ಭ್ರೂಣದ ರೀತಿಯ ವಿಚಿತ್ರ ಏಲಿಯನ್ ಕಂಡು ಬೆಚ್ಚಿಬಿದ್ದ ವಿಜ್ಞಾನಿಗಳು.. ನೋಡಿ ಒಮ್ಮೆ

ಜಗತ್ತಿನ ಪ್ರತಿಷ್ಟಿತ ಈ ದೇಶದಲ್ಲಿ ಏಲಿಯನ್ ಭ್ರೂಣ ನಿಜಕ್ಕೂ ಕಾಣಿಸಿಕೊಂಡಿದ್ಯ..! ಈ ಒಂದು ಅಚ್ಚರಿಯ ಪ್ರಶ್ನೆಗೆ ಕಾರಣವಾಗಿದೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಒಂದು ದೃಶ್ಯ ತುಣುಕು. ಹೌದು ಜಗತ್ತಿನಲ್ಲಿ ದಿನ ನಿತ್ಯ ನೂರಾರು ವಿಸ್ಮಯಕಾರಿ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಆದರೆ ಅವುಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ. ಈ ಆಧುನಿಕ ಯುಗದಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರ ಅಗಾಧವಾಗಿ ಬೆಳೆದಿದೆ. ಇದರ ಪರಿಣಾಮವಾಗಿ ಇಂದು ಜಗತ್ತಿನ ಯಾವ ಯಾವ ಮೂಲೆಯಲ್ಲೇ ಆಗಲಿ ಏನೇ ಅದರೂ ಕೂಡ ನಿಮಿಷಾರ್ಧದಲ್ಲಿ ಇಡೀ ಜಗತ್ತಿನಾದ್ಯಂತ ಸುದ್ದಿ ಆಗುತ್ತದೆ. ಇದೀಗ ಅಂತಹ ಅಚ್ಚರಿಯ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅದ್ಯಾವುದೂ ಅಂತೀರಾ. ಹೌದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಿಂದ ಅಪಾರ ಪ್ರಮಾಣದ ಮಳೆ ಆಗಿದೆ. ಇದರಿಂದ ಭೂಮಿ ಕೂಡ ಫಲಲತ್ತಾಗಿದೆ.

ಇದರ ನಡುವೆ ಆಶ್ಚರ್ಯಕರ ಭ್ರೂಣ ಪತ್ತೆಯಾಗಿ ವಿಜ್ಞಾನಿಗಳನ್ನೆ ದಂಗಾಗಿಸಿದೆ. ಸಿಡ್ನಿ ನಗರದ ನಿವಾಸಿಯಾದ ಹ್ಯಾರಿ ಹ್ಯಾಸ್ ಎಂಬುವವರು ಎಂದಿನಂತೆ ಸಹಜವಾಗಿ ಮಾರ್ನಿಂಗ್ ಜಾಗೀಂಗ್ ಹೋಗಿದ್ದಾರೆ. ಇದರ ನಡುವೆ ಜಾಗೀಂಗ್ ಮಾಡುತ್ತಿದ್ದ ಹ್ಯಾಪಿ ಹ್ಯಾಕ್ ಅವರು ಆಯ ತಪ್ಪಿ ಕೆಳಗೆ ಮುಗ್ಗರಿಸಿದ್ದಾರೆ. ಹ್ಯಾರಿ ಹ್ಯಾಸ್ ಅವರು ಬಿದ್ದು ಮೇಲೇಳುವ ಸಂದರ್ಭದಲ್ಲಿ ಅವರಿಗೆ ಒಂದು ವಿಚಿತ್ರ ಆಕೃತಿಯ ಜೀವಿ ಕಾಣಿಸಿಕೊಂಡಿದೆ. ಇದು ನೋಡಲು ಏಲಿಯನ್ ರೀತಿಯಲ್ಲಿದ್ದು ಇದನ್ನ ಹ್ಯಾರಿ ಹ್ಯಾಸ್ ಅವರು ಕೋಲಿನಿಂದ ತಿವಿಯಲು ಪ್ರಯತ್ನ ಮಾಡಿದ್ದಾರೆ. ಆದರೆ ನೆಲವನ್ನು ಗಟ್ಟಿಯಾಗಿ ಅಂಟಿಕೊಂಡು ಹೊರಳಾಡಿದೆ. ಈ ವಿಚಿತ್ರವಾದ ಆಕೃತಿಯನ್ನ ಹ್ಯಾರಿ ಹ್ಯಾಕ್ ಅವರು ವೀಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಶ್ವ ಚಿತ್ರರಂಗದ ಅನೇಕ ಸಿನಿಮಾ ಸೆಲೆಬ್ರಿಟಿಗಳು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಇದು ಏನು ಎಂದು ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದಾರೆ. ಇನ್ನು ಈ ಏಲಿಯನ್ ಆಕೃತಿಯನ್ನ ಕಂಡ ಜೀವಶಾಸ್ತ್ರಜ್ಞರು, ವಿಜ್ಞಾನಿಗಳು, ಅನೇಕ ಶಿಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಿಡ್ನಿ ಯುನಿವರ್ಸಿಟಿ ಮತ್ತು ನ್ಯೂ ಸೌತ್ ವೇಲ್ಸ್ ಯೂನಿವರ್ಸಿಟಿ ಗೆ ಈ ವಿಚಿತ್ರ ಆಕೃತಿಯ ಜೀವಿಯನ್ನ ಪರೀಕ್ಷೆಗೆ ತೆಗೆದು ಕೊಂಡು ಹೋದಾಗ ಅಲ್ಲಿನ ಪರಿಣಿತ ಯಾರು ಕೂಡ ಆ ಜೀವಿಯನ್ನ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

Leave a Reply

%d bloggers like this: