ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಪೊನ್ನಿಯನ್ ಸೆಲ್ವನ್ ಚಿತ್ರ ಒಂದೇ ವಾರದಲ್ಲಿ ಗಳಿಸಿದ್ದೆಷ್ಟು

ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ತಮಿಳಿನ ಪೊನ್ನಿಯನ್ ಸೆಲ್ವನ್ ಪಾರ್ಟ್1 ಸಿನಿಮಾ. ಬರೋಬ್ಬರಿ 300 ಕೋಟಿ ವೆಚ್ಚದಲ್ಲಿ ತಯಾರಾದ ಕಲ್ಕಿ ಕೃಷ್ಣಮೂರ್ತಿ ಅವರ ಈ ಪೊನ್ನಿಯನ್ ಸೆಲ್ವನ್ ಕಾದಂಬರಿ ಆಧಾರಿತ ಸಿನಿಮಾ ಟ್ರೇಲರ್ ಅಂಡ್ ಹಾಡುಗಳ ಮೂಲಕ ಭಾರಿ ಸದ್ದು ಮಾಡಿ ಅಪಾರ ನಿರೀಕ್ಷೆ ಹುಟ್ಟು ಹಾಕಿತ್ತು. ಅದ್ರಂತೆ ಕಳೆದ ಸೆಪ್ಟೆಂಬರ್ 30ರಂದು ವರ್ಲ್ಡ್ ವೈಡ್ ರಿಲೀಸ್ ಆದ ಪೊನ್ನಿಯನ್ ಸೆಲ್ವನ್ ಸಿನಿಮಾ ಎಲ್ಲಾ ಕಡೆ ಅಧ್ಬುತ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊನ್ನಿಯನ್ ಸೆಲ್ವನ್ ಕಾದಂಬರಿಯನ್ನ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಸಿನಿಮಾವನ್ನಾಗಿ ಅಚ್ಚುಕಟ್ಟಾಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ.

ಪೊನ್ನಿಯನ್ ಸೆಲ್ವನ್ ಸಿನಿಮಾ ತಮಿಳು ಸೇರಿದಂತೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿ ಅಭೂತಪೂರ್ವ ಯಶಸ್ಸು ಪಡೆದಿದೆ. ಈ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಬಹುದೊಡ್ಡ ತಾರಗಣವೇ ಇದೆ ಅಂತ ಹೇಳ್ಬೋದು. ತಮಿಳಿನ ಸುಪ್ರಸಿದ್ದ ನಟರಾದ ಚಿಯಾನ್ ವಿಕ್ರಮ್, ಕಾರ್ತಿ, ಜಯರಾಂ ರವಿ, ಬಹುಭಾಷಾ ನಟ ಕನ್ನಡಿಗ ಪ್ರಕಾಶ್ ರಾಜ್, ವಿಕ್ರಮ್ ಪ್ರಭು ಸೇರಿದಂತೆ ಬಾಲಿವುಡ್ ಸೂಪರ್ ಸ್ಟಾರ್ ನಟಿ ಐಶ್ವರ್ಯ ರೈ ಬಚ್ಚನ್, ತ್ರಿಶಾ, ಐಶ್ವರ್ಯ ಲಕ್ಷ್ಮಿ, ಸೋಭಿತಾ ಧೂಳಿಪಾಲ ಸೇರಿದಂತೆ ಇನ್ನಿತರರು ತಮ್ಮ ತಮ್ಮ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ. ಈ ಚಿತ್ರ ಇದೀಗ ಹೊಸದೊಂದು ದಾಖಲೆ ಮಾಡಿದೆ.

ಹೌದು ಲೈಕಾ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಾಣವಾದ ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿಬಂದ ಪೊನ್ನಿಯನ್ ಸೆಲ್ವನ್ ಸಿನಿಮಾ ಒಂದೇ ವಾರದಲ್ಲಿ ಬರೋಬ್ಬರಿ ಮುನ್ನೂರಿಪತ್ತೈದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ತಮಿಳಿನ ಸಿನಿಮಾರಂಗದಲ್ಲಿ ಇದೊಂದು ದಾಖಲೆ ಆಗಿದೆ. ರಜಿನಿಕಾಂತ್ ಅವರ 2.0, ಎಂಥಿರನ್, ಕಬಾಲಿ, ವಿಜಯ್ ಅವರ ಬಿಗಿಲ್, ಕಮಲ್ ಹಾಸನ್ ವಿಕ್ರಮ್ ಸಿನಿಮಾಗಳು ಮುನ್ನೂರು ಕೋಟಿ ಕ್ಲಬ್ ಸೇರಿ ದಾಖಲೆ ಮಾಡಿದ್ದವು. ಇದೀಗ ಈ ದಾಖಲೆಯನ್ನ ಸೈಡ್ ಲೈನ್ ಮಾಡಿ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಸಿನಿಮಾ ಭರ್ಜರಿಯಾಗಿ ಬಾಕ್ಸ್ ಅಫೀಸ್ ಧೂಳಿಪಟ ಮಾಡುತ್ತಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾದ ಯಶಸ್ಸು ಇದೀಗ ತಮಿಳು ಸಿನಿಮಾರಂಗದಲ್ಲಿ ಮತ್ತಷ್ಟು ಸ್ಟಾರ್ ನಟರಿಗೆ ಭಾರಿ ಪೈಪೋಟಿ ನೀಡಿದೆ.

Leave a Reply

%d bloggers like this: