ಭಾರತದಲ್ಲಿರುವ ಈಗಿನ IAS ಅಧಿಕಾರಿಗಳಿಗೆ ಸಿಗವ ಸಂಬಳ ಎಷ್ಟು ಗೊತ್ತಾ

ಇತ್ತೀಚೆಗೆ ಬಹಳಷ್ಟು ಯುವಕ-ಯುವತಿಯರಿಗೆ ಐಟಿ-ಬಿಟಿ ಕಾರ್ಪೋರೇಟ್ ಕಂಪನಿಗಳ ಕೆಲಸಗಳಿಗಿಂತ ಹೆಚ್ಚಾಗಿ ಸಿವಿಲ್ ಸರ್ವೆಂಟ್ ಆಗುವ ಕನಸನ್ನ ಹೊಂದಿದ್ದಾರೆ.ಅದರಲ್ಲಿಯೂ ಈ ಐಎಎಸ್ ಹುದ್ದೆಗೆ ಅನೇಕ ಅಭ್ಯರ್ಥಿಗಳು ದೃಷ್ಟಿ ನೆಟ್ಟಿರುತ್ತಾರೆ.ಆದರೆ ಇದಕ್ಕೆ ದೃಷ್ಟಿ ಒಂದೇ ಸಾಕಾಗುವುದಿಲ್ಲ. ಅದಕ್ಕೆ ಅವಿರತ ಶ್ರಮ ಓದು ಅಗತ್ಯ. ಸಮಾಜಕ್ಕೆ ಏನಾದರು ಒಂದು ಕೊಡುಗೆ ನೀಡಬೇಕು.ಬಡ-ಬಗ್ಗರಿಗೆ ಸಹಾಯ ಮಾಡಬೇಕು ಎಂಬ ಸದುದ್ದೇಶ ಇಟ್ಟುಕೊಂಡು ಯುಪಿಎಸ್ ಸಿ ಪರೀಕ್ಷೆಯನ್ನು ಪ್ರತಿವರ್ಷ ಲಕ್ಷಾಂತರ ಮಂದಿ ಬರೆಯುತ್ತಾರೆ.ಆದರೆ ಅದರಲ್ಲಿ ವಿರಳಾತಿವಿರಳ ಅಭ್ಯರ್ಥಿಗಳು ಮಾತ್ರ ಉತ್ತೀರ್ಣರಾಗುತ್ತಾರೆ.ಏಕೆಂದರೆ ಭಾರತೀಯ ಆಡಳಿತ ಸೇವೆ ಪರೀಕ್ಷೆ ಅಷ್ಟು ಸುಲಭವಾದ ಪರೀಕ್ಷೆಯಲ್ಲ.

ಭಾರತದ ಸಂವಿಧಾನ ಈ ಪರೀಕ್ಷೆ ಬರೆದು ಪಾಸ್ ಆದ ಅಭ್ಯರ್ಥಿಗಳಿಗೆ ಅಂತಹ ಗೌರವಾಧಾರವಾದ ಹುದ್ದೆ ಮತ್ತು ಅಧಿಕಾರವನ್ನು ನೀಡಿರುತ್ತದೆ.ಇನ್ನು ಐಎಎಸ್ ಅಧಿಕಾರಿಗಳಿಗೆ ಬರುವ ಸಂಬಳದ ಕಡೆ ಗಮನ ಹರಿಸುವುದಾದರೆ 56,100 ರೂ.ಗಳಿಂದ 2,50,000.ರೂ.ಗಳವರೆಗೆ ಇರುತ್ತದೆ‌.ಇದರ ಜೊತೆಗೆ ಇವರಿಗೆ ಸಕಲ ಸವಲತ್ತುವುಳ್ಳ ಸರ್ಕಾರಿ ಬಂಗಲೆ,ಸಿಬ್ಬಂದಿ ವರ್ಗ,ಕಾರು ಸೇರಿದಂತೆ ಇನ್ನಿತರ ಹೆಚ್ಚುವರಿ ಭಧ್ರತಾ ರಕ್ಷಣೆಗಳನ್ನ ಸರ್ಕಾರ ನೀಡಿರುತ್ತದೆ. ಐಎಎಸ್ ಅಧಿಕಾರಿಗಳಿಗೆ ಮೂವರು ಹೋಮ್ ಗಾರ್ಡ್ ,ಇಬ್ಬರು ಅಂಗರಕ್ಷಕರನ್ನ ನೇಮಿಸಲಾಗಿರುತ್ತದೆ.

ಇನ್ನು ಐಎಎಸ್ ಅಧಿಕಾರಿಗಳು ಜಿಲ್ಲಾಧಿಕಾರಿ ಆದರೆ ಆ ಜಿಲ್ಲೆಯ ಸುಪ್ರೀಂ ಆಗಿ ಅಧಿಕಾರ ಚಲಾಯಿಸ ಬಹುದಾಗಿದೆ.ಇನ್ನು ಇವರು ಬಂಗಲೆಯ ಸಂಪೂರ್ಣ ಖರ್ಚು,ವೆಚ್ಚ,ಕಾರು,ಚಾಲಕ,ವಿದ್ಯುತ್ ಬಿರ್,ನೀರಿನ ಬಿಲ್ ಹೀಗೆ ಎಲ್ಲಾ ರೀತಿಯ ಖರ್ಚು ವೆಚ್ಚಗಳನ್ನ ಸರ್ಕಾರವೇ ಭರಿಸತಕ್ಕದ್ದು.ಕೆಲವರು ಈ ಹುದ್ದೆಗಳಿಗೆ ಐಷಾರಾಮಿ ಬದುಕನ್ನ ಅನುಭವಿಸಲು ಬರುತ್ತಾರೆ.ಆದರೆ ಬಹಳಷ್ಟು ಮಂದಿ ಸಮಾಜ ಸೇವೆಯ ಮನೋಭಾವನೆ ಹೊತ್ತು ಕೂಡ ಈ ಸಾರ್ವಜನಿಕ ಆಡಳಿತ ಸೇವೆಯನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.

Leave a Reply

%d bloggers like this: