ಭರ್ಜರಿಯಾಗಿ ಬಿಡುಗಡೆಗೆ ಸಿದ್ಧವಾಗಿದೆ ಅಮಿರ್ ಖಾನ್ ಅವರ ಹೊಸ ಚಿತ್ರ, ಮುಂಗಡ ಬುಕಿಂಗ್ ಇಂದ ಗಳಿಸಿದ್ದೆಷ್ಟು ಗೊತ್ತೇ

ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ನಟ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ದೇಶದಲ್ಲಿ ‌ಬಹಿಷ್ಕಾರ ಹಾಕುವಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಯುತ್ತಿದೆ. ಇದರಿಂದ ಅಮೀರ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನ ಬಾಯ್ ಕಟ್ ಮಾಡಬೇಕು ಎಂಬ ಧ್ವನಿ ಕೇಳಿ ಬರಲು ಪ್ರಮುಖ ಕಾರಣ ಅಂದ್ರೆ 2015ರಲ್ಲಿ ಸಂದರ್ಶನವೊಂದರಲ್ಲಿ ಅಮೀರ್ ಖಾನ್ ಅವರು ಭಾರತ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ನಾನು ಮತ್ತು ನನ್ನ ಪತ್ನಿ ಭಾರತ ದೇಶವನ್ನು ತೊರೆಯಲು ಮನಸ್ಸು ಮಾಡಿದ್ದೇವೆ ಎಂದು ಹೇಳಿದ್ದರು. ಅಮೀರ್ ಖಾನ್ ಅವರ ಈ ಹೇಳಿಕೆಗೆ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಇದೇ ಹೇಳಿಕೆ ಅಮೀರ್ ಖಾನ್ ಅವರಿಗೆ ಮುಳುವಾಗಿದೆ. ಹೌದು ಇದೇ ಆಗಸ್ಟ್ 11ರಂದು ಲಾಲ್ ಸಿಂಗ್ ಚಡ್ಡಾ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ.

ಇದರ ನಡುವೆ ಈ ಚಿತ್ರವನ್ನು ಬಾಯ್ಕಟ್ ಮಾಡಬೇಕು ಎಂಬ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಆರಂಭಗೊಂಡಿದೆ. ಇದರಿಂದ ಆತಂಕಗೊಂಡಿರುವ ಅಮೀರ್ ಖಾನ್ ದಯವಿಟ್ಟು ನನ್ನ ಸಿನಿಮಾವನ್ನ ಬಹಿಷ್ಕಾರ ಮಾಡಬೇಡಿ. ನಾನು ಭಾರತೀಯ. ನನ್ನ ಭಾರತ ದೇಶವನ್ನು ನಾನು ಪ್ರೀತಿಸುತ್ತೇನೆ. ನಾನು ನನ್ನ ದೇಶವನ್ನು ಪ್ರೀತಿಸುವುದಿಲ್ಲ ಅಂತ ತಿಳಿದಿರುವುದು ನಿಜಕ್ಕೂ ಕೂಡ ದುರಂತ ಎಂದು ತಿಳಿಸಿದ್ದಾರೆ. ಈ ಲಾಲ್ ಸಿಂಗ್ ಚಡ್ಡಾ ಸಿನಿಮಾ ಇಂಗ್ಲೀಷ್ ಭಾಷೆಯ ಫಾರೆಸ್ಟ್ ಗಂಪ್ ಸಿನಿಮಾದ ರೀಮೇಕ್ ಆಗಿದೆ. ಈ ಚಿತ್ರದಲ್ಲಿ ನಟನೆ ಮಾಡಿರುವುದರ ಜೊತೆಗೆ ಅಮೀರ್ ಖಾನ್ ಅವರು ತಾವೇ ಸ್ವತಃ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬರೋಬ್ಬರಿ 180 ಕೋಟಿಯಲ್ಲಿ ಅದ್ದೂರಿತನ ವೆಚ್ಚದಲ್ಲಿ ತಯಾರಾಗಿರುವ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಮೀರ್ ಖಾನ್ ಅವರಿಗೆ ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದು, ಮುಖ್ಯ ಭೂಮಿಕೆಯಲ್ಲಿ ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ ನಟಿಸಿದ್ದಾರೆ.

ನಟ ಅಮೀರ್ ಖಾನ್ ಅವರ ಸಿನಿಮಾಗಳು ಅಂದರೆ ಸಾಮಾಜಿಕ ಸಂದೇಶಗಳನ್ನೊಳಗೊಂಡಿರುವುದರ ಜೊತೆಗೆ ಒಂದು ಮಾಹಿತಿಯ ಮನರಂಜನಾತ್ಮಕ ಸಿನಿಮಾ ಆಗಿರುತ್ತದೆ. ಹಾಗಾಗಿಯೇ ಅವರ ಸಿನಿಮಾಗಳಿಗೆ ಭಾರತ ಮಾತ್ರ ಅಲ್ಲದೆ ಹೊರ ದೇಶದಲ್ಲಿಯೂ ಕೂಡ ಭಾರಿ ಬೇಡಿಕೆ ಇರುತ್ತದೆ. ಕಳೆದ ಬಾರಿ ಅವರ ದಂಗಲ್ ಸಿನಿಮಾ ಚೀನಾ ದೇಶದಲ್ಲಿ ಭಾರಿ ಮೊತ್ತವನ್ನು ಕಲೆಕ್ಷನ್ ಮಾಡುವ ಮೂಲಕ ದಾಖಲೆ ಮಾಡಿತ್ತು. ಇದೀಗ ಅದೇ ರೀತಿ ಈ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಟ್ ಆತಂಕದ ನಡುವೆಯೂ ಕೂಡ ರಿಲೀಸ್ಗೂ ಮುನ್ನ ಕೋಟ್ಯಾಂತರ ರೂಪಾಯಿ ಅಡ್ವಾನ್ಸ್ ಬುಕ್ಕಿಂಗ್ ಮೂಲಕವೇ ಪಡೆದುಕೊಂಡಿದೆ. ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆದ ಒಂದೇ ದಿನದಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಭಾರಿ ಪ್ರಮಾಣದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದಾರೆ. ಈ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿಯೇ ಒಂದೇ ದಿನ ಬರೋಬ್ಬರಿ 1.12 ಕೋಟಿ ಕಲೆಕ್ಷನ್ ಮಾಡಿ ಭಾರತೀಯ ಚಿತ್ರರಂಗದಲ್ಲಿ ಅಚ್ಚರಿ ಮೂಡಿಸಿದೆ.

Leave a Reply

%d bloggers like this: