ಭಾರತದಲ್ಲಿ ಕೇವಲ ಶುಕ್ರವಾರ ಮಾತ್ರ ಎಲ್ಲಾ ಸಿನೆಮಾಗಳು ಬಿಡುಗಡೆಯಾಗತ್ತೆ ಯಾಕೆ ಗೊತ್ತಾ? ಇಂದಿಗೂ ಎಷ್ಟೋ ಜನರಿಗೆ ಗೊತ್ತೇ ಇಲ್ಲ

ಬಣ್ಣದ ಜಗತ್ತಿನಲ್ಲಿ ತೆರೆ ಮರೆಯಲ್ಲಿದ್ದ ಬೆಳ್ಳಿತೆರೆಯ ವಿಚಾರ ಸಂಗತಿಯೊಂದು ಬೆಳಕಿಗೆ ಬಂದಿದೆ.ಸಿನಿಮಾಗಳು ಈಗ ವಾರದ ಕೊನೆಯ ದಿನದ ಮುನ್ನದಿನವಾಗಿರುವ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಬಿಡಗಡೆ ಆಗುತ್ತವೆ.ಆದರೆ ಚಲನಚಿತ್ರ ಆರಂಭದ ಕಾಲದಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿದ್ದುದ್ದು ಶುಕ್ರವಾರವಲ್ಲ ಸೋಮವಾರದಂದು.ವಾರವೆಲ್ಲಾ ದುಡಿದು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿವಾಗುವ ಮನುಷ್ಯನಿಗೆ ಕೊಂಚ ವಿಶ್ರಾಂತಿ ಮನಃಶಾಂತಿ,ಮನೋಲ್ಲಾಸ ನೀಡುವಂತಹ ಮನರಂಜನೆ ಅಗತ್ಯವಾಗಿರುತ್ತದೆ.ಇದಕ್ಕೆ ಕಲೆ,ಸಂಗೀತ,ನಾಟಕ ಅಂತೆಯೇ ಸಿನಿಮಾ ಕೂಡ ಒಂದು.ವಾರಾಂತ್ಯದಲ್ಲಿ ಹೊಸದಾಗಿ ಬಿಡುಗಡೆಯಾಗುವ ಸಿನಿಮಾ ಗಳಿಗಾಗಿ ಸಿನಿ ಪ್ರೇಕ್ಷಕರು ಕಾಯುತ್ತಾರೆ.ಅಂತೆಯೇ ಭಾರತೀಯ ಚಿತ್ರರಂಗದಲ್ಲಿ ಹಿಂದಿ ಚಿತ್ರಗಳು ಸೋಮವಾರದಂದೇ ರಿಲೀಸ್ ಆಗುತ್ತಿದ್ದವು.ಭಾರತದ ಮೊದಲ ರಿಲೀಸ್ ಆದ ಸಿನಿಮಾ ಆಗಿರುವ ರಾಜ ಹರಿಶ್ಚಂದ್ರ 1913 ರಲ್ಲಿ ಬಿಡುಗಡೆ ಆಯಿತು.ಈ ಸಿನಿಮಾದಿಂದ 1960 ರಲ್ಲಿ ತೆರೆ ಕಂಡಂತಹ ಮೊಘಲ್ ಎ ಅಜಮ್ ಚಿತ್ರ ಬಿಡುಗಡೆವರೆಗೆ ಸಿನಿಮಾಗಳು ಇಂತಿತ್ತ ದಿನದಲ್ಲಿಯೇ ಬಿಡುಗಡೆ ಆಗಬೇಕು ಎಂಬ ನಿಯಮವನ್ನು ರೂಪಿಸಿಕೊಂಡಿರಲಿಲ್ಲ.

ಸಾಮಾನ್ಯಾವಾಗಿ ಆಗ ಬಾಲಿವುಡ್ ಚಿತ್ರಗಳು ಸೋಮವಾರದಂದೇ ಬಿಡುಗಡೆ ಆಗುತ್ತಿದ್ದವು.ಅಂದಿನ ಹಿಂದಿಯ ಅನೇಕ ಕಪ್ಪು-ಬಿಳುಪಿನ ಸಿನಿಮಾಗಳು ಇಂದಿಗೂ ಸಿನಿ ಪ್ರೇಕ್ಷಕರನ್ನ ಕಾಡುತ್ತವೆ.ಅಷ್ಟರ ಮಟ್ಟಿಗೆ ಆ ಸಿನಿಮಾಗಳು ಸಿನಿ ರಸಿಕರನ್ನ ರಂಜಿಸಿವೆ. ಒಂದೊಂದು ಹಾಡುಗಳು ಕೂಡ ತನ್ನ ಮಾಧುರ್ಯದಿಂದ ಕಿವಿ ಹಿಂಪಾಗಿಸುತ್ತವೆ.ಅಂದಿನ ಬಾಲಿವುಡ್ ಸಿನಿಮಾಗಳು ತುಂಬಾ ಚೆನ್ನಾಗಿದ್ದರು ಕೂಡ ವಾಣಿಜ್ಯ ವ್ಯಾಪಾರ ನಿರ್ವಹಣೆ ಕಲೆಯನ್ನ ತಿಳಿಯದ ಕಾರಣ ನಿರೀಕ್ಷೆ ಮಾಡಿದಷ್ಟು ಲಾಭ ಗಳಿಸಲು ಸಾಧ್ಯವಾಗಿಲಿಲ್ಲ.ಹಿಂದಿ ಸಿನಿಮಾಗಳು ಸೋಮವಾರದಿಂದ ಶುಕ್ರವಾರ ದಂದು ತೆರೆ ಕಾಣಲು ಪ್ರಮುಖ ಕಾರಣ ಅಂದರೆ 1960 ರಲ್ಲಿ ಬಿಡುಗಡೆಯಾದಂತಹ ಮೊಘಲ್ ಎ ಅಜಮ್ ಚಿತ್ರ ಕಾರಾಣಾಂತರಗಳಿಂದ ಅಂದು ಸೋಮವಾರದ ಬದಲಿಗೆ ಶುಕ್ರವಾರ ತೆರೆಕಾಣುತ್ತದೆ.ಈ ಚಿತ್ರ ಶುಕ್ರವಾರ ತೆರೆಕಂಡು ಭರ್ಜರಿ ಯಶಸ್ಸಿನ ಜೊತೆಗೆ ದಾಖಲೆಯ ಮಟ್ಟದಲ್ಲಿ ಕಲೆಕ್ಷನ್ ಮಾಡಿದ ಕಾರಣ ಈ ಒಂದು ಹೊಸ ಸಂಪ್ರದಾಯ ಆರಂಭವಾಗುತ್ತದೆ.

ವಾರದ ಅಂತ್ಯದ ದಿನಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರ ಉತ್ತಮ ಲಾಭ ತಂದುಕೊಡುತ್ತದೆ ಎಂದು ಸಿನಿಮಾ ಮೇಕರ್ಸ್ ಗಳು ಸೋಮವಾರದ ಬದಲಿಗೆ ಶುಕ್ರವಾರದ ದಿನದಂದೇ ಚಿತ್ರಗಳನ್ನು ರಿಲೀಸ್ ಮಾಡುವ ಸಂಪ್ರದಾಯವನ್ನು ಬೆಳೆಸಿಕೊಂಡು ಬರುತ್ತಾರೆ.ಉತ್ತರ ಭಾರತದ ಸಿನಿಮಾದ ಈ ಸಂಪ್ರದಾಯವನ್ನೇ ಇಂದು ಭಾರತೀಯ ಚಿತ್ರರಂಗ ಪಾಲಿಸಿಕೊಂಡು ಬರುತ್ತಿದೆ.ದಕ್ಷಿಣ ಭಾರತದ ಸಿನಿಮಾಗಳು ಕೂಡ ಶುಕ್ರವಾರದಂದೇ ಚಿತ್ರ ಬಿಡುಗಡೆ ಮಾಡುತ್ತಾರೆ. ಹಬ್ಫ-ಹರಿದಿನ,ವಿಶೇಷ ದಿನಗಳಂದು ಗಮನದಲ್ಲಿಟ್ಟುಕೊಂಡು ಚಿತ್ರ ಬಿಡುಗಡೆ ಮಾಡುತ್ತಾರೆ.ಕನ್ನಡದ ಮೊಟ್ಟ ಮೊದಲ ಸಿನಿಮಾ ಅಂದರೆ ಅದು ಸತೀ ಸುಲೋಚನ.ಈ ಚಿತ್ರ 1934 ರಲ್ಲಿ ತೆರೆ ಕಾಣುತ್ತದೆ.