ಭಾರತದ ಟಾಪ್ 250 ಚಿತ್ರಗಳ ಪೈಕಿ ಮೊದಲ ಸ್ಥಾನ ಪಡೆದು ದಾಖಲೆ ನಿರ್ಮಿಸಿದ ಕಾಂತಾರ ಚಿತ್ರ

ಮಗದೊಂದು ದಾಖಲೆ ಮಾಡಿ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೀರ್ತಿ ತಂದ ಕನ್ನಡದ ಕಾಂತಾರ ಸಿನಿಮಾ. ಈಗಾಗಲೇ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ವರ್ಲ್ಢ್ ವೈಡ್ ಅದ್ದೂರಿಯಾಗಿ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಿಲೀಸ್ ಆಗಿ ಎರಡು ವಾರಗಳು ಕಳೆದರು ಕೂಡಾ ಕಾಂತಾರ ಸಿನಿಮಾ ಎಲ್ಲಾ ಸೆಂಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಪ್ರೇಕ್ಷಕರು ಭಾಷೆಯ ಅಂಗಿಲ್ಲದೆ ಅತ್ಯುತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೇವಲ ಸಾಮಾನ್ಯ ಪ್ರೇಕ್ಷಕರು ಮಾತ್ರ ಅಲ್ಲದೆ ಕಾಂತಾರ ಸಿನಿಮಾವನ್ನ ಭಾರತೀಯ ಚಿತ್ರರಂಗದ ದಿಗ್ಗಜ ನಟ ನಟಿಯರು ಕೂಡ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಬಾಲಿವುಡ್ ಸ್ಟಾರ್ಸ್ ಗಳಾದ ರಾಮ್ ಗೋಪಾಲ್ ವರ್ಮಾ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಸೇರಿದಂತೆ ಸೌತ್ ಸಿನಿರಂಗದ ಖ್ಯಾತ ನಟರಾದ ಧನುಷ್, ಸೂರ್ಯ, ರಾಣಾ ದಗ್ಗುಬಾಟಿ, ನಾನಿ, ಜಗ್ಗೇಶ್ ಅವರನ್ನ ಒಳಗೊಂಡಂತೆ.

ಕನ್ನಡದ ಬಹುತೇಕ ಎಲ್ಲಾ ಕಲಾವಿದರು ಕಾಂತಾರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರಿಷಬ್ ಶೆಟ್ಟಿ ಅಂಡ್ ಟೀಮ್ ಗೆ ಶುಭ ಹಾರೈಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕೇವಲ ಹತ್ತನ್ನೆರಡು ಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ಇಂದು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಇನ್ನೂ ಕೂಡ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಕಾಂತಾರ ಸಿನಿಮಾ ಕಳೆದ ಸೆಪ್ಟೆಂಬರ್ 30 ರಂದು ದೇಶಾದ್ಯಂತ ಅದ್ದೂರಿಯಾಗಿ ಕನ್ನಡ ಭಾಷೆಯಲ್ಲಿಯೇ ರಿಲೀಸ್ ಆಗಿತ್ತು. ಚಿತ್ರಕ್ಕೆ ಭಾರಿ ಮೆಚ್ಚುಗೆ ಮತ್ತು ಪರಭಾಷಿಕರಿಂದನೂ ಕೂಡ ಬೆಂಬಲ ವ್ಯಕ್ತವಾದ ಕಾರಣ ತದ ನಂತರ ಕಾಂತಾರ ಸಿನಿಮಾವನ್ನ ಇನ್ನಿತರೆ ಭಾಷೆಗಳಲ್ಲಿ ಸಹ ರಿಲೀಸ್ ಮಾಡಲಾಯಿತು. ಇಂದು ಕಾಂತಾರ ಸಿನಿಮಾ ಪಂಚ ಭಾಷೆಗಳಲ್ಲಿ ವರ್ಲ್ಡ್ ವೈಡ್ ರಾರಾಜಿಸುತ್ತಿದೆ.

ಈಗಾಗಲೇ ಬುಕ್ ಮೈ ಶೋ ನಲ್ಲಿ ಅತಿ ಹೆಚ್ಚು ಮೆಚ್ಚುಗೆ ಮತ್ತು ಅತಿ ಹೆಚ್ಚು ವೀಕ್ಷಣೆ ಪಡೆದ ಸಿನಿಮಾ ಎಂಬ ಹೆಸರಿಗೆ ಪಾತ್ರವಾಗಿದೆ. ಇದೀಗ ಮತ್ತೊಂದು ದಾಖಲೆಯನ್ನ ಕಾಂತಾರ ಸಿನಿಮಾ ತನ್ನ ಮುಡಿಗೇರಿಸಿಕೊಂಡಿದೆ. ಅದೇನಪ್ಪಾ ಅಂದರೆ ಪ್ರತಿಷ್ಟಿತ ಸಿನಿಮಾ ಜಾಲತಾಣ ಆಗಿರೋ ಐಎಂಡಬಿ ನಡೆಸಿದ ಟಾಪ್ 250 ಭಾರತದ ಪ್ರಸಿದ್ದ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದ ಸಿನಿಮಾ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಅದರ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಕನ್ನಡದ ಆರನೇ ಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ. ಕೆಜಿಎಫ್, ಕೆಜಿಎಫ್2, ಜೇಮ್ಸ್, 777 ಚಾರ್ಲಿ, ವಿಕ್ರಾಂತ್ ರೋಣ ಈಗ ಕಾಂತಾರ ಸಿನಿಮಾ ನೂರು ಕೋಟಿ ಕ್ಲಬ್ ಸೇರಿ ಐಎಂಡಿಬಿಯಲ್ಲಿ ಕೂಡ ಟಾಪ್ 250 ಸಿನಿಮಾಗಳ ಪೈಕಿ ಅಗ್ರಸ್ಥಾನ ಪಡೆದುಕೊಂಡಿದೆ.

Leave a Reply

%d bloggers like this: