ಭಾರತರತ್ನ ಪ್ರಶಸ್ತಿ ಪಡೆದ ವ್ಯಕ್ತಿಗೆ ಸರ್ಕಾರದಿಂದ ಏನೆಲ್ಲಾ ಸೌಕರ್ಯಗಳು ಸಿಗತ್ತೆ ಗೊತ್ತಾ, ಈಗಲೂ 99% ಜನರಿಗೆ ಗೊತ್ತಿಲ್ಲ

ಭಾರತ ದೇಶದಲ್ಲಿ ಕಲೆ,ಸಾಹಿತ್ಯ,ಸಾರ್ವಜನಿಕ ಸೇವೆ,ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಭಾರತ ಸರ್ಕಾರ ಅವರ ಸೇವೆಯನ್ನ ಪರಿಗಣಿಸಿ ಕಾಲಾನುಕ್ರಮದಲ್ಲಿ ಪ್ರಶಸ್ತಿ ಪ್ರಧಾನಗಳನ್ನ ಮಾಡಲಾಗುತ್ತದೆ.ಅದರಂತೆ ಭಾರತ ಸರ್ಕಾರ ನೀಡುವ ಈ ಅತ್ಯುನ್ನತ ಪ್ರಶಸ್ತಿಗಳು ಸಾಧಕರಿಗೆ ಯಾವೆಲ್ಲಾ ಸೌಲಭ್ಯಗಳನ್ನ ನೀಡುತ್ತದೆ ಎಂದು ತಿಳಿಯುವುದಾದರೆ. ಭಾರತ ಸರ್ಕಾರ ಇದುವರೆಗೆ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನ 48 ಮಹಾನ್ ಸಾಧಕರಿಗೆ ಪ್ರಧಾನ ಮಾಡಲಾಗಿದೆ.ಕೆಲವು ಸಾಧಕರಿಗೆ ಸೂಕ್ತ ಸಂಧರ್ಭ ಸಮಯ ಅವಧಿಯಲ್ಲಿ ಪ್ರಶಸ್ತಿ ಸಿಗದಿದ್ದಲ್ಲಿ ಅಂತಹ ಸಾಧಕರ ನೆನಪಿನಲ್ಲಿ ಮರಣೋತ್ತರವಾಗಿಯೂ ಕೂಡ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಇನ್ನು ಈ ಭಾರತ ರತ್ನ ಪ್ರಶಸ್ತಿಯ ಹಿನ್ನೆಲೆಯನ್ನ ತಿಳಿಯುವುದಾದರೆ.ಈ ಪ್ರಶಸ್ತಿ ಪ್ರಧಾನ ಗೌರವವನ್ನು 1954 ರಲ್ಲಿ ಆರಂಭಿಸಲಾಯಿತು.ಪ್ರಥಮ ಬಾರಿಗೆ ವಿಜ್ಞಾನಿಯಾದ ಚಂದ್ರಶೇಖರ್ ವೆಂಕಟರಮಣ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು.ಬಳಿಕ ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು.ಹೀಗೆ ವಿಜ್ಞಾನಿ ಸಿ.ಎನ್.ರಾವ್,ಪಂಡಿತ್ ಭೀಮ್ ಸೇನ್ ಜೋಶಿ,ಸಚಿನ್ ತೆಂಡುಲ್ಕರ್ ಸೇರಿದಂತೆ 48 ಜನ ಮಹಾನ್ ಸಾಧಕರಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.ಈ ಭಾರತ ರತ್ನ ಪ್ರಶಸ್ತಿ ಪಡೆದ ಸಾಧಕರಿಗೆ ಕೇಂದ್ರ ಸರ್ಕಾರದ ಅಡಿಯಲ್ಲಿರುವ ರೈಲು ಮತ್ತು ಬಸ್ ಸಾರಿಗೆ ವ್ಯವಸ್ಥೆಯಲ್ಲಿ ಉಚಿತ ಪ್ರಯಾಣ ಮಾಡುವ ಸೌಲಭ್ಯವಿದೆ.

Leave a Reply

%d bloggers like this: