಿವುಡ್ ನಲ್ಲಿ ಮತ್ತೆ ಕಮಾಲ್ ಮಾಡಲು ಬರುತ್ತಿದ್ದಾರೆ ದಳಪತಿ ವಿಜಯ್. ನಟ ವಿಜಯ್ ಅವರಿಗೆ ಕೇವಲ ಸೌತ್ ಮಾತ್ರ ಅಲ್ಲದೆ ವರ್ಲ್ಡ್ ವೈಡ್ ಅಪಾರ ಅಭಿಮಾನಿ ಬಳಗವಿದೆ. ಅವರ ಸಿನಿಮಾಗಳು ರಿಲೀಸ್ ಆಗ್ತಿದೆ ಅಂದ್ರೆ ಸಾಕು ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ಟಿಕೆಟ್ ಗಳು ರಾತ್ರೋರಾತ್ರಿ ಸೋಲ್ಡ್ ಔಟ್ ಆಗ್ತವೆ. ಅಷ್ಟರ ಮಟ್ಟಿಗೆ ದಳಪತಿ ವಿಜಯ್ ಅವರ ಕ್ರೇಜ಼್ ಇದೆ. ಇದೀಗ ಅಂತಹದ್ದೇ ಒಂದು ಕ್ರೇಜ಼್ ಅನ್ನ ಹುಟ್ಟು ಹಾಕುತ್ತಿರೋದು ನಟ ದಳಪತಿ ವಿಜಯ್ ಅವರ ತಮಿಳಿನ ವಾರಿಸು ಸಿನಿಮಾ. ವಾರಿಸು ಸಿನಿಮಾ ತಮಿಳು ಮತ್ತು ತೆಲುಗು ‌ಭಾಷೆಯಲ್ಲಿ ಮುಂದಿನ ವರ್ಷ ಜನವರಿ12 ಸಂಕ್ರಾತಿ ಹಬ್ಬದಂದು ಅದ್ದೂರಿಯಾಗಿ ವರ್ಲ್ಢ್ ವೈಡ್ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ತಮಿಳಿನಲ್ಲಿ ವಾರಿಸು, ತೆಲುಗಿನಲ್ಲಿ ವಾರಿಸುಡು ಆಗಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಚಿತ್ರಕ್ಕೆ ಸೌತ್ ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ.

ಮೂಲಗಳ ಪ್ರಕಾರ ವಾರಿಸು ಸಿನಿಮಾಗೆ ಬರೋಬ್ಬರಿ ಇನ್ನೂರು ಕೋಟಿ ವೆಚ್ಚವಾಗಿದೆಯಂತೆ. ಇದು ದಿಲ್ ರಾಜು ಅವರಿಗೆ ಬಿಗ್ ಬಜೆಟ್ ಸಿನಿಮಾವಾಗಿದ್ದು, ಈಗಾಗಲೇ ಸಾಕಷ್ಟು ಯಶಸ್ವಿ ಸಿನಿಮಾಗಳನ್ನ ಮಾಡಿರೋ ಅವರಿಗೆ ವಾರಿಸು ಚಿತ್ರ ಕೂಡ ಅದ್ಭುತವಾಗಿ ಯಶಸ್ಸು ತಂದುಕೊಡಲಿದೆ ಎಂದು ತಿಳಿದು ಬರುತ್ತಿದೆ. ಇನ್ನು ಇದೀಗ ವಾರಿಸು ಚಿತ್ರದ ಬಗ್ಗೆ ಭಾರಿ ಸುದ್ದಿ ಆಗುತ್ತಿರೋದು ಅಂದರೆ ಅದು ರಿಲೀಸ್ ಗೂ ಮುನ್ನವೇ ವಿಜಯ್ ಅವರ ವಾರಿಸು ಸಿನಿಮಾಗೆ ಭಾರಿ ಬೇಡಿಕೆ ಉಂಟಾಗಿದೆಯಂತೆ. ವಾರಿಸು ಸಿನಿಮಾ ರಿಲೀಸ್ ಗೆ ಇನ್ನೂ ಎರಡು ತಿಂಗಳು ಬಾಕಿಯಿವೆ. ಅದಕ್ಕೂ ಮುನ್ನ ವಾರಿಸು ಚಿತ್ರ ಭರ್ಜರಿ ಬಿಝೆನೆಸ್ ಮಾಡಲು ಹೊರಟಿದೆ. ದಿಲ್ ರಾಜು ಅವರಿಗೆ ವಾರಿಸು ಸಿನಿಮಾದಿಂದ ಈಗಾಗಲೇ ಅಂದರೆ ಥಿಯೇಟರ್ ನಿಂದ ಲಾಭ ಬರೋಕ್ ಮುನ್ನವೇ ಬರೋಬ್ಬರಿ ಇನ್ನೂರು ಕೋಟಿ ಲಾಭದಲ್ಲಿ ಇದ್ದಾರಂತೆ‌. ಅದ್ಹೇಗೇ ಅನ್ನೋದನ್ನ ತಿಳಿಯೋದಾದ್ರೆ ವಾರಿಸು ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನ ಗೋಲ್ಡ್ ಮೈನ್ ಫಿಲ್ಮ್ಸ್ ಸಂಸ್ಥೆ ಮೂವತ್ತೆರಡು ಕೋಟಿಗೆ ಖರೀದಿ ಮಾಡಿದೆಯಂತೆ.

ಅದೇ ರೀತಿಯಾಗಿ ತಮಿಳಿನ ಸನ್ ನೆಟ್ ವರ್ಕ್ಸ್ ಅವರು ಬರೋಬ್ಬರಿ ಐವತ್ತು ಕೋಟಿಗೆ ಟಿವಿ ರೈಟ್ಸ್ ಪಡೆದಿದ್ದು, ಅಮೇಜಾ಼ನ್ ಪ್ರೈಮ್ ಅವರು ಅರವತ್ತು ಕೋಟಿಗೆ ಡಿಜಿಟಲ್ ರೈಟ್ಸ್ ಪಡೆದಿದ್ದಾರೆ. ಟಿ.ಸೀರೀಸ್ ಸಂಸ್ಥೆ 10 ಕೋಟಿಗೆ ಆಡಿಯೋ ರೈಟ್ಸ್ ಪಡೆದಿದ್ದಾರಂತೆ. ಒಟ್ಟಾರೆಯಾಗಿ ವಿಜಯ್ ಅವರ ವಾರಿಸು ಸಿನಿಮಾ ಬಿಡುಗಡೆಗೆ ಮುನ್ನವೇ ಬರೋಬ್ಬರಿ ಇನ್ನೂರು ಕೋಟಿಯಷ್ಟು ವ್ಯವಹಾರ ನಡೆಸಿದೆ. ಇನ್ನು ಚಿತ್ರ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಿದ್ರೆ ನಿಜಕ್ಕೂ ಕೂಡ ವಿಜಯ್ ಅವರ ವಾರಿಸು ಸಿನಿಮಾ ಐನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಎಲ್ಲಾ ಸೂಚನೆಗಳನ್ನ ನೀಡುತ್ತಿದೆ. ವಾರಿಸು ಸಿನಿಮಾವನ್ನ ಟಾಲಿವುಡ್ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ನಿರ್ದೇಶನ ಮಾಡಿದ್ದು, ವಿಜಯ್ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಎಸ್.ಜೆ ಸೂರ್ಯ, ಶರತ್ ಕುಮಾರ್, ಪ್ರಕಾಶ್ ರಾಜ್, ಪ್ರಭು, ಯೋಗಿಬಾಬು, ಶ್ರೀಕಾಂತ್ ಅಂತಹ ಖ್ಯಾತ ನಟರು ಅಭಿನಯಿಸಿದ್ದಾರೆ.

Leave a Reply

%d bloggers like this: