ಭಾರತದ ಮೊಟ್ಟಮೊದಲ ಮಹಿಂದ್ರಾ ಕಾರು ಪಡೆದ ಖ್ಯಾತ ಮಹಿಳಾ ಕುಸ್ತಿ ಪಟು

ಆಟೋಮೊಬೈಲ್ ಕಾರು ಮಾರುಕಟ್ಟೆ ಕ್ಷೇತ್ರದಲ್ಲಿ ಬಿಗ್ ಡ್ಯಾಡಿ ಆಫ್ ಎಸ್ಯುವಿ ಅಂತಾನೇ ಕರೆಸಿಕೊಳ್ಳೋ ಮಹೀಂದ್ರಾ ಸ್ಕಾರ್ಪಿಯೋ ಎನ್ ಹೊಸ ಕಾರನ್ನ ವಿತರಣೆ ಮಾಡಲು ಕಂಪನಿ ಆರಂಭ ಮಾಡಿದೆ. ಮಹೀಂದ್ರಾ ಕಂಪನಿ ನವರಾತ್ರಿ ದಸರಾ ಹಬ್ಬದ ಪ್ರಯುಕ್ತ ಈ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎನ್ ಕಾರನ್ನ ಸರಿ ಸುಮಾರು ಏಳು ಸಾವಿರ ಯುನಿಟ್ ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕಾರನ್ನ ಖರೀದಿ ಮಾಡಲು ಕಾರು ಪ್ರಿಯರು ಬಹಳ ಕಾತುರದಲ್ಲಿದ್ದರು. ಅಡ್ವಾನ್ಸ್ ಬುಕ್ಕಿಂಗ್ ಕೂಡ ತೆರೆಯಲಾಗಿತ್ತು. ಅಚ್ಚರಿ ಏನಪ್ಪಾ ಅಂದರೆ ಒಂದೇ ದಿನದಲ್ಲಿಯೇ ಈ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎನ್ ಕಾರು ಬರೋಬ್ಬರಿ ಇಪ್ಪತ್ತೈದು ಸಾವಿರ ಕಾರುಗಳು ಬುಕ್ಕಿಂಗ್ ಪಡೆದುಕೊಂಡಿದ್ದವು. ಕಂಪನಿ ತಿಳಿಸೋ ಪ್ರಕಾರ ಈ ಕಾರು ಎರಡು ವರ್ಷಗಳ ಅವಧಿವರೆಗೆ ಆಗುವಷ್ಟು ಬೇಡಿಕೆ ಉಂಟಾಗಿದೆಯಂತೆ.

ಪೂರೈಕೆ ಕೂಡ ಅಷ್ಟೇ ಸವಾಲಾಗಿದೆಯಂತೆ ಕಂಪನಿಗೆ. ಇದೇ ಕಳೆದ ಜುಲೈ ತಿಂಗಳಿನಲ್ಲಿ ಕೇವಲ ಅರ್ಧಗಂಟೆಯಲ್ಲೇ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಮಹೀಂದ್ರಾ ನ್ಯು ಸ್ಕಾರ್ಪಿಯೋ ಎನ್ ಕಾರು ಮುಂಗಡ ಕಾಯ್ದಿರುಸುವಿಕೆ ಆಗಿದ್ದವು. ಇನ್ನು ಇದೀಗ ಈ ಮಹೀಂದ್ರಾ ನ್ಯು ಸ್ಕಾರ್ಪಿಯೋ ಎನ್ಎಸ್ಯುವಿ ಕಾರು ಮೊಟ್ಟ ಮೊದಲು ಕೈ ಸೇರಿರೋದು ಯಾರಿಗೆ ಗೊತ್ತಾ. ಅದೂ ಕೂಡ ಒಬ್ಬ ಕ್ರೀಡಾಪಟುವಿಗೆ ಅನ್ನೋದು ವಿಶೇಷ. ಈ ಲಕ್ಕಿ ಕ್ರೀಡಾಪಟು ಬೇರಾರು ಅಲ್ಲ. ಗೀತಾ ಪೋಗಟ್. 2010ರ ಕಾಮನ್ ವೆಲ್ತ್ ಕ್ರೀಡಾಕೂಟದ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಕುಸ್ತಿ ಕ್ರೀಡಾಪಟು ಈ ಗೀತಾ ಪೋಗಟ್. ಗೀತಾ ಪೋಗಟ್ ಅವರು ಒಲಂಪಿಕ್ ಸಂಮರ್ ಗೇಮ್ಸ್ ಇದಕ್ಕಾಗಿ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿ ಕ್ರೀಡಾಪಟು ಎಂಬ ಕೀರ್ತಿಗೂ ಸಹ ಗೀತಾ ಪಾತ್ರರಾಗಿದ್ದಾರೆ.

ಹೌದು ಗೀತಾ ಪೋಗಟ್ ಅವರು ಈ ಮಹೀಂದ್ರಾ ಸ್ಕಾರ್ಪಿಯೋ ಎನ್ಎಸ್ಯುವಿ ಕಾರನ್ನ ಖರೀದಿ ಮಾಡಿದ್ದಾರೆ. ಮೊಟ್ಟ ಮೊದಲ ಕಾರು ಇವರಿಗೇನೇ ಸಿಕ್ಕಿದೆ. ಈ ಮಹೀಂದ್ರಾ ನ್ಯೂಎನ್ ಹೊಚ್ಚ ಹೊಸ ಕಾರನ್ನ ಖರೀದಿ ಮಾಡಿದ ಮೊದಲ ಗ್ರಾಹಕಿಯಾದ ಗೀತಾ ಪೋಗಟ್ ಅವರು ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರಿಗೆ ಇಂತಹ ವಿಸ್ಮಯಕಾರಿ ಕಾರು ತಯಾರಿಸದಕ್ಕಾಗಿ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಆನಂದ್ ಮಹೀಂದ್ರಾ ಅವರು ಕೂಡಾ ಇದೊಂದು ಬೋನಸ್. ಗೀತಾ ಪೋಗಟ್ ಸ್ಕಾರ್ಪಿಯೋ ಎನ್ ಕಾರಿನ ನಮ್ಮ ಮೊದಲ ಗ್ರಾಹಕರಾಗಿದ್ದು ನಮ್ಮ ಸೌಭಾಗ್ಯ. ನಾವು ನಿಮ್ಮ ಚಿನ್ನದ ಪದಕದ ಗತವೈಭವದಲ್ಲಿ ಸೇರಿಕೊಂಡಿದ್ದೇವೆ. ನಮ್ಮ ಈ ಮಹೀಂದ್ರಾ ಎನ್ ಕಾರು ನಿಮ್ಮಷ್ಟೇ ಬಲಿಷ್ಠವಾಗಿದೆ ಎಂದು ತಿಳಿಸಲು ನಾವು ಹೆಮ್ಮೆ ಪಡುತ್ತೇವೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Reply

%d bloggers like this: