ಭಾರತದ ಟಾಪ್ 10 ನಟರ ಪಟ್ಟಿ ಬಿಡುಗಡೆ, ಮುಂದಿನ ಚಿತ್ರ ಘೋಷಣೆಯೇ ಆಗಿಲ್ಲ ಆದರೂ ಯಶ್‌ ಅವರಿಗೆ ಎಷ್ಟನೇ ಸ್ಥಾನ ಗೊತ್ತಾ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಓರಾ ಮ್ಯಾಕ್ಸ್ ಹೊರಡಿಸರೋ ಫೇಮಸ್ ನಟರ ಪೈಕಿ ಎಷ್ಟನೇ ಸ್ಥಾನ ಪಡೆದಿದ್ದಾರೆ ಗೊತ್ತಾ. ಯಶ್ ಅವರಿಗೆ ಸಿಕ್ಕ ಸ್ಥಾನ ಅವರ ಅಭಿಮಾನಿಗಳಿಗೆ ಖುಷಿಯ ಜೊತೆಗೆ ಕೆಲವು ಅಭಿಮಾನಿಗಳು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ಯಾಕೆ ಅನ್ನೋದನ್ನ ತಿಳಿಯೋಣ. 2021-22 ರಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟರ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ಒಬ್ಬ ನಟ ಭಾರತದ ಟಾಪ್ ನಟರ ಸಾಲಿಗೆ ಸೇರ್ಪಡೆಯಾಗಿದ್ದಾರಂತೆ. ಓರಾಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ವೆಬ್ ಸೈಟ್ ಈ ಒಂದು ಪಟ್ಟಿಯನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಅತ್ಯಂತ ಜನಪ್ರಿಯ ನಟರಲ್ಲಿ ತಮಿಳು ಚಿತ್ರರಂಗದ ದಳಪತಿ ವಿಜಯ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇವರ ನಟನೆಯ ಬೀಸ್ಟ್ ಸಿನಿಮಾ ಯಶ್ ಅವರ ಕೆಜಿಎಫ್2 ಚಿತ್ರದ ಎದುರು ಸೋತು ಸುಣ್ಣವಾಯಿತು. ಆದರೂ ಕೂಡ ದಳಪತಿ ವಿಜಯ್ ತಮ್ಮ ಸಿನಿಮಾ ಸೋತರು ತಮ್ಮ ಸ್ಟಾರ್ ಢಮ್ ಉಳಿಸಿಕೊಂಡಿದ್ದಾರೆ. ಇನ್ನು ಇವರ ನಂತರ ಎರಡನೇ ಸ್ಥಾನದಲ್ಲಿ ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರು ಇದ್ದಾರೆ. ಬಾಹುಬಲಿ ಸಿನಿಮಾದ ನಂತರ ಇವರಿಗೆ ದೇಶಾದ್ಯಂತ ಅಪಾರ ಜನಪ್ರಿಯತೆ ಸೃಷ್ಟಿಯಾಗಿದೆ. ಮೂರನೇ ಸ್ಥಾನದಲ್ಲಿ ಆರ್.ಆರ್.ಆರ್ ಸಿನಿಮಾದ ಮುಖಾಂತರ ತಮ್ಮ ಮೈಲೇಜ್ ಜಾಸ್ತಿ ಮಾಡಿಕೊಂಡ ಜ್ಯೂನಿಯರ್ ಎನ್.ಟಿ.ಆರ್ ಇದ್ದಾರೆ. ಪುಷ್ಪಾ ಸಿನಿಮಾದಲ್ಲಿ ಮಾಸ್ ನಟನೆಯ ಮೂಲಕ ಅಲ್ಲು ಅರ್ಜುನ್ ದೇಶಾದ್ಯಂತ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡು ಟಾಪ್ ನಟರ ಪೈಕಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಐದನೇ ಸ್ಥಾನದಲ್ಲಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ.

ಕೆಜಿಎಫ್ ಚಿತ್ರದ ಮೂಲಕ ನ್ಯಾಶನಲ್ ಸ್ಟಾರ ಆದ ಯಶ್ ಕೆಜಿಎಫ್ ಚಾಪ್ಟರ್2 ಸಿನಿಮಾದ ನಂತರ ರಾಷ್ಟ್ರ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡರು. ಕೆಜಿಎಫ್ ಚಾಪ್ಟರ್2 ಸಿನಿಮಾ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಬರೋಬ್ಬರಿ 1300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣ ಮಾಡಿದೆ. ಈ ಮೂಲಕ ಯಶ್ ಯಾರೆಂದು ಉತ್ತರ ಭಾರತದ ಮೂಲೆ ಮೂಲೆಗಳಲ್ಲಿಯೂ ಪರಿಚಯವಾಗಿದೆ. ಇಂದು ಯಶ್ ಅವರನ್ನ ಆ ಭಾಗದಲ್ಲಿ ರಾಕಿಬಾಯ್ ಅಂತಾನೇ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಯಶ್ ಅವರು ದೇಶಾದ್ಯಂತ ಅಲ್ಲದೆ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ. ಇನ್ನು ಟಾಪ್ ಮೋಸ್ಟ್ ನಟರ ಸಾಲಿನಲ್ಲಿ ಕ್ರಮವಾಗಿ ಆರನೇ ಸ್ಥಾನದಲ್ಲಿ ರಾಮ್ ಚರಣ್ ತೇಜಾ, ಏಳನೇ ಸ್ಥಾನದಲ್ಲಿ ಮಹೇಶ್ ಬಾಬು ಇದ್ರೆ ಅಕ್ಷಯ್ ಕುಮಾರ್, ಎಂಟನೇ ಸ್ಥಾನದಲ್ಲಿದ್ದಾರೆ. ಸೂರ್ಯ ಒಂಭತ್ತನೇ ಸ್ಥಾನ ಮತ್ತು ಅಜಿತ್ ಕುಮಾರ್ ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.

ಇಲ್ಲಿ ಯಶ್ ಅವರ ಅಭಿಮಾನಿಗಳಿಗೆ ಅಸಮಾಧಾನ ಆಗಿರೋದಕ್ಕೆ ಕಾರಣ ಏನಪ್ಪಾ ಅಂದರೆ ಯಶ್ ಅವರು ಐದನೇ ಸ್ಥಾನಕ್ಕಿಂತ ನಾಲ್ಕು ಅಥವಾ ಮೂರನೇ ಸ್ಥಾನಕ್ಕೆ ಅರ್ಹರಿದ್ದರು ಎಂಬುದಕ್ಕೆ. ಯಶ್ ಕೆಜಿಎಫ್ ಚಿತ್ರದ ಮೂಲಕ ವರ್ಲ್ಢ್ ವೈಡ್ ಸಖತ್ ಶೈನ್ ಆಗಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಅಲ್ಲಿ ಸಾಕಷ್ಟು ಬಾರಿ ಹುಡುಕಾಟ ನಡೆಸಿದ್ದಾರೆ. ಅಷ್ಟರ ಮಟ್ಟಿಗೆ ಅಪಾರ ಜನಪ್ರಿಯತೆ ಪಡೆದಿರೋ ನಟ ಯಶ್‌. ತಮಿಳಿನ ವಿಜಯ್ ನಂತರ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಕ್ರೇಜ಼್ ಪಡೆದುಕೊಂಡ ನಟರಾಗಿ ಯಶ್ ಸಖತ್ ಶೈನ್ ಆಗಿರೋವಾಗ ಅವರಿಗೆ ಪ್ರಭಾಸ್ ನಂತರದ ಸ್ಥಾನವನ್ನಾದರು ನೀಡಬಹುದಿತ್ತು ಅನ್ನೋದು ಅವರ ಅಭಿಮಾನಿಗಳ ನಿರೀಕ್ಷೆ ಆಗಿತ್ತು. ಏನೇ ಆದ್ರೂ ಕೂಡ ಯಶ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಟಾಪ್ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿರೋದು ನಿಜಕ್ಕೂ ಕೂಡ ಸಂತಸದ ವಿಚಾರ ಅಂತಾನೇ ಹೇಳ್ಬೋದು.

Leave a Reply

%d bloggers like this: