ಇಲ್ಲಿ ಭೂರಿ ಭೋಜನ ತಿಂದು ಮುಗಿಸಿದವರಿಗೆ ಬುಲೆಟ್ ಬೈಕ್ ಉಚಿತ

ಇಲ್ಲಿದೆ ಒಂದು ಮಜವಾದ ಸುದ್ದಿ.ಇಲ್ಲಿ ತಟ್ಟೆ ಪೂರ್ತಿ ಖಾಲಿ ಮಾಡಿದರೆ ಹೊಸ ಬುಲೆಟ್ ಬೈಕ್ ಸಮೇತ ಮನೆಗೆ ಬರಬಹುದು.ಅಂಥ ಸುವರ್ಣಾವಕಾಶ ನೀಡಿದ್ದಾರೆ ಈ ಹೊಟೆಲ್ ಮಾಲೀಕರು.ಫೈವ್ ಸ್ಟಾರ್ ಹೊಟೆಲ್ ಗಳಿಗೆ ಹೋಗುವ ಮುನ್ನ ಜನ ಎರಡು ಬಾರಿ ಯೋಚಿಸುತ್ತಾರೆ.ಯಾಕಂದ್ರೆ ಬೇರೆ ಕಡೆಗಳಿಗಿಂತ ಅಲ್ಲಿ ಅನೇಕ ಪಟ್ಟು ಬೆಲೆ ಜಾಸ್ತಿ.ಇದೇ ಕಾರಣಕ್ಕೆ ಹೊಟೆಲ್ ಮಾಲೀಕರು ಕಸ್ಟಮರ್ ಗಳನ್ನ ಸೆಳೆಯಲು ಇಂಥ ಆಫರ್ ಗಳನ್ನು ಕೊಡುತ್ತಾರೆ.ಎಲ್ಲಿದೆ ಈ ಹೊಟೆಲ್ ಅಂತ ಕುತೂಹಲ ತಡ್ಕೊಳಕಾಗ್ತಿಲ್ವ? ಈ ಹೊಟೆಲ್ ಪುಣೆಯಲ್ಲಿ ಇರುವುದು ಹೋಟೆಲ್ ಶಿವರಾಜ್ ಅಂತ.ಇದರ ಮಾಲೀಕರು ಇತ್ತೀಚೆಗೆ ಪ್ರಕಟಿಸಿರುವ ‘ಬುಲೆಟ್ ಥಾಲಿ’ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.ಹೌದು ಈ ಬುಲೆಟ್ ಥಾಲಿ ತಿಂದು ಮುಗಿಸಿದರೆ ಸಿಗುತ್ತೆ ಎನ್‌ಫೀಲ್ಡ್ ಬುಲೆಟ್.

ಇದಕ್ಕೆ ಅವರು ಹಾಕಿರುವ ಷರತ್ತು ಒಂದು ಗಂಟೆಯಲ್ಲಿ ತಟ್ಟೆ ಖಾಲಿ ಮಾಡಬೇಕು.ಈ ಬುಲೆಟ್ ಥಾಲಿ ಸಾಮಾನ್ಯವಾದದ್ದಲ್ಲ ಅದನ್ನು ತಯಾರಿಸಲು ಹೊಟೆಲಲ್ಲಿ ಬರೋಬ್ಬರಿ 55 ಜನ ಬಾಣಸಿಗರಿದ್ದಾರೆ.ಏನಪ್ಪ ಆ ಬುಲೆಟ್ ಥಾಲಿ ಏನೇನಿರುತ್ತೆ ಅದರಲ್ಲಿ ಅಂತ ನೋಡಿ.ಅನೇಕ ಹೊಟೆಲ್ ಗಳಲ್ಲಿ ಮಹಾರಾಜ ಥಾಲಿ,ಬಾಹುಬಲಿ ಥಾಲಿ ಅಂತಹ ಇನ್ನೂ ಅನೇಕ ವಿಧದ ಭೂರಿ ಭೋಜನವನ್ನು ಗ್ರಾಹಕರಿಗೆ ನೀಡುತ್ತವೆ.ಅದೇ ರೀತಿ ಈ ಬುಲೆಟ್ ಥಾಲಿ.ಇದರಲ್ಲಿ 4 ಕೆಜಿ ಮಟನ್,ಕರಿದ ಮೀನು,ಮತ್ತು 12 ತರಹದ ವಿವಿಧ ಆಹಾರ ಇದೆ.ಪಾಮ್ ಫ್ರೆಟ್ 8 ಪೀಸು,ಸುರ್ಮಾಯಿ ಎಂಟು ಪೀಸು,8 ಚಿಕನ್ ಲೆಗ್ ಪೀಸು,ಕಿಲ್ಲಾಂಬಿ ಕರ್ರಿ,ಮಟನ್ ಮಸಾಲಾ,ಕೋಲಂಬಿ ಬಿರಿಯಾನಿ,ಕರಿದ ಹುಂಜ,ಕೋಲಂಬಿ ಕೋಲಿವಾಡಾ,8 ಚಪಾತಿ,8 ರೋಟಿ,8 ಮಟನ್ ಮಲಾನಿ ಸೂಪು,8 ಹಪ್ಪಳ,8 ಸೋಲ್ಕಡಿ,4 ನೀರಿನ ಬಾಟಲ್ ಹೊಂದಿರುವ ಭೂರಿ ಭೋಜನವಿದು‌‌‌.ಇದನ್ನೆಲ್ಲ ಒಂದೇ ಗಂಟೆಯಲ್ಲಿ ತಿಂದು ಮುಗಿಸಬೇಕು.ಅದಕ್ಕೆ ಎರಡು ಸುಲಭ ಆಯ್ಕೆಗಳಿವೆ.ಅದೇನು ನೋಡಿ.

4,444 ರೂಪಾಯಿನ ಬುಲೆಟ್ ಥಾಲಿಯನ್ನು ಇಬ್ಬರು ಜೊತೆಯಲ್ಲಿ ಒಂದು ಗಂಟೆಯಲ್ಲಿ ತಿಂದು ಮುಗಿಸಬೇಕು.ಇನ್ನೊಂದು 2,500 ಸಾವಿರದ ಒಂದು ಮಿನಿ ಬುಲೆಟ್ ಥಾಲಿಯನ್ನು ಒಬ್ಬ ಒಂದು ಗಂಟೆಯಲ್ಲಿ ತಿಂದು ಮುಗಿಸಬೇಕು.ಇನ್ನೂ ಬುಲೆಟ್ ಥಾಲಿ ಒಂದೇ ವಿಧದಲ್ಲಿ ಇಲ್ಲ.ಆರು ವಿಧದ ಬುಲೆಟ್ ಥಾಲಿ ಇವೆ.ರಾವಣ್ ಥಾಲಿ,ಮಲ್ವಾನಿ ಮಚಲಿ ಥಾಲಿ,ಪೈಲ್ವಾನ್ ಮಟನ್ ಥಾಲಿ,ಬಕಾಸುರ್ ಚಿಕನ್ ಥಾಲಿ,ಸರ್ಕಾರ್ ಮಟನ್ ಥಾಲಿ,ಬುಲೆಟ್ ಥಾಲಿ.ಹೀಗಾಗಿ ಹೊಟೆಲ್ ಮುಂದೆ ಆರು ಹೊಸ ಬುಲೆಟ್ ನಿಲ್ಲಿಸಿದ್ದಾರೆ.ಇಷ್ಟೆಲ್ಲಾ ತಿನ್ನೋದು ಅಸಾಧ್ಯ ಇದನ್ನು ಯಾರೂ ಗೆಲ್ಲಲ್ಲ ಅನ್ಕೊಬೇಡಿ.ಸೊಲ್ಲಾಪುರದ ಸೋಮನಾಥ್ ಕುಟುಂಬದ ಒಬ್ಬರು ಈ ಭೂರಿ ಭೋಜನ ಬಾರಿಸಿ ಒಂದು ಬುಲೆಟ್ ಗೆದ್ದಿದ್ದಾರೆ.ಒಟ್ನಲ್ಲಿ ಮಾಲೀಕರು ಕೊಟ್ಟ ಈ ಆಫರ್ ಭಾರೀ ಫೇಮಸ್ ಆಗಿಬಿಟ್ಟಿದೆ.ಅವರ ವ್ಯಾಪಾರ ಸಖತ್ತಾಗಿ ಬೆಳೆದಿದೆ.

Leave a Reply

%d bloggers like this: