ಭಾರತದ ಟಾಪ್ ನಟರ ಪಟ್ಟಿ ಬಿಡುಗಡೆ, ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಎಷ್ಟನೇ ಸ್ಥಾನ ಗೊತ್ತೇ

ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟರ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ಒಬ್ಬ ನಟ ಭಾರತದ ಟಾಪ್ ನಟರ ಸಾಲಿಗೆ ಸೇರ್ಪಡೆಯಾಗಿದ್ದಾರಂತೆ. ಓರಾಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ವೆಬ್ ಸೈಟ್ ಈ ಒಂದು ಪಟ್ಟಿಯನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಅತ್ಯಂತ ಜನಪ್ರಿಯ ನಟರಲ್ಲಿ ತಮಿಳು ಚಿತ್ರರಂಗದ ದಳಪತಿ ವಿಜಯ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇವರ ನಟನೆಯ ಬೀಸ್ಟ್ ಸಿನಿಮಾ ಯಶ್ ಅವರ ಕೆಜಿಎಫ್2 ಚಿತ್ರದ ಎದುರು ಸೋತು ಸುಣ್ಣವಾಯಿತು. ಆದರೂ ಕೂಡ ದಳಪತಿ ವಿಜಯ್ ತಮ್ಮ ಸಿನಿಮಾ ಸೋತರು ತಮ್ಮ ಸ್ಟಾರ್ ಢಮ್ ಉಳಿಸಿಕೊಂಡಿದ್ದಾರೆ. ಇನ್ನು ಇವರ ನಂತರ ಎರಡನೇ ಸ್ಥಾನದಲ್ಲಿ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರು ಇದ್ದಾರೆ.

ಬಾಹುಬಲಿ ಸಿನಿಮಾದ ನಂತರ ಇವರಿಗೆ ದೇಶಾದ್ಯಂತ ಅಪಾರ ಜನಪ್ರಿಯತೆ ಸೃಷ್ಟಿಯಾಗಿದೆ. ಮೂರನೇ ಸ್ಥಾನದಲ್ಲಿ ಆರ್.ಆರ್.ಆರ್ ಸಿನಿಮಾದ ಮುಖಾಂತರ ತಮ್ಮ ಮೈಲೇಜ್ ಜಾಸ್ತಿ ಮಾಡಿಕೊಂಡ ಜ್ಯೂನಿಯರ್ ಎನ್.ಟಿ.ಆರ್ ಇದ್ದಾರೆ. ಪುಷ್ಪಾ ಸಿನಿಮಾದಲ್ಲಿ ಮಾಸ್ ನಟನೆಯ ಮೂಲಕ ಅಲ್ಲು ಅರ್ಜುನ್ ದೇಶಾದ್ಯಂತ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡು ಟಾಪ್ ನಟರ ಪೈಕಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ. ಕೆಜಿಎಫ್ ಚಿತ್ರದ ಮೂಲಕ ನ್ಯಾಶನಲ್ ಸ್ಟಾರ ಆದ ಯಶ್ ಕೆಜಿಎಫ್ ಚಾಪ್ಟರ್2 ಸಿನಿಮಾದ ನಂತರ ರಾಷ್ಟ್ರ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡರು.

ಕೆಜಿಎಫ್ ಚಾಪ್ಟರ್2 ಸಿನಿಮಾ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಬರೋಬ್ಬರಿ 1300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣ ಮಾಡಿದೆ. ಈ ಮೂಲಕ ಯಶ್ ಯಾರೆಂದು ಉತ್ತರ ಭಾರತದ ಮೂಲೆ ಮೂಲೆಗಳಲ್ಲಿಯೂ ಪರಿಚಯವಾಗಿದೆ. ಇಂದು ಯಶ್ ಅವರನ್ನ ಆ ಭಾಗದಲ್ಲಿ ರಾಕಿಬಾಯ್ ಅಂತಾನೇ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಯಶ್ ಅವರು ದೇಶಾದ್ಯಂತ ಅಲ್ಲದೆ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ. ಇನ್ನು ಟಾಪ್ ಮೋಸ್ಟ್ ನಟರ ಸಾಲಿನಲ್ಲಿ ಕ್ರಮವಾಗಿ ಆರನೇ ಸ್ಥಾನದಲ್ಲಿ ರಾಮ್ ಚರಣ್ ತೇಜಾ, ಏಳನೇ ಸ್ಥಾನದಲ್ಲಿ ಮಹೇಶ್ ಬಾಬು ಇದ್ರೆ ಅಕ್ಷಯ್ ಕುಮಾರ್, ಎಂಟನೇ ಸ್ಥಾನದಲ್ಲಿದ್ದಾರೆ. ಸೂರ್ಯ ಒಂಭತ್ತನೇ ಸ್ಥಾನ ಮತ್ತು ಅಜಿತ್ ಕುಮಾರ್ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.

Leave a Reply

%d bloggers like this: