ಭರ್ಜರಿಯಾಗಿ ಹಾರಾಡುತ್ತಿದೆ ಗಾಳಿಪಟ2 ಚಿತ್ರ, ಮೂರು ದಿನದ ಗಳಿಕೆ ಎಷ್ಟು ಗೊತ್ತೇ

ಸಾಲು ಸಾಲು ರಜೆಗಳು ಇರುವುದರಿಂದ ಗಾಳಿಪಟ2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ಗಾಳಿಪಟ2 ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡು ದಿನವೊಂದಕ್ಕೆ ಐದಾರು ಕೋಟಿ ಕಲೆಕ್ಷನ್ ಮಾಡುತ್ತಿದೆ. ಗಣೇಶ್ ಅವರ ಸಿನಿಮಾ ಬಹು ಧೀರ್ಘ ವರ್ಷಗಳ ನಂತರ ಈ ರೀತಿಯಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಸಿನಿಮಾಗಳು ಎಲ್ಲಿಯೂ ಕೂಡ ಫೇಲ್ಯೂರ್ ಆಗಿಲ್ಲ. ಮುಂಗಾರು ಮಳೆಯಿಂದ ಹಿಡಿದು ಇತ್ತಿಚೆಗೆ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಮುಗುಳು ನಗೆ ಸಿನಿಮಾದವರೆಗೆ ಎಲ್ಲಿಯೂ ಕೂಡ ಇವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದ ಸಿನಿಮಾಗಳು ಎಲ್ಲಿಯೂ ಕೂಡ ವಿಫಲ ಆಗಿರಲಿಲ್ಲ.

ಸೂಪರ್ ಹಿಟ್ ಜೋಡಿ ಅಂತಾನೇ ಕರೆಸಿಕೊಂಡಿದ್ದ ಯೋಗರಾಜ್ ಭಟ್ ಮತ್ತು ಗಣೇಶ್ ಗಾಳಿಪಟ2 ಸಿನಿಮಾದಲ್ಲಿಯೂ ಕೂಡ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಗಾಳಿಪಟ2 ಆಗಸ್ಟ್ 12ರಂದು ಬಿಡುಗಡೆಯಾಗಿ ಮೊದಲ ದಿನವೇ ಎಂಟು ಕೋಟಿ ಕಲೆಕ್ಷನ್ ಮಾಡಿತು ಎಂದು ಹೇಳಲಾಗುತ್ತಿದೆ. ತದ ನಂತರ. ಶನಿವಾರ, ಭಾನುವಾರ ಮತ್ತು ಇಂದು ಸೋಮವಾರ ಕೂಡ ಹಾಲಿ ಡೇ ಇರುವುದರಿಂದ ಸಿನಿ ಪ್ರೇಕ್ಷಕರು ಥಿಯೇಟರ್ ಗಳತ್ತ ಮುಖ ಮಾಡುತ್ತಾರೆ. ಇದೇ ಸಂಧರ್ಭದಲ್ಲಿ ಗಣೇಶ್ ಅವರ ಗಾಳಿಪಟ2 ಸಿನಿಮಾಗೆ ಒಳ್ಳೇಯ ವರದಾನವಾಗಿದ್ದು ಭರ್ಜರಿ ಕಲೆಕ್ಷನ್ ಮಾಡುವ ವಿಶ್ವಾಸದಲ್ಲಿದೆ. ಗಾಳಿಪಟ2 ಸಿನಿಮಾ ನೋಡಿದ ಪ್ರೇಕ್ಷಕರು ಗಣೇಶ್ ಅವರ ನಟನೆಗೇ ಫಿಧಾ ಆಗಿದ್ದು ಅವರ ನಟನೆಗೆ ಎಲ್ಲೆಡೆ ಭಾರಿ ಮೆಚ್ಚುಗೆ ಕೇಳಿ ಬರುತ್ತಿದೆ. ದಿಗಂತ್ ಅವರ ಕಾಮಿಡಿ ಕಚಗುಳಿ ಸಿನಿ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಭಾವನಾತ್ಮಕವಾಗಿಯೂ ಕೂಡ ಕಾಡಲಿದ್ದು.

ಅನಂತ್ ನಾಗ್ ಅವರ ಮೇಷ್ಟ್ರು ಪಾತ್ರ, ಶರ್ಮಿಳಾ ಮಾಂಡ್ರೆ ಅವರ ಕನ್ನಡ ಪ್ರಾಧ್ಯಾಪಕಿಯ ಪಾತ್ರ, ಭೂಷಣ್ ಪಾತ್ರದಲ್ಲಿ ಪವನ್ ನಟನೆ, ವೈಭವಿ ಶಾಂಡಿಲ್ಯ, ಸಂಯುಕ್ತಾಮೆನನ್ ಅವರ ಉತ್ತಮ ಅಭಿನಯ ಸೇರಿದಂತೆ ಚಿತ್ರದ ಎಲ್ಲಾ ಹಾಸ್ಯ, ಪ್ರೀತಿ ಪ್ರೇಮ, ತ್ಯಾಗ, ಕಣ್ಣೀರು ಮಿಶ್ರಿತ ಕಥಾ ಹಂದರ ಗಾಳಿಪಟ2 ಸಿನಿಮಾವನ್ನು ಗೆಲ್ಲಿಸಿದೆ. ಮೂಲಗಳ ಪ್ರಕಾರ ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಮೂರುದಿನದಲ್ಲಿ ಗಾಳಿಪಟ2 ಸಿನಿಮಾ ಬರೋಬ್ಬರಿ ಇಪ್ಪತ್ತೈದು ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ಈಗಾಗಲೇ ಖುಷಿಯಾಗಿದ್ದು, ಜೀ಼ ಕನ್ನಡ ವಾಹಿನಿಗೆ ಡಿಜಿಟಲ್ ಸ್ಯಾಟಲೈಟ್ ರೈಟ್ಸ್ ಹಕ್ಕನ್ನ ಭಾರಿ ಮೊತ್ತಕ್ಕೆ ಮಾರಾಟ ಮಾಡಿದ್ದು, ಆನಂದ್ ಆಡಿಯೋ ಸಂಸ್ಥೆಗೆ ಹಾಡಿನ ಹಕ್ಕನ್ನ ಉತ್ತಮ ಮೊತ್ತಕ್ಕೆಮಾರಾಟ ಮಾಡಿದ್ದಾರೆ. ಒಟ್ಟಾರೆಯಾಗಿ ಮೂರೇ ದಿನಕ್ಕೆ ಇಪ್ಪತ್ತೈದು ಕೋಟಿ ಕಲೆಕ್ಷನ್ ಮಾಡುವ ಮೂಲಕ ಗಾಳಿಪಟ2 ಸಿನಿಮಾ ಸದ್ಯಕ್ಕೆ ಬಾಕ್ಸ್ ಆಫೀಸ್ ನಲ್ಲಿ ಬ್ಯಾಂಗ್ ಮಾಡುತ್ತಿದೆ.

Leave a Reply

%d bloggers like this: