ಭಾರತದ ಈ ಬ್ಯಾಂಕ್ ಬಂದ್ ಆಗಲಿದೆ, ಅಕೌಂಟಲ್ಲಿ ಹಣ ಇಟ್ಟವರು ಓದಿ ತಿಳಿಯಿರಿ

ಈಗ ಭಾರತದಲ್ಲಿ ಆಗಿರುವ ಆರ್ಥಿಕ ನೀತಿಯ ಬದಲಾವಣೆಗಳು ವಿದೇಶೀ ಬ್ಯಾಂಕುಗಳಿಗೆ ಹಿಡಿಸಿಲ್ಲ.ಹೀಗಾಗಿ ಕೆಲವು ವಿದೇಶೀ ಕಂಪನಿಗಳು,ಬ್ಯಾಂಕುಗಳು ಭಾರತದಲ್ಲಿ ತಮ್ಮ ವಹಿವಾಟುಗಳನ್ನು ಮುಂದುವರಿಸುವುದಿಲ್ಲ.ಈಗ ಮತ್ತೊಂದು ಬ್ಯಾಂಕು ತನ್ನ ವ್ಯವಹಾರಕ್ಕೆ ತಿಲಾಂಜಲಿ ಇಡಲು ಮುಂದಾಗಿದೆ.ಅದು ಅಮೇರಿಕ ಮೂಲದ ಸಿಟಿ ಬ್ಯಾಂಕ್.ಇದಕ್ಕೆ ಬೇರೆ ಕಾರಣ ಕೂಡ ಇದೆ.ಸಿಟಿ ಬ್ಯಾಂಕು ತನ್ನ ಪ್ರಾಪಂಚಿಕ ವ್ಯಾಪಾರ ಕಾರ್ಯತಂತ್ರದಲ್ಲಿ ಭಾರತ ಅಷ್ಟೇ ಅಲ್ಲದೇ ಇಡೀ ಏಷ್ಯಾ,ಆಫ್ರಿಕಾ,ಮಧ್ಯ ಪ್ರಾಚ್ಯ ದೇಶಗಳು,ಯೂರೋಪು ಮುಂತಾದ ಹದಿಮೂರು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ತನ್ನ ವವಿಹಾಟನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಸಿಟಿ ಬ್ಯಾಂಕು ನೆನ್ನೆ ಮೊನ್ನೆ ಭಾರತಕ್ಕೆ ಬಂದಿದ್ದಲ್ಲ 1902 ರಲ್ಲೇ ಬಂದಿದ್ದು.1985ರಲ್ಲಿ ಗ್ರಾಹಕ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಿತು.ಸಿಟಿ ಬ್ಯಾಂಕು ಕ್ರೆಡಿಟ್ ಕಾರ್ಡುಗಳು,ಚಿಲ್ಲರೆ ಬ್ಯಾಂಕಿಂಗು,ಮನೆ ಸಾಲಗಳು ಮತ್ತು ಸಂಪತ್ತು ನಿರ್ವಹಣೆಯ ವ್ಯವಹಾರಗಳನ್ನು ಹೊಂದಿದೆ.ಸಿಟಿ ಬ್ಯಾಂಕು ಭಾರತದಲ್ಲಿ ಮೂವತ್ತೈದು ಶಾಖೆಗಳನ್ನು ಹೊಂದಿದೆ.ಇಷ್ಟು ಸಮಯದಲ್ಲಿ ನಾಲ್ಕು ಸಾವಿರ ಜನ ಅವರ ಗ್ರಾಹಕ ಬ್ಯಾಂಕಿಂಗ್ ವ್ಯವಹಾರದಲ್ಲಿ ಕೆಲ್ಸ ಮಾಡಿದರು. ಜಗತ್ತಿನ ಅನೇಕ ದೇಶದಲ್ಲಿ ಬ್ಯಾಂಕಿಂಗ್ ವ್ಯವಹಾರ ಸ್ಥಗಿತಗೊಳಿಸುತ್ತಿರುವ ಸಿಟಿ ಬ್ಯಾಂಕು ಸಾಂಸ್ಥಿಕ ಬ್ಯಾಂಕಿಂಗ್ ಹೊರತಾಗಿ ಮುಂಬೈ,ಪುಣೆ,ಬೆಂಗಳೂರು,ಚೆನ್ನೈ ಹಾಗೂ ಗುರುಗ್ರಾಮ್ ಮುಂತಾದ ಕೇಂದ್ರಗಳಿಂದ ಒದಗಿಸಲಾಗುವ ಆಫ್ ಶೋರಿಂಗ್ ಅಥವಾ ಜಾಗತಿಕ ವ್ಯಾಪಾರ ಬೆಂಬಲದತ್ತ ಗಮನ ಹರಿಸಲಿದೆ.

ಸಿಟಿ ಬ್ಯಾಂಕು ತನ್ನ ಚಿಲ್ಲರೆ ಹಾಗೂ ಗ್ರಾಹಕ ವ್ಯಾಪಾರವನ್ನು ಭಾರತದಲ್ಲಿ ಮಾರಾಟ ಮಾಡಲು ಖರೀದಿದಾರರನ್ನು ಹುಡುಕ್ತಿದೇ. ಸಿಟಿ ಬ್ಯಾಂಕು 2019-20 ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 4912 ಕೋಟಿ ರೂಪಾಯಿ ನಷ್ಟ ಹೊಂದಿದೆ.ಇದರ ಹಿಂದಿನ ವರ್ಷದಲ್ಲಿ 4185 ಕೋಟಿ ರೂ ನಷ್ಟ.ಸಿಟಿ ಇಂಡಿಯಾದ ಪ್ರಮುಖ ಕಾರ್ಯನಿರ್ವಾಹಕ ಆಶು ಖುಲ್ಲರ್ ಹೇಳಿದಂತೆ ಈ ಪ್ರಕಟಣೆಯಂತೆ ನಮ್ಮ ಕಾರ್ಯಾಚರಣೆಯಲ್ಲಿ ತಕ್ಷಣವೇ ಯಾವುದೇ ಬದಲಾವಣೆಯಾಗಲ್ಲ ಹಾಗಾಗಿ ಇದರಿಂದ ನಮ್ಮ ಗ್ರಾಹಕರು ಹಾಗೂ ಪಾಲುದಾರರ ಮೇಲೆ ಧಿಡೀರ್ ಪರಿಣಾಮವಾಗಲ್ಲ.ಎಂದಿನಂತೆ ನಮ್ಮ ಗ್ರಾಹಕರ ಸೇವೆ ಮುಂದುವರಿಯುತ್ತದೆ ಅಂದಿದ್ದಾರೆ.

Leave a Reply

%d bloggers like this: