ಭಾರತದ ತ್ರಿವರ್ಣ ಧ್ವಜದಿಂದ ಉಕ್ರೇನ್ ನಲ್ಲಿ ಬದುಕಿಳಿದ ಪಾಕಿಸ್ತಾನಿ ವಿದ್ಯಾರ್ಥಿಗಳು

ಉಕ್ರೇನ್ ಮತ್ತು ರಷ್ಯಾ ದೇಶದ ನಡುವಿನ ರಣರಂಗದಲ್ಲಿ ಭಾರತದ ತ್ರಿವರ್ಣ ಧ್ವಜ ಬಣ್ಣದ ಬಟ್ಟೆ ಹೊದ್ದು ಭಾರತದ ವಿಧ್ಯಾರ್ಥಿಗಳ ಜತೆ ಪಾಕಿಸ್ತಾನ ಮತ್ತು ಟರ್ಕೀಸ್ ವಿಧ್ಯಾರ್ಥಿಗಳು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತ್ತೀಚೆಗೆ ಆಕ್ರಮಣ ಪೀಡಿತ ಉಕ್ರೇನ್ ದೇಶದಿಂದ ಭಾರತಕ್ಕೆ ಬಂದ ಕೆಲವು ವಿಧ್ಯಾರ್ಥಿಗಳು ಭಾರತದ ರಾಯಭಾರಿ ಕಛೇರಿ ನಮಗೆ ಸೂಕ್ತವಾದ ಮಾಹಿತಿ ನೆರವು ನೀಡಲಿಲ್ಲ ಎಂದು ಭಾರತದ ಎಂಬೆಸ್ಸಿ ಕಾರ್ಯದ ವಿರುದ್ದ ಅಸಮಾಧಾನ ಹೊರ ಹಾಕಿದ್ದರು. ಇದರಿಂದ ನಿಜಕ್ಕೂ ಕೂಡ ಕೇಂದ್ರ ಸರ್ಕಾರದ ಕಾರ್ಯ ವೈಖರಿ ಬಗ್ಗೆ ಕೆಲವು ಗೊಂದಲ ಕೂಡ ಮೂಡಿತು. ಇದೀಗ ಇದಕ್ಕೆ ವಿರುದ್ಧವಾದ ಅನುಭವಗಳನ್ನ ಉಕ್ರೇನ್ ದೇಶದಿಂದ ಬಂದಂತಹ ಭಾರತದ ವಿಧ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದದಿಂದಾಗಿ ಜಾಗತಿಕ ಶಾಂತಿ ಕದಡುತ್ತಿದೆ. ಮೆಡಿಕಲ್ ಸೇರಿದಂತೆ ಇನ್ನಿತರ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಉಕ್ರೇನ್ ಹೋಗಿದ್ದಂತಹ ಭಾರತ ಸೇರಿದಂತೆ ಅನೇಕ ದೇಶದ ವಿಧ್ಯಾರ್ಥಿಗಳಿಗೆ ಇದೀಗ ಆತಂಕ ಎದುರಾಗಿದೆ.

ರಷ್ಯಾ ದೇಶ ಉಕ್ರೇನ್ ದೇಶದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಈಗಾಗಲೇ ಉಭಯ ದೇಶಗಳ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೂ ಕೂಡ ಈ ಮಾತುಕತೆಯ ಸಂಧಾನ ಸಭೆ ಯಶಸ್ವಿಯಾಗದೆ ಯುದ್ದ ನಡೆಯುತ್ತಿದೆ. ಉಕ್ರೇನ್ ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಬಂದಿಳಿದ ಭಾರತದ ವಿಧ್ಯಾರ್ಥಿಗಳು ಭಾರತದ ತ್ರಿವರ್ಣ ಧ್ವಜ ಬಣ್ಣದ ಸ್ಪ್ರೇ ಪೇಂಟ್ ಬಳಸಿ ಬಟ್ಟೆ ಮೈ ಮೇಲೆ ಹೊದ್ದು ಕೊಂಡು ಬಂದಂತಹ ನಮಗೆ ಯಾವುದೆ ರೀತಿಯ ತೊಂದರೆ ಆಗಲ್ಲ. ಗಡಿ ಭಾಗಗಳಲ್ಲಿ ಭಾರತದ ವಿಧ್ಯಾರ್ಥಿಗಳಾಗಿ ನೆರವು ಕೂಡ ಸಿಗುತ್ತಿದೆ.ಇದೇ ರೀತಿ ಭಾರತ ತ್ರಿ ವರ್ಣ ಧ್ವಜದ ಬಣ್ಣದ ಸ್ಪ್ರೇ ಪೇಂಟ್ ಬಳಸಿ ಬಟ್ಟೆಯ ಮೇಲೆ ತ್ರಿವರ್ಣಧ್ವಜ ರಚಿಸಿ ಹೊದ್ದುಕೊಂಡು ಪಾಕಿಸ್ತಾನ ಮತ್ತು ಟರ್ಕೀಸ್ ವಿಧ್ಯಾರ್ಥಿಗಳು ಕೂಡ ಉಕ್ರೇನ್ ಗಡಿ ಭಾಗದಿಂದ ಯಾವುದೇ ಬಗೆಯ ತೊಂದರೆ ಇಲ್ಲದೆ ಅವರವರ ದೇಶಕ್ಕೆ ಮರಳಿದ್ದಾರೆ ಎಂದು ಭಾರತದ ಆಪರೇಶನ್ ಗಂಗಾ ಯೋಜನೆಯ ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿಳಿದ ಒಡಿಸ್ಸಾದ ವಿಧ್ಯಾರ್ಥಿ ಗಳು ತಿಳಿಸಿದ್ದಾರೆ.

ಇನ್ನು ಭಾರತದ ವಿಧ್ಯಾರ್ಥಿಗಳಿಗೆ ಮೊಲ್ಡೊವನ್ ನಾಗರೀಕರು ಉಚಿತ ವಸತಿ, ಟ್ಯಾಕ್ಸಿ ಸೇರಿದಂತೆ ಆಹಾರ ನೀಡಿ ತುಂಬಾ ನೆರವಾಗಿದ್ದಾರೆ ಎಂದು ವಿಧ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಭಾರತದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಮನವಿಯ ಮೇರೆಗೆ ಭಾರತದ ವಿಧ್ಯಾರ್ಥಿಗಳು ಭಾರತಕ್ಕೆ ಸ್ಥಳಾಂತರ ಆಗುವುದಕ್ಕೆ ಅವಕಾಶ ಮಾಡಿಕೊಡಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆರು ಗಂಟೆಗಳ ಕಾಲ ಉಕ್ರೇನ್ ಮೇಲಿನ ದಾಳಿಯನ್ನು ಸ್ದಗಿತಗೊಳಿಸಲಾಗಿತ್ತು ಎಂದು ವರದಿ ಕೂಡ ಆಗಿದೆ.

Leave a Reply

%d bloggers like this: