ಬಿಡುಗಡೆಗೆ ಎರಡು ದಿನ ಇರುವಾಗಲೇ ವಿಕ್ರಾಂತ್ ರೋಣ ಚಿತ್ರ ಟಿಕೆಟ್ ಬುಕ್ಕಿಂಗ್ ಇಂದ ಎಷ್ಟು ಗಳಿಸಿದೆ ಗೊತ್ತೇ

ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಹೌದು ಇದೇ ಜುಲೈ 28ರಂದು ವಿಕ್ರಾಂತ್ ರೋಣನಾಗಿ ಕಿಚ್ಚ ಸುದೀಪ್ ವರ್ಲ್ಡ್ ವೈಡ್ ಅಬ್ಬರಿಸಲಿದ್ದಾರೆ. ಇದರ ನಡುವೆ ನಿರ್ಮಾಪಕರಾದ ಜಾಕ್ ಮಂಜು ಅವರು ಸುದ್ದಿಗೋಷ್ಠಿ ಕರೆದು ಕುತೂಹಲಕಾರಿ ಮಾಹಿತಿ ನೀಡಿದ್ದಾರೆ. ಹೌದು ಕಿಚ್ಚ ಸುದೀಪ್ ಅಭಿಮಾನಿಗಳು ಸೇರಿದಂತೆ ಭಾರತೀಯ ಸಿನಿ ಪ್ರೇಕ್ಷಕರು ಮತ್ತು ಹೊರ ದೇಶದ ಸಿನಿ ಪ್ರೇಕ್ಷಕರು ಕೂಡ ವಿಕ್ರಾಂತ್ ರೋಣ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ವಿಶೇಷ ಅಂದರೆ ಕನ್ನಡದ ಹೆಮ್ಮೆಯ ವಿಕ್ರಾಂತ್ ರೋಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸದೊಂದು ತಂತ್ರಜ್ಞಾನ ಪರಿಚಯ ಮಾಡುವ ಪ್ರಯತ್ನ ನಡೆಯುತ್ತಿದೆ. ನೀವು ಯಾವುದೇ ದೇಶ, ಹೊರ ರಾಜ್ಯಗಳಲ್ಲಿದ್ದಾಗ ಅಲ್ಲಿನ ಥಿಯೇಟರ್ ಗಳಲ್ಲಿ ನೀವು ಕನ್ನಡ ಭಾಷೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ನೋಡಲು ಆಗದಿದ್ದಾಗ ಅಲ್ಲಿ ಕನ್ನಡ ಭಾಷೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ನೋಡಲು ಸಿನಿಡೆಬ್ ಅಳವಡಿಕೆ ಮಾಡಲಾಗಿದೆ. ಈ ಹಿಂದೆ ರಾಕ್ರೆಟ್ರಿ ಸಿನಿಮಾ ಈ ಒಂದು ಪ್ರಯೋಗ ಮಾಡಿತ್ತು. ಇದೀಗ ಕನ್ನಡದಲ್ಲಿ ಕೂಡ ಈ ಒಂದು ಪ್ರಯತ್ನ ಮಾಡಲಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ಜಾಕ್ ಮಂಜು ಅವರು ಮಾತನಾಡಿ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಭಾರಿ ಬೇಡಿಕೆ ಪಡೆದುಕೊಂಡಿದೆ.

ಥ್ರೀಡಿಯಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನು ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ನೂರಾರು ತಂತ್ರಜ್ಞರು ಹಗಲಿರುಳು ಶ್ರಮ ಹಾಕಿ ಹಾಲಿವುಡ್ ಸಿನಿಮಾಗಳ ಗುಣಮಟ್ಟದಂತೆ ವಿಕ್ರಾಂತ್ ರೋಣ ಸಿನಿಮಾ ತಾಂತ್ರಿಕವಾಗಿ ರಿಚ್ ಆಗಿ ಮೂಡಿಬಂದಿದೆ. ಸಿನಿ ಪ್ರೇಕ್ಷಕರು ವಿಕ್ರಾಂತ್ ಸಿನಿಮಾವನ್ನು ಟು ಡಿಗಿಂತ ಥ್ರೀಡಿಯಲ್ಲೇ ನೋಡಲು ಇಚ್ಚೆ ವ್ಯಕ್ತಪಡಿಸಿ ಆನ್ಲೈನ್ ಬುಕ್ಕಿಂಗ್ ನಲ್ಲಿ ಹೆಚ್ಚು ಥ್ರೀಡಿಯಲ್ಲೇ ಬುಕ್ಕಿಂಗ್ ಆಗಿದೆಯಂತೆ. ಈಗಾಗಲೇ ಒಂದು ವಾರದ ಮುಂಚೆಯೇ ವಿಕ್ರಾಂತ್ ರೋಣ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಆಗಿದೆಯಂತೆ. ಕರ್ನಾಟಕ ರಾಜ್ಯದಲ್ಲಿ 420ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುತ್ತಿದ್ದು, ಅತಿ ಹೆಚ್ಚು ಕನ್ನಡ ಭಾಷೆಯಲ್ಲೇ ರಿಲೀಸ್ ಆಗಲಿದೆ. ಹಿಂದಿಯಲ್ಲಿ ಬರೋಬ್ಬರಿ 900 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಪ್ರದರ್ಶನವಾಗಲಿದೆ ಎಂದು ತಿಳಿದು ಬಂದಿದೆ.

ಇದರ ಜೊತೆಗೆ ಪಾಕಿಸ್ತಾನದಲ್ಲಿಯೂ ಕೂಡ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ವಿಕ್ರಾಂತ್ ರೋಣ ಸಿನಿಮಾ ಅಪಾರ ನಿರೀಕ್ಷೆ ಹುಟ್ಟು ಹಾಕಿದ್ದು, ವರ್ಲ್ಡ್ ವೈಡ್ ಸಖತ್ ಕ್ರೇಜ಼್ ಪಡೆದುಕೊಂಡಿದೆ. ಈಗಾಗಲೇ ರಾರಾರಕ್ಕಮ್ಮ ಸಾಂಗ್ ಮತ್ತು ಟ್ರೇಲರ್ ಮೂಲಕ ಕ್ರೇಜ್ ಹುಟ್ಟಿಸಿರುವ ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಸುದೀಪ್ ಅವರಿಗೆ ಜೋಡಿಯಾಗಿ ನೀತಾ ಅಶೋಕ್ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ನಿರೂಪ್ ಭಂಡಾರಿ ನಟಿಸಿದ್ದಾರೆ. ಬರೋಬ್ಬರಿ 95 ಕೋಟಿ ಬಜೆಟ್ ವೆಚ್ಚದಲ್ಲಿ ತಯಾರಾಗಿರುವ ಈ ಸಿನಿಮಾಗೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದು, ಅಜನೀಶ್ ಲೋಕನಾಥ್ ರಾಗ ಸಂಯೋಜನೆ ಮಾಡಿದ್ದಾರೆ. ಬಿಡುಗಡೆಗೆ ಇನ್ನು ಎರಡು ದಿನ ಇರುವಾಗಲೇ ಈ ಚಿತ್ರಕ್ಕೆ ಮುಂಗಡ ಬುಕಿಂಗ್ ಇಂದ ಸುಮಾರು ಎರಡು ಕೋಟಿ ತೊಂಬತ್ತು ಲಕ್ಷ ಹಣ ಗಳಿಸಿದೆ.

Leave a Reply

%d bloggers like this: