ಭಾರತದಲ್ಲಿ ‘ಪೈಲೆಟ್’ ಗಳಿಗೆ ಸಿಗುವ ಸಂಬಳ ಎಷ್ಟು ಗೊತ್ತಾ

ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ದೊಡ್ಡ ಕನಸು ಆಸೆ,ಆಕಾಂಕ್ಷೆಗಳು ಇದ್ದೇ ಇರುತ್ತವೆ. ತಮ್ಮ ಜೀವನದಲ್ಲಿ ಈ ಒಂದು ಆಸೆಯನ್ನ ಈಡೇರಿಸಿಕೊಳ್ಳಲೇಬೇಕು ಎಂಬ ಮಹಾದಾಸೆಯನ್ನ ಹೊಂದಿರುತ್ತಾರೆ.ಅಂತಹ ಆಸೆಗಳಲ್ಲಿ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಕನಸು ಕೂಡ ಒಂದಾಗಿದೆ.ಇಂದು ವಿಮಾನದಲ್ಲಿ ಪ್ರಯಾಣ ಮಾಡುವುದು ದೊಡ್ಡದಾದ ವಿಷಯವೇನಲ್ಲ.ಸಾಮಾನ್ಯವಾದ ವಿಚಾರವೇ ಸರಿ.ಆದರೆ ಇದು ಎಷ್ಟು ಜನಕ್ಕೆ ಮಾತ್ರ ಸಾಧ್ಯವಾಗುತ್ತದೆ.ಈ ವಿಮಾನದಲ್ಲಿ ಪ್ರಯಾಣ ಮಾಡುವುದು ಬಡ-ಮಧ್ಯಮ ವರ್ಗದವರಿಗೆ ಕನಸೇ ಸರಿ.ಇನ್ನು ಈ ವಿಮಾನದೊಳಗೆ ಪ್ರಯಾಣಿಸಬೇಕು ಎಂಬ ಆಸೆ ಒಂದಾದರೆ.ಈ ವಿಮಾನ ಚಲಾಯಿಸುವ ಪೈಲಟ್ ಗಳಿಗೆ ಸಿಗುವ ಸಂಬಳ,ಅವರಿಗೆ ದೊರೆಯುವ ಸಂಬಳ ಎಷ್ಟಿರಬಹುದು,ಪೈಲಟ್ ಆಗುವುದು ಹೇಗೆ,ಅದರ ವಿಧ್ಯಾರ್ಹತೆ ಏನು ಇತ್ಯಾದಿಗಳ ಬಗ್ಗೆ ಹಲವಾರು ಪ್ರಶ್ನೆಗಳ ಕಾಡುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ.

ಯಾವುದೇ ವ್ಯಕ್ತಿ ಹೊರ ದೇಶಗಳಿಗೆ ಹೋಗಬೇಕಾದರೆ ಪಾಸ್ ಪೋರ್ಟ್ ಕಡ್ಡಾಯ.ಜೊತೆಗೆ ವೀಸಾ ಕೂಡ.ಇನ್ನು ಭಾರತದಲ್ಲಿ ಪೈಲಟ್ ಹುದ್ದೆಗೆ ಆಯ್ಕೆ ಆಗಬೇಕಾದರೆ ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಧೃಡರಾಗಿರಬೇಕು.ಹದಿನೇಳು ವಯಸ್ಸು ಪೂರ್ಣ ಆಗಿದ್ದು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 55 ರಷ್ಟು ಅಂಕದೊಂದಿಗೆ ಉತ್ತೀರ್ಣರಾಗಿರಬೇಕು.ಈ ಪೈಲಟ್ ಹುದ್ದೆಗೆ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆಯ ಜೊತೆಗೆ ಒಂದಷ್ಟು ಪಿಜಿ಼ಕಲ್ ಟೆಸ್ಟ್ ಕೂಡ ಎದುರಿಸಬೇಕಾಗಿರುತ್ತದೆ.ಪ್ರಾಥಾಮಿಕವಾಗಿ ಪೈಲೆಟ್ ತರಬೇತಿ ಕೇಂದ್ರದಲ್ಲಿ ಅರ್ಜಿಗಾಗಿ ಆರು ಸಾವಿರ ರೂ.ಗಳನ್ನ ಪಾವತಿಸಿ.

ನಂತರ ಮೂವತ್ತರಿಂದ ನಲವತ್ತು ಲಕ್ಷ ರೂ.ಗಳ ಶುಲ್ಕವನ್ನ ಪಾವತಿಸಬೇಕಾಗಿರುತ್ತದೆ.ಇದು ಉಳ್ಳವರಿಗೆ ಇರುವ ಆಯ್ಕೆಯ ಅವಕಾಶ ಆದರೆ ಬಡ ಪ್ರತಿಭಾವಂತ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರ ಎನ್ ಡಿ ಎ ಪರೀಕ್ಷೆ ನಡೆಸುತ್ತದೆ.ಅದರಲ್ಲಿ ಉತ್ತೀರ್ಣ ಆದರೆ ಅವರ ಸಂಪೂರ್ಣ ಖರ್ಚು-ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.ಇನ್ನು ಭಾರತೀಯ ಪೈಲಟ್ ಗಳಿಗೆ ಒಂದೂವರೆ ಲಕ್ಷದಷ್ಟು ವೇತನ ನೀಡಿದರೆ,ಅಂತರಾಷ್ಟ್ರೀಯ ಪೈಲಟ್ ಗಳಿಗೆ ಐದರಿಂದ ಆರು ಲಕ್ಷದವರೆಗೆ ವೇತನ ಕೊಡಲಾಗುತ್ತದೆ.

Leave a Reply

%d bloggers like this: